ಬೆಳಗಾವಿ:ಕ್ರಿಯೇಟಿವಿಟಿ ಅನ್ನೋದು ಮದ್ವೆ ಆಮಂತ್ರಣ ಪತ್ರಿಕೆಯ್ಲಲೂ ಭಾರಿ ಸದ್ದು ಮಾಡುತ್ತಿದೆ. ಆಧಾರ ಕಾರ್ಡ್, 2 ಸಾವಿರ ರೂಪಾಯಿ ನೋಟು, ಪಡಿತರ ಚೀಟಿ, ದಿನ ಪತ್ರಿಕೆ, ಮ್ಯಾಗಝೈನ್​, ಲವ್​ ಬರ್ಡ್​, ಹೂವು, ಆಭರಣದ ಬಾಕ್ಸ್​ ಮಾದರಿಯ ಆಮಂತ್ರಣ ಪತ್ರಿಗಳನ್ನು ಇದುವರೆಗೂ ನೋಡಿದ್ದೀರಿ. ಇದೀಗ ಬೆಳಗಾವಿಯಲ್ಲಿ ನವಜೋಡಿಯೊಂದು ವಿನೂತನವಾಗಿ ಆಮಂತ್ರಣ ಪತ್ರಿಕೆ ನೀಡಿ ಮದ್ವೆಗೆ ಆಹ್ವಾನಿಸುತ್ತಿದೆ. ಆ ಇನ್ವಿಟೇಷನ್​ ಕಾರ್ಡ್​ನಲ್ಲೇನಿದೆ ವಿಶೇಷ ಅಂತೀರಾ?
ಬೆಳಗಾವಿಯ ಅನಗೋಳದ ನಿವಾಸಿ ಧರ್ಮರಾಜ್ ಪಾಟೀಲ್ ಮತ್ತು ರೀಚಿತಾ ಮದುವೆ ಫೆ.28ರಂದು ನಿಶ್ಚಯವಾಗಿದ್ದು, ಈ ಜೋಡಿ ವಿಮಾನ ಪ್ರಯಾಣಿಕರ ಪಾಸ್ ಪೋರ್ಟ್-ಬೋರ್ಡಿಂಗ್ ಪಾಸ್ ಕೊಟ್ಟು ಸಂಬಂಧಿಕರು ಮತ್ತು ಸ್ನೇಹಿತರನ್ನು ಮದ್ವೆಗೆ ಆಹ್ವಾನಿಸುತ್ತಿದೆ.
ಅರೆ, ಮದ್ವೆಗೆ ಬನ್ನಿ ಅಂತ ಪಾಸ್​ಪೋರ್ಟ್​ ಕೊಟ್ಟು ಕರೀತಿದ್ದಾರಾ ಎಂದು ಉಬ್ಬೇರಿಸಬೇಡಿ. ಇದು ಪಾಸ್​ಪೋರ್ಟ್ ಮತ್ತು ಬೋರ್ಡಿಂಗ್ ಪಾಸ್ ಮಾದರಿಯಲ್ಲಿರುವ ಮದ್ವೆ ಆಮಂತ್ರಣ ಪತ್ರಿಕೆ! ಬೋರ್ಡಿಂಗ್ ಪಾಸ್, ವೆಡ್ಡಿಂಗ್​ ಏರ್​ಲೈನ್​, ಪಾಸ್​ಪೋರ್ಟ್ to ಮ್ಯಾರೇಜ್, ಸೀಟ್-ವಿಐಪಿ, ಪ್ಯಾಸೆಂಜರ್ ನೇಮ್…, ಬೋರ್ಡಿಂಗ್ ಟೈಮ್ (ಮುಹೂರ್ತ ಸಮಯ), ಡೆಸ್ಟಿನೇಷನ್, ಲೋಕೇಷನ್ (ಮದ್ವೆ ನಡೆಯುವ ಸ್ಥಳ) ಎಲ್ಲವನ್ನೂ ಡಿಫರೆಂಟ್​ ಆಗಿ ಮುದ್ರಿಸಿದ್ದಾರೆ. ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.


ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

ಮೊನ್ನೆ ನಾಯಿ ಮೇಲೆ ಅತ್ಯಾಚಾರ, ನಿನ್ನೆ ಭಿಕ್ಷುಕಿ ಮೇಲೆ ಕಾಮುಕರ ಅಟ್ಟಹಾಸ

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 10 =
Remember me
