| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರುಸಬ್​ ರಿಜಿಸ್ಟ್ರಾರ್​ ಕಚೇರಿಗಳ ಸೇವೆಗೆ ವೇಗ, ಲಂಚದ ಆರೋಪದಿಂದ ಮುಕ್ತಿ, ದಲ್ಲಾಳಿಗಳ ಹಾವಳಿಗೆ ಬ್ರೇಕ್​ ಹಾಕಲು ಕಾವೇರಿ 2.0 ತಂತ್ರಾಂಶ ಬಳಕೆಗೆ ಬರಲಿದೆ. ಪಾಸ್​ಪೋರ್ಟ್​ ಮಾದರಿ ಸೇವೆ ಒದಗಿಸಲು ಉಪ ನೋಂದಣಿ ಕಚೇರಿಗಳಲ್ಲಿ ಹೊಸ ಸ್ಟ್​ಾವೇರ್​ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 260 ಸಬ್​ ರಿಜಿಸ್ಟ್ರಾರ್​ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ದಿನಕ್ಕೆ ಅಂದಾಜು 10 ಸಾವಿರ ದಾಖಲೆ ಪತ್ರಗಳ ನೋಂದಣಿ, ದೃಢೀಕರಣ ಪತ್ರಗಳ ಸೇವೆ ಒದಗಿಸುತ್ತಿವೆ. ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ 3ನೇ ಅತೀ ದೊಡ್ಡ ಇಲಾಖೆ ಎಂಬುದು ನೋಂದಣಿ ಮತ್ತು ಮುದ್ರಾಂಕ ಸೇವೆಯ ಹೆಗ್ಗಳಿಕೆ.
ಪ್ರತಿದಿನ ಸಾವಿರಾರು ಜನರು ಕಚೇರಿಗೆ ಒಂದಿಲ್ಲೊಂದು ಸೇವೆಗೆ ಭೇಟಿ ಕೊಡುತ್ತಾರೆ. ಆದರೆ, ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಲಂಚದ ಆರೋಪ, ಮತ್ತೊಂದೆಡೆ ಕಾವೇರಿ 1.0 ಆವೃತ್ತಿಯಲ್ಲಿನ ಸರ್ವರ್​ ಸಮಸ್ಯೆ ಕಪ್ಪುಚುಕ್ಕೆಯಾಗಿವೆ. ಜತೆಗೆ, ಕಂದಾಯ ಇಲಾಖೆಗೂ ಇದೊಂದು ದೊಡ್ಡ ಸವಾಲಾಗಿತ್ತು.ಇದೀಗ ಅಧಿಕಾರಿ, ಸಿಬ್ಬಂದಿ ಮೇಲಿದ್ದ ಆರೋಪಗಳನ್ನು ನಿವಾರಿಸಿ, ದಲ್ಲಾಳಿಗಳನ್ನು ದೂರವಿಟ್ಟು ಜನಸ್ನೇಹಿ ಸೇವೆಗೆ ಕಂದಾಯ ಇಲಾಖೆ ಸಂಕಲ್ಪ ತೊಟ್ಟಿದೆ. ಇದರ ಪರಿಕಲ್ಪನೆಯೇ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಅಳವಡಿಸಿರುವ ಕಾವೇರಿ 1.0 ಸಾಫ್ಟ್​ವೇರ್​ ಅನ್ನು ಕಾವೇರಿ 2.0 ತಂತ್ರಾಂಶಕ್ಕೆ ಅಪ್​ಗ್ರೇಡ್​ ಮಾಡುವುದು. ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶವನ್ನು ನೋಂದಣಿ ಉಪಮಹಾಪರಿವೀಕ್ಷಕರ (ಆಡಳಿತ) ಕೇಂದ್ರ ಕಚೇರಿ ಕೆ.ಎನ್​. ವಿಮಲ ನೇತೃತ್ವದ ಹಿರಿಯ ಉಪ ನೋಂದಣಾಧಿಕಾರಿಗಳು ಒಳಗೊಂಡ 26 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಇದೀಗ ಫೆಬ್ರವರಿ 2ರಿಂದ ಚಿಂಚೋಳಿ, ಮಂಡ್ಯ, ಮೈಸೂರು, ರಾಮನಗರ, ಮಂಗಳೂರು ಮತ್ತು ಬೆಳಗಾವಿಯಲ್ಲಿ ಇದನ್ನು ಪ್ರ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತದೆ. ಮೂರು ತಿಂಗಳ ಕಾಲ ಸಾಧಕ&ಬಾಧಕಗಳ ಪರಿಶೀಲನೆ ನಡೆಸಿ ಅದರಲ್ಲಿನ ಲೋಪದೋಷ ಮತ್ತು ಜನಸ್ನೇಹಿ ಸೇವೆಗೆ ಯಾವ ಅಂಶಗಳು ಬೇಕೆಂಬುದರ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಲಿದೆ. ಆನಂತರ ಅಗತ್ಯ ಇರುವ ಅಂಶಗಳನ್ನು ಬದಲಾವಣೆ ತಂದು ಮೇ 1ರಿಂದ ರಾಜ್ಯದ ಎಲ್ಲ ಸಬ್​ ರಿಜಿಸ್ಟ್ರಾರ್​ ಕಚೇರಿಗಳಲ್ಲಿ ಹೊಸ ಆವೃತ್ತಿಯ, ಮೇಲ್ದರ್ಜೆಗೇರಿಸಿದ ತಂತ್ರಾಂಶ ಜಾರಿಗೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂತಲ್ಲಿಯೇ ನೋಂದಣಿ:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ವೆಬ್​ಸೈಟ್​ನಲ್ಲಿ ಲಾಗಿನ್​ ಆಗಿ ಕ್ರಯ, ಕರಾರು, ದಾನ, ಒಪ್ಪಂದ, ವಿಲ್​ ಸೇರಿದಂತೆ ನಮಗೆ ಯಾವ ಸೇವೆ ಬೇಕೆಂಬುದು ಆಯ್ಕೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ದಾಖಲೆಗಳನ್ನು ಅಪ್​ಲೋಡ್​ ಮಾಡಬೇಕು. ಸಂಬಂಧಪಟ್ಟ ಉಪ ನೋಂದಣಾಧಿಕಾರಿಯು ಆನ್​ಲೈನ್​ನಲ್ಲಿ ದಾಖಲೆ ಪರಿಶೀಲನೆ ನಡೆಸಿ ಮಾರ್ಗಸೂಚಿ ದರದ ಆಧಾರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಎಷ್ಟು ಎಂಬುದನ್ನು ತಿಳಿಸಲಿದ್ದಾರೆ. ಮತ್ತೆ ಆನ್​ಲೈನ್​ನಲ್ಲಿಯೇ ಅರ್ಜಿದಾರ, ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಕೆ2 ಚಲನ್​ನಲ್ಲಿ ಪಾವತಿಸಿ ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಬೇಕು. ಅದನ್ನು ಮತ್ತೆ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಎಲ್ಲವೂ ಸರಿ ಇದ್ದರೆ ದಿನಾಂಕ, ಸಮಯ ಮತ್ತು ಕಂಪ್ಯೂಟರ್​ ಆಪರೇಟರ್​ ಅನ್ನು ನಿಗದಿ ಮಾಡಲಿದ್ದಾರೆ. ಆನ್​ಲೈನ್​ನಲ್ಲಿ ಮಾಹಿತಿ ಪಡೆದು ಅರ್ಜಿದಾರ ಮತ್ತು ಸಂಬಂಧಪಟ್ಟವರು ನಿಗದಿತ ಸಮಯಕ್ಕೆ ಕಂಪ್ಯೂಟರ್​ ಆಪರೇಟರ್​ ಮುಂದೆ ಹೋಗಿ ೋಟೋ ಮತ್ತು ಬೆರಳಚ್ಚು ಕೊಟ್ಟು ನೋಂದಣಿ ಮಾಡಿಸಬೇಕು. ಬಳಿಕ ಎಲ್ಲರೂ ಸಹಿ ಮಾಡಿಕೊಟ್ಟ ದಾಖಲೆಗಳನ್ನು ಸ್ಕಾ$ನ್​ ಮಾಡಿ ಆನ್​ಲೈನ್​ನಲ್ಲಿ ಅಪ್​ಲೋಡ್​ ಮಾಡಲಿದ್ದಾರೆ. ಡಿಜಿಟಲ್​ ಸಹಿ ಒಳಗೊಂಡ ದಾಖಲೆಗಳನ್ನು ಅರ್ಜಿದಾರ ಡೌನ್​ಲೋಡ್​ ಮಾಡಿಕೊಳ್ಳಬಹುದು. ಅಲ್ಲಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಂತಾಗಲಿದೆ.
ಅನುಕೂಲಗಳೇನು?* ಸಬ್​ ರಿಜಿಸ್ಟ್ರಾರ್​ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್​* ಆನ್​ಲೈನ್​ನಲ್ಲಿ ಸೇವೆ ಕಾರಣ ಅಧಿಕಾರಿಗಳಿಗೆ ಲಂಚ ಕೊಡುವಂತಿಲ್ಲ* ದಿನವಿಡಿ ಕಾಯುವ ಬದಲು ನಿಗದಿತ ಸಮಯಕ್ಕೆ ಹೋದರೆ ಸಾಕು* ಏಜೆಂಟ್​ಗಳ ಸಹಾಯ ಇಲ್ಲದೇ ಆನ್​ಲೈನ್​ನಲ್ಲಿ ಸೇವೆ ಸಿಗಲಿದೆ* ಸಾರ್ವಜನಿಕರು ಕಚೇರಿಗಳಿಗೆ 2&3 ಬಾರಿ ಅಲೆಯುವುದು ತಪ್ಪಲಿದೆ* ಕಾವೇರಿ 2.0 ತಂತ್ರಾಂಶದಿಂದ ಸರ್ವರ್​ ಸಮಸ್ಯೆ ಬಗೆಹರಿಯಲಿದೆ* ನಕಲಿ ದಾಖಲೆ ಸಲ್ಲಿಸಿ ಭೂ ಕಬ್ಜ ಮಾಡುತ್ತಿದ್ದವರಿಗೂ ಕಡಿವಾಣ ಬೀಳಲಿದೆ
ಎಲ್ಲಿ ಪ್ರಾಯೋಗಿಕ ಬಳಕೆ?ಮಂಡ್ಯ ಮೈಸೂರು ರಾಮನಗರಮಂಗಳೂರು ಬೆಳಗಾವಿಚಿಂಚೋಳಿ
ದಾಖಲೆಗೆ ಡಿಜಿಟಲ್​ ಸಹಿಕಾವೇರಿ 2.0 ತಂತ್ರಾಂಶ ಬಂದ ಮೇಲೆ ಎಲ್ಲ ಸೇವೆಗಳನ್ನು ಆನ್​ಲೈನ್​ನಲ್ಲಿ ಪಡೆಯಬಹುದು. ದೃಢೀಕರಣ ಪ್ರಮಾಣ ಪತ್ರ (ಸಿಸಿ) ಡಿಜಿಟಲ್​ ಸಹಿ ಜತೆ ಆನ್​ಲೈನ್​ನಲ್ಲಿ ಸಿಗಲಿದೆ. ಅಗತ್ಯವಿರುವಾಗಲೆಲ್ಲ ಇದನ್ನು ಡೌನ್​ಲೋಡ್​ ಮಾಡಿಕೊಂಡು ಬಳಕೆ ಮಾಡಿಕೊಳ್ಳಬಹುದು. ಕಳೆದು ಹೋದರೆ ಚಿಂತಿಸುವ ಭಯ ಇರುವುದಿಲ್ಲ. ಮುಖ್ಯ ವಿಚಾರವೆಂದರೆ, ಒಮ್ಮೆ ಶುಲ್ಕ ಪಾವತಿ ಮಾಡಿದರೆ ಪದೇಪದೆ ಸಿಸಿ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಸಬ್​ ರಿಜಿಸ್ಟ್ರಾರ್​ ಕಚೇರಿಗಳಲ್ಲಿ ದಾಖಲೆ ಪತ್ರಗಳನ್ನು ಸಂರಕ್ಷಣೆ ಮಾಡುವ ತಲೆನೋವು ಇರುವುದಿಲ್ಲ. ಎಲ್ಲವೂ ಸರ್ವರ್​ನಲ್ಲಿ ಸಂಗ್ರಹವಾಗಿರುತ್ತದೆ.
ಕಾವೇರಿ 2.0 ತಂತ್ರಾಂಶವನ್ನು ಸಾಕಷ್ಟು ಅಧ್ಯಯನ ನಡೆಸಿ ಅಳವಡಿಸಲಾಗಿದೆ. ನಕಲಿ ದಾಖಲೆ ಕೊಟ್ಟು ನೋಂದಣಿ ಮಾಡಿರುವ ಭೂಗಳ್ಳರಿಗೂ ಕಡಿವಾಣ ಬೀಳಲಿದೆ. ಕೆಲವೇ ನಿಮಿಷದಲ್ಲಿ ನೋಂದಣಿ ಸೇವೆ ಪಡೆಯಬಹುದು. ನೋಂದಣಿ ದಾಖಲೆ ಪತ್ರಗಳನ್ನು ಸಹ ಜನರಿಗೆ ಕೊಡುವುದಿಲ್ಲ. ಬದಲಿಗೆ ಅವರಿಗೆ ಕೋಡ್​ ನಂಬರ್​ ಕೊಡಲಾಗುತ್ತದೆ. ಕಾವೇರಿ ವೆಬ್​ಸೈಟ್​ನಲ್ಲಿ ಲಾಗಿನ್​ ಆಗಿ ಕೋಡ್​ ನಂಬರ್​ ಬಳಸಿ ದೃಢೀಕೃತ ದಾಖಲೆ ಡೌನ್​ಲೋಡ್​ ಮಾಡಿಕೊಳ್ಳಬೇಕು. ದಾಖಲೆ ಅಸಲಿತನ ಸಹ ಪರಿಶೀಲನೆ ನಡೆಸುವ ವಿನೂತನ ಸ್ಟ್​ಾವೇರ್​ ಇದಾಗಿದೆ.
| ಆರ್​. ಅಶೋಕ್​ ಕಂದಾಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
