ವಾರೆ ವಾರೆ ಬಾರೆ ಬಾರೆಬಿಂದಗೆಯ ಮೊರೆ ತೋರೆಬಾರೆ ನನ್ನ ಕುರುಬನ ರಾಣಿs ಏಯ್sಕೋಟಿ ಕೋಟಿ ಚುಕ್ಕಿ ತಾರೆಎಲ್ಲ ಸೇರಿ ಎರಕಹುಯ್ದಾನನ್ನ ಬೊಂಬೆ ಕಿಲ ಕಿಲ ವಾಣಿs ಹಹ….
ಈ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅದು ನಟ ಶಿವರಾಜ್​ಕುಮಾರ್​ಮತ್ತು ನಗ್ಮಾ ಅಭಿನಯದ ವಿಡಿಯೋ ಅಲ್ಲ, ಕಾಲು ಮುರಿದರೂ ನೋವಿನ ಪರಿವೇ ಇಲ್ಲದೆ ಆಸ್ಪತ್ರೆಯ ಆಪರೇಶನ್​ ಥಿಯೇಟರ್​ನಲ್ಲಿ ಬೆಡ್​ ಮೇಲೆ ಮಲಗಿರುವ ರೋಗಿಯೊಬ್ಬ ‘ಬಾರೆ ಬಾರೆ ಕುರುಬನ ರಾಣಿ’ ಹಾಡಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ!
ಇದನ್ನೂ ಓದಿರಿಕರೊನಾಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೀರಾ? ಹಾಗಿದ್ದಲ್ಲಿ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ
‘ಬಾರೆ ಬಾರೆ ಕುರುಬನ ರಾಣಿ’ ಸಾಂಗ್​ ಅಂದ್ರೆ ಈ ವ್ಯಕ್ತಿಗೆ ಅದೆಷ್ಟು ಇಷ್ಟವೋ ಪದಗಳಲ್ಲಿ ಹೇಳಲು ಕಷ್ಟ. ಕಾಲು ಮುರಿದ ನೋವಿನ ಪರಿವೇ ಆಗದಷ್ಟು ಆಪ್ತತೆ ಇದೆ ಆ ವ್ಯಕ್ತಿಗೂ-ಈ ಹಾಡಿಗೂ. ರೋಗಿಯ ಕೋರಿಕೆ ಮೇರೆಗೆ ವೈದ್ಯರೇ ಕುರುಬನ ರಾಣಿ ಹಾಡು ಹಾಕಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನಲಾಗಿದೆ.
ಬಾರೆ ಬಾರೆ ಕುರುಬನ ರಾಣಿ ಹಾಡು ಪ್ಲೇ ಆಗುತ್ತಿದ್ದಂತೆ ಫುಲ್​ ಜೋಶ್​ನಿಂದ ಮಲಗಿದ್ದಲ್ಲೇ ತಾಳಕ್ಕೆ ತಕ್ಕಂತೆ ಕೈಗಳ ಮೂಲಕ ಡಾನ್ಸ್ ಮಾಡುವ ಪರಿ ನೋಡುಗರನ್ನು ಹುಬ್ಬೇರಿಸುವಂತಿದೆ. ನಡುನಡುವೆ ಹಾಡಿಗೆ ತಕ್ಕಂತೆ ‘ಹಹ, ಏಯ್​, ಬಾರೆ ಬಾರೆ’ ಎನ್ನುವ ಅವರ ಉತ್ಸಾಹ ನೋಡುತ್ತಿದ್ದರೆ ಆಶ್ಚರ್ಯದ ಜತೆಗೆ ಇದಪ್ಪಾ ಜೋಶ್ ಅಂದ್ರೆ ಅನ್ನಿಸುತ್ತದೆ.
ಇದು ಯಾವ ಆಸ್ಪತ್ರೆಯಲ್ಲಿ ನಡೆದ ಘಟನೆ, ರೋಗಿ ಯಾರು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಪರೇಶನ್​ ಕೊಠಡಿಯಲ್ಲಿ ಕನ್ನಡ ಮಾತನಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಆ ವಿಡಿಯೋಗಾಗಿ ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.
https://www.facebook.com/VVani4U/videos/617545082222817/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fifteen =
Remember me
