ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶೈಕ್ಷಣಿಕ ಸಂಸ್ಥೆಗಳು “ಒಂದು ಪರಿಹಾರ’ಯೋಜನೆಯಡಿ ಶೇ. 25 ಸೇವಾ ಶುಲ್ಕ ಪಾವತಿಸಿ ಯೋಜನೆಯ ಲಾಭ ಪಡೆಯಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಸಲಹೆ ನೀಡಿದ್ದಾರೆ.
ವೈದ್ಯಕಿಯ,ಇಂಜಿನಿಯರಿಂಗ್​ ಕಾಲೇಜು ಸೇರಿ ಇತರೆ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಟೌನ್​ಹಾಲ್​ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ “ಒಂದು ಬಾರಿ ಪರಿಹಾರ’ಯೋಜನೆಯಡಿ ಬಾಕಿ ಇರುವ ಆಸ್ತಿ ತೆರಿಗೆಯಲ್ಲಿ ಸಾಕಷ್ಟು ವಿನಾಯ್ತಿ ನೀಡಲಾಗಿದೆ. 31ಕ್ಕೆ ಯೋಜನೆ ಮುಗಿಯಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಇದರ ಸದುಪಯೋಗ ಪಡೆದು ಬಾಕಿ ಇರುವ ಶೇವಾ ಶುಲ್ಕ ಪಾವತಿಸಬೇಕು. ಶೈಕ್ಷಣಿಕ ಸಂಸ್ಥೆಗಳು ಆಸ್ತಿ ತೆರಿಗೆಯಿಂದ ವಿನಾಯಿತಿ ಕೋರಿ ಶೇ. 25 ಸೇವಾ ಶುಲ್ಕ ಪಾವತಿಸಲು ಅರ್ಜಿ ಸಲ್ಲಿಸಿ ಅನುಮೋದನೆ ನಂತರ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ “ಒಂದು ಬಾರಿ ಪರಿಹಾರ’ ಯೋಜನೆ ಅವಧಿಯಲ್ಲಿ ಶೈಣಿಕ ಸಂಸ್ಥೆಯ ಸ್ವತ್ತುಗಳು ಸರ್ಕಾರದಿಂದ ಮಾನ್ಯತೆ ಪಡೆದಿದ್ದಲ್ಲಿ ಸೇವಾ ಶುಲ್ಕವನ್ನು ಪಾವತಿಸಲು ಶೈಣಿಕ ಉದ್ದೇಶಕ್ಕೆ ಬಳಸುತ್ತಿರುವ ಅವಧಿಯಿಂದ ಪಾವತಿ ಅನ್ವಯವಾಗುವಂತೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಪಾಲಿಕೆ ವಿಶೇಷ ಆಯುಕ್ತ ಮುನೀಶ್​ ಮೌದ್ಗಿಲ್​ ಮಾತನಾಡಿ, ಸರ್ಕಾರದಿಂದ ತಂದಿರುವ “ಒಂದು ಬಾರಿ ಪರಿಹಾರ ಯೋಜನೆ’ ಲಾಭವನ್ನು ಶೈಣಿಕ ಸಂಸ್ಥೆಗಳು ಪಡೆದುಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಾದರಿ ಕಾರ್ಯವಿಧಾನ ನೀಡಲಾಗುವುದು ಎಂದರು. ವಲಯ ಆಯುಕ್ತರಾದ ಕರೀಗೌಡ, ರಮ್ಯಾ, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮೀದೇವಿ, ವಲಯ ಜಂಟಿ ಆಯುಕ್ತರು, ಶೈಣಿಕ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಮತ್ತಿತರರಿದ್ದರು.
ಕಾರಣವಿಲ್ಲದೆ 7ತಿಂಗಳ ಶಿಶು, ದಂಪತಿ ಮೇಲೆ ಗುಂಡುಹಾರಿಸಿದ ಮಹಿಳೆ! ಕೊನೆಗೆ ಏನಾಯ್ತು?
ಚರ್ಚೆಯಾದ ಪ್ರಮುಖ ಅಂಶಗಳು* ಶೈಕ್ಷಣಿಕ ಸಂಸ್ಥೆಗಳು ಈಗಾಗಲೇ ಆಸ್ತಿ ತೆರಿಗೆ ಜಾಲದಲ್ಲಿವೆ. ಸ್ವಯಂ ಘೋಷಣಾ ಪದ್ಧತಿ (ಎಸ್​ಎಎಸ್​) ಅಡಿಯಲ್ಲಿ ಅರ್ಜಿ ಸಂಖ್ಯೆ ಹೊಂದಿರುವ ಪ್ರಕರಣಗಳಲ್ಲಿ ಆನ್​ಲೈನ್​ ಮೂಲಕ ಶೇ. 25 ಸೇವಾ ತೆರಿಗೆ ಪಾವತಿಗೆ ಅವಕಾಶ.* ಈವರೆಗೆ ಆಸ್ತಿ ತೆರಿಗೆ ಪಾವತಿಸದ, ಎಸ್​ಎಎಸ್​ ಅರ್ಜಿ ಸಂಖ್ಯೆ ಹೊಂದಿರದ ಎಲ್ಲ ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಬಾಕಿ ಇರುವ ಸಾಲಿನಿಂದ ಸೇವಾ ಶುಲ್ಕ ಕಟ್ಟಡದ ಅನುಸಾರ ಶೇ.25 ಸೇವಾ ಶುಲ್ಕ ಲೆಕ್ಕಾಚಾರ ಮಾಡಿ ಮನವಿ ಪತ್ರದೊಂದಿಗೆ, ಡಿಡಿ ಹಾಗೂ ಸರ್ಕಾರದಿಂದ ಶೈಕ್ಷಣಿಕ ಸಂಸ್ಥೆಗೆ ಮಾನ್ಯತೆ ಪಡೆದಿರುವ ಪ್ರಮಾಣ ಪತ್ರದೊಂದಿಗೆ ಸಂಬಂಧಪಟ್ಟ ಆಯಾ ವಲಯ ಜಂಟಿ ಆಯುಕ್ತರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ* ಬಿಬಿಎಂಪಿ ಕಾಯ್ದೆಯಲ್ಲಿ 2021-22ನೇ ಸಾಲಿನ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಮೊತ್ತದ ಆಸ್ತಿ ತೆರಿಗೆ ಪಾವತಿ.* ಶೇ.25 ಸೇವಾ ಶುಲ್ಕವನ್ನು ಪಾವತಿಸಬಹುದು.ಬಡ್ಡಿ ಮೊತ್ತಕ್ಕೆ ಸಂಪೂರ್ಣ ವಿನಾಯ್ತಿ .
ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಭಿನ್ನ ಸಮಸ್ಯೆ ಇದೆ. ಕೆಲವೊಮ್ಮೆ ಆನ್​ಲೈನ್​ನಲ್ಲಿ ತೆರಿಗೆ ಪಾವತಿಗೆ ಸಮಸ್ಯೆ ಎದುರಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಆನ್​ಲೈನ್​ನಲ್ಲಿ ಪಾವತಿಸಲು ಸಾಧ್ಯವಿಲ್ಲದವರಿಗೆ ಚೆಕ್​, ಪೇ ಆರ್ಡರ್​, ಡಿಡಿ ಮೂಲಕ ಪಾವತಿಸಲು ಅವಕಾಶ ನೀಡಲಾಗುವುದು. ಆಯಾ ವಲಯ ಜಂಟಿ ಆಯುಕ್ತರಿಗೆ ನಿಮ್ಮ ಸಂಸ್ಥೆಗಳ ಬಾಕಿ ಆಸ್ತಿ ತೆರಿಗೆ ಡಿಡಿ ಸಲ್ಲಿಸಬಹುದು.| ತುಷಾರ್​ ಗಿರಿನಾಥ್​. ಬಿಬಿಎಂಪಿ ಮುಖ್ಯ ಆಯುಕ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
