ಬೆಂಗಳೂರು:ರಾಜ್ಯದ ಎಂಟು ಸ್ಥಳಗಳಲ್ಲಿರುವ ಅಂಚೆ ಕಚೇರಿಗಳಲ್ಲಿ ಸೇವೆ ಒದಗಿಸುತ್ತಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್‌ಕೆ) ಶನಿವಾರವೂ ಗ್ರಾಹಕರಿಗೆ ತೆರೆದಿರುತ್ತದೆ.
ಹೆಚ್ಚಿನ ಜನರಿಗೆ ಸಕಾಲದಲ್ಲಿ ಪಾಸ್‌ಪೋರ್ಟ್ ಸೇವೆ ಒದಗಿಸಲು ಇಂಥದ್ದೊಂದು ಉಪಕ್ರಮಕ್ಕೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮುಂದಾಗಿದೆ. ಈ ನಿರ್ಧಾರದಿಂದಾಗಿ ನಿತ್ಯ ಹೆಚ್ಚಿನ ಗ್ರಾಹಕರಿಗೆ ಪಾಸ್‌ಪೋರ್ಟ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗಲಿದೆ.
ಬೆಂಗಳೂರು (ಜಾಲಹಳ್ಳಿ), ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಹಾಸನ, ಬಳ್ಳಾರಿ, ವಿಜಯಪುರ ಹಾಗೂ ಬೀದರ್ ಪಿಒಪಿಎಸ್‌ಕೆಗಳು ಶನಿವಾರವೂ ಸೇವೆ ಒದಗಿಸಲಿವೆ. ಇದರಿಂದಾಗಿ ರಾಜ್ಯದ ವಿವಿಧೆಡೆ ಇರುವ ಸೇವಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ 500ಕ್ಕೂ ಅಧಿಕ ಮಂದಿಗೆ ಸೌಲಭ್ಯ ಸಿಗಲಿದೆ ಎಂದು ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಾಳೆ ಯಾರ್ಯಾರ ಪ್ರಮಾಣವಚನ ಸ್ವೀಕಾರ?; ಇಲ್ಲಿದೆ ನೂತನ ಸಚಿವರ ಅಧಿಕೃತ ಪಟ್ಟಿ
ಪ್ರಸ್ತುತ ರಾಜ್ಯದಲ್ಲಿರುವ ಪಾಸ್‌ಪೋರ್ಟ್ ಕಚೇರಿಗಳಲ್ಲಿ ಸೇವೆ ಪಡೆಯಲು ಮುಂಚಿತವಾಗಿ ಸಮಯ ನಿಗದಿ ಮಾಡಿಕೊಳ್ಳಬೇಕಾಗುತ್ತದೆ. ಅಪಾಯಿಂಟ್‌ಮೆಂಟ್ ಪಡೆಯಲು 15 ದಿನಗಳಿಗೂ ಹೆಚ್ಚು ಕಾಲ ಹಿಡಿಯುತ್ತದೆ. ಇದರಿಂದ ನಾಗರಿಕರಿಗೆ ತ್ವರಿತವಾಗಿ ಸೇವೆ ಲಭಿಸಲು ಸಾಧ್ಯವಾಗದು. ಶನಿವಾರ ಹಾಗೂ ಭಾನುವಾರ ಈ ಕೇಂದ್ರಗಳಿಗೆ ರಜೆ ಇದ್ದ ಕಾರಣ ವಾರಾಂತ್ಯದಲ್ಲಿ ಆಗಮಿಸುವ ಗ್ರಾಹಕರು ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ:VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..
ಈ ಸಮಸ್ಯೆ ನಿವಾರಿಸಲು ಪಿಒಪಿಎಸ್‌ಕೆಗಳಲ್ಲಿ ಶನಿವಾರವೂ ಕೆಲಸದ ದಿನವೆಂದು ಪರಿಗಣಿಸುವುದರಿಂದ ವಾರಾಂತ್ಯದಲ್ಲಿ ರಜೆ ಹಾಕಿ ಪಾಸ್‌ಪೋರ್ಟ್ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಹೊಸದಾಗಿ ಸೇವೆ ನೀಡುವ ಕೇಂದ್ರಗಳು ಇತರ ಸಾಮಾನ್ಯ ದಿನಗಳಂತೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರ ವರೆಗೆ ನಾಗರಿಕರಿಗೆ ಸೌಲಭ್ಯ ಒದಗಿಸಲಿವೆ.
ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
