ಬೆಂಗಳೂರು:ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು  ದರ್ಶನ್​​ ಅವರು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ದರ್ಶನ್​  ವಿಚರಾಣಧೀನ ಕೈದಿಯಾಗಿ ಬಳ್ಳಾರಿ ಜೈಲಿನಲ್ಲಿ ಸೆರೆವಾಸದಲ್ಲಿದ್ದಾರೆ.   ಪೊಲೀಸರು ಈ ಪ್ರಕರಣದ ಕುರಿತಾಗಿ ಪೊಲೀಸರು ಚಾರ್ಜ್​​ಶಿಟ್​​ ಸಲ್ಲಿಕೆಯಾದ ಬೆನ್ನಲ್ಲೆ  ಈ ಪ್ರಕರಣ ಕುರಿತಾಗಿ ಕೆಲವರು ನೀಡಿದ ಕೇಳಿಕೆಗಳು ಈಗ ಸುದ್ದಿಯಾಗುತ್ತಿವೆ.
ದರ್ಶನ್​​ ಪತ್ನಿ ವಿಜಯಲಕ್ಷ್ಮಿ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿರುವ ಅಂಶಗಳು ಇಲ್ಲಿದೆ.2014ರ ಜುಲೈನಲ್ಲಿ ದರ್ಶನ್ ಮೊಬೈಲ್​ನಲ್ಲಿ ಹುಡುಗಿಯ ಸಂಪರ್ಕ ಇರೋದು ಗೊತ್ತಾಗಿದೆ. ನಿರಂತರ ಸಂಪರ್ಕದಲ್ಲಿದ್ದಿದ್ದರಿಂದ ಪತಿಯ ಮೇಲೆ ಅನುಮಾನ ಬಂದಿತ್ತು. ಸಿನಿಮಾದಲ್ಲಿರೋದ್ರಿಂದ ಯಾವುದೋ ವಿಚಾರಕ್ಕೆ ಕರೆ ಅಂದ್ಕೊಂಡಿದ್ದೆ. 2015ರಲ್ಲಿ ಒಬ್ಬ ಅಪರಿಚಿತ ಮಹಿಳೆ ನನಗೆ ಫೋನ್ ಮಾಡಿದ್ದರು. ನಿಮ್ಮ ಗಂಡ ದರ್ಶನ್ ನನ್ನ ಜೊತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಾರೆ. ಪದೇ ಪದೆ ನಮ್ಮ ಮನೆಗೆ ಬರುತ್ತಿರುತ್ತಾರೆ ಅಂತ ಹೇಳಿದ್ದರು. ನಮ್ಮ ಮನೆಗೆ ಬರದಂತೆ ಬುದ್ಧಿ ಹೇಳಿ ಅಂತಲೂ ಆಕೆ ಹೇಳಿದ್ದಳು. ನನಗೆ ಆಶ್ಚರ್ಯವಾಗಿ, ಅವ್ರಿಗೆ ಬೈದು ಫೋನ್ ಕಟ್ ಮಾಡಿದ್ದೆ ಎಂದು ಹೇಳಿದ್ದಾರೆ.
ಮಹಿಳೆಗೆ ಸಂಬಂಧಿಸಿ ಆಗಾಗ ನನಗೂ, ದರ್ಶನ್​ಗೂ ಜಗಳವಾಗ್ತಿತ್ತು. 2018ರಲ್ಲಿ ದರ್ಶನ್, ಪವಿತ್ರಾಗೆ ಮನೆ ಖರೀದಿಸಿ ಕೊಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ. ಆರ್​ಆರ್​ ನಗರದ ಕೆಂಚೇನಹಳ್ಳಿಯಲ್ಲಿ ಮನೆ ಖರೀದಿಸಿ ಕೊಟ್ಟಿದ್ದಾರೆ. ಅದೇ ವರ್ಷ ರೇಂಜ್​ರೋವರ್ ಕಾರನ್ನೂ ಕೊಟ್ಟ ಬಗ್ಗೆ ಆಪ್ತರಿಂದ ಮಾಹಿತಿ ಇದೆ. ದರ್ಶನ್ ಬಳಿ ಕೇಳಿದಾಗ, ನನ್ನ ದುಡ್ಡು ನನ್ನಿಷ್ಟ ಅಂತ ಹೇಳಿದ್ದರು. ನೀನ್ಯಾರು ಕೇಳೋದಕ್ಕೆ ಅಂತ ದರ್ಶನ್ ನನಗೆ ಬೈದಿದ್ದರು. ಈ ವಿಚಾರದಲ್ಲೂ ನನಗೆ, ದರ್ಶನ್​ಗೂ ವೈಮನಸ್ಸು ಏರ್ಪಟ್ಟಿರುತ್ತದೆ. ಆದ್ರೂ ನಾನು, ಪತಿ ದರ್ಶನ್ ಅನ್ಯೋನ್ಯವಾಗಿಯೇ ಇರುತ್ತಿದ್ದೆವು. ನನ್ನ ಜೊತೆ ಎಂದೂ ಪವಿತ್ರಾ ಗೌಡ ವಿಚಾರವನ್ನ ಹಂಚಿಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
‘ಪವಿತ್ರಾ’ ಬ್ಲ್ಯಾಕ್​ಮೇಲ್ :ನನ್ನ ಆಪ್ತ ವಲಯದಿಂದ ದರ್ಶನ್ ಮತ್ತು ಪವಿತ್ರಾ ಬಗ್ಗೆ ಮತ್ತೆ ಮಾಹಿತಿ ಸಿಕ್ಕಿತ್ತು. ಖಾಸಗಿ ಫೋಟೋ ಮತ್ತು ವಿಡಿಯೋಗಳಿರುವ ಹಾರ್ಡ್​ ಡಿಸ್ಕ್ ಸಿಕ್ಕಿತ್ತು. ಅದನ್ನ ಪವಿತ್ರಾ ಗೌಡ ತನ್ನ ತಾಯಿಯ ಮನೆಯಲ್ಲಿ ಇಟ್ಟುಕೊಂಡಿದ್ದಳು. ಮಾಧ್ಯಮಗಳಿಗೆ ನೀಡೋದಾಗಿ ದರ್ಶನ್​ಗೆ ಬ್ಲ್ಯಾಕ್​ಮೇಲ್ ಮಾಡ್ತಿದ್ಳು. ಈ ವಿಚಾರ ನನಗೆ ನನ್ನ ಆಪ್ತವಲಯದಿಂದ ತಿಳಿದು ಬಂದಿರುತ್ತದೆ ಎಂದು ಹೇಳಿದ್ದಾರೆ.
2024ರ ಜನವರಿ 24ಕ್ಕೆ ದರ್ಶನ್​ಗೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಳು. pavithragowda777 ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು. ದಶಕ ತುಂಬಿದೆ, 10 ವರ್ಷದ ಸಂಬಂಧಕ್ಕೆ ಧನ್ಯವಾದ ಅಂತ ಪೋಸ್ಟ್ ಮಾಡಿದ್ದಳು. ಆಗ ನಾನು ದರ್ಶನ್ ಖಾಸಗಿ ಭಾವಚಿತ್ರಗಳನ್ನ ಬಳಸಬಾರದೆಂದು ದಾವೆ ಹೂಡಿದ್ದೆ.
ಜೂ.9ಕ್ಕೆ ಶೂಟಿಂಗ್​ಗೆ ಹೋಗಬೇಕಂದ್ರು. ತಮ್ಮ ಬಟ್ಟೆ, ಇತರೆ ವಸ್ತುಗಳು ಪ್ಯಾಕ್ ಮಾಡಬೇಕಂತ RR ನಗರ ಮನೆಗೋದ್ರು. ಸಂಜೆ 5ಕ್ಕೆ ಕರೆ ಮಾಡಿ, ಮೈಸೂರಿಗೆ ಹೋಗ್ತಿದ್ದು, ತೋಟಕ್ಕೆ ಹೋಗ್ತೀನಿ ಎಂದಿದ್ದರು.
ಜೂ.11ಕ್ಕೆ ಬೆಳಗ್ಗೆ 9 ಗಂಟೆಗೆ ದರ್ಶನ್ ಕರೆ ಮಾಡಿದ್ದರು, ಪೊಲೀಸರು ಅರೆಸ್ಟ್ ಮಾಡಿದ್ದಾಗಿ ತಿಳಿಸಿದರು. ನಾನು ಗಾಬರಿಯಾಗಿ, ಯಾಕೆ, ಏನಾಯ್ತು ಅಂತ ದರ್ಶನ್​ಗೆ ಕೇಳಿದ್ದೆ. ರಾಜು, ಪವನ್ ಯಾವ್ದೋ ಹುಡುಗನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಹೆಚ್ಚು, ಕಡಿಮೆ ಮಾಡಿದ್ದು ಏನೋ ಆಗೋಗಿದೆ ಅಂತ ದರ್ಶನ್ ಹೇಳಿದರು. ನನ್ನನ್ನ ಇನ್ವೆಸ್ಟಿಗೇಷನ್​ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್, ಮೈಸೂರಿನ ನಾಗುಗೆ ಕರೆ ಮಾಡಿದೆ. ನಾನು ಕರೆ ಮಾಡಿದಾಗ, ಅವರ ಮೊಬೈಲ್​ಗಳು ಸ್ವಿಚ್ ಆಫ್ ಆಗಿದ್ದವು. ದರ್ಶನ್‌ರ ಕಾಸ್ಟ್ಯೂಮ್ ಮ್ಯಾನ್ ನಾಗರಾಜುಗೆ ಕರೆ ಮಾಡಿ, ವಿಚಾರ ಕೇಳಿದೆ. ನನಗೆ ಏನೂ ಗೊತ್ತಿಲ್ಲ, ದರ್ಶನ್​ಗಾಗಿ ಕಾಯುತ್ತಿರೋದಾಗಿ ನನಗೆ ಹೇಳಿದರು. ಟಿವಿ ನೋಡಿದಾಗ, ಕೊಲೆ ಕೇಸ್​ನಲ್ಲಿ ಪೊಲೀಸರು ಅರೆಸ್ಟ್​​ ಮಾಡಿದ್ದು ತಿಳಿಯಿತು. ನಂತ್ರ ಪೊಲೀಸರು ಬಂದು ದರ್ಶನ್​​ಗೆ ಸಂಬಂಧ ಪಟ್ಟ ಕೆಲವು ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಹೋದರು. ಜೂ.19ಕ್ಕೆ ವಿಚಾರಣೆಗೆ ಹಾಜರಾಗಲು ಪೊಲೀಸರಿಂದ ನೋಟಿಸ್ ಜಾರಿ ಮಾಡಿದ್ದರು. ನನ್ನ ಸಂಬಂಧಿ ಅನುಷಾ ಶೆಟ್ಟಿ ಜೊತೆಯಲ್ಲಿ ವಿಚಾರಣೆಗೆ ಬಂದಿದ್ದೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 2 =
Remember me
