ವಿಜಯಪುರ :ಕರೊನಾ ಕಾಲಘಟ್ಟದಲ್ಲಿ ಕರುಣೆ ಎಂಬುದೇ ಕಾಣೆಯಾಗಿದ್ದು ಸಣ್ಣ ಪುಟ್ಟ ರೋಗಕ್ಕೂ ಜನ ನರಕಯಾತನೆ ಅನುಭವಿಸುವಂತಾಗಿದೆ ಎಂಬುದಕ್ಕೆ ಗುರುವಾರ ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಘಟನೆಯೇ ಸಾಕ್ಷಿ. ಕರೊನಾ ಸೋಂಕು ಇಲ್ಲದಿದ್ದರೂ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಾ ಸತಾಯಿಸುತ್ತಿರುವುದಕ್ಕೆ ರೋಗಿ ಮತ್ತು ಅವರ ಕುಟುಂಬಸ್ಥರು ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಕೆಮ್ಮು ನೆಗಡಿಯಿಂದ ಬಳಲುತ್ತಿರುವ ಮಹಿಳೆಯೋರ್ವಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಆಸ್ಪತ್ರೆ ಆವರಣದ ಫುಟ್‌ಪಾತ್ ಮೇಲೆ ಮಲಗಿದ ದೃಶ್ಯ ಕರಳು ಚುರ್ ಎನ್ನಿಸುವಂತಿತ್ತು. ಬೆಳಿಗ್ಗೆ ಚಿಕಿತ್ಸೆಗೆಂದು ಬಂದ ಮಹಿಳೆಯನ್ನು ದಾಖಲಿಸಿಕೊಳ್ಳದೇ ಸಂಜೆವರೆಗೆ ಕಾಯುವಂತೆ ತಿಳಿಸಿದ ವೈದ್ಯರು ಒಳಗೆ ಕುಳಿತುಕೊಳ್ಳಲು ಸಹ ಅವಕಾಶ ನೀಡಿಲ್ಲವೆಂದು ರೋಗಿ ಅಲವತ್ತುಕೊಂಡರು.
ಇದನ್ನೂ ಓದಿ:ಸೋಂಕಿದ್ದರೂ ನೆಗೆಟೀವ್ ! ಸಿಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು
ಸಂಜೆ 4 ಕ್ಕೆ ವೈದ್ಯರು ಬರಲಿದ್ದು ಅಲ್ಲಿಯವರೆಗೆ ಹೊರಗಡೆ ಕುಳಿತುಕೊಳ್ಳಿ ಎಂದು ಹೊರಗಟ್ಟಿದ್ದಾರೆ. ಫುಟ್‌ಪಾತ್ ಮೇಲೆ ಮಲಗಿದ ರೋಗಿ ಹಲವು ಗಂಟೆಗಳ ಕಾಲ ತೀವ್ರ ಯಾತನೆ ಅನುಭವಿಸಿದ್ದಾರೆ. ಈ ಮೊದಲು ಖಾಸಗಿ ಆಸ್ಪತ್ರೆಗೆ ಅಲೆದಾಡಿದ ರೋಗಿ ಮತ್ತು ಅವರ ಕುಟುಂಬಸ್ಥರು ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಗೆ ಬಂದರೆ, ಇಲ್ಲೂ ಅದೇ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twelve =
Remember me
