ಮಂಡ್ಯ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ ಸೃಷ್ಟಿ ಮಾಡಿದ್ದ ಪೇಸಿಎಂ ಅಭಿಯಾನ ಭಾರೀ ಸಂಚಲನ ಉಂಟುಮಾಡಿತ್ತು. ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ತುಂಬಾ ಹಿನ್ನಡೆಯು ಆಯಿತು. ಇದೀಗ ಅದೇ ಅಭಿಯಾನ ಕಾಂಗ್ರೆಸ್​ ಸರ್ಕಾರಕ್ಕೂ ತಟ್ಟಿದೆ. ಆದರೆ, ಈ ಬಾರಿ ಸಚಿವರೊಬ್ಬರನ್ನು ಗುರಿಯಾಗಿಸಿಕೊಂಡು ಅಭಿಯಾನ ನಡೆಸಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರ ಬಂಧನ ಆಗುವುದರೊಂದಿಗೆ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೃಷಿ ಸಚಿವ ಚಲುರಾಯಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಿ ಇತ್ತೀಚೆಗಷ್ಟೇ ರಾಜ್ಯಪಾಲರಿಗೆ ದೂರಿನ ಪತ್ರ ರವಾನೆಯಾಗಿರುವ ಸುದ್ದಿ ಎಲ್ಲೆಡೆ ಚರ್ಚೆಯಾಯಿತು. ಆದರೆ, ಅದು ನಕಲಿ ದೂರಿನ ಪತ್ರ ಎಂದು ಸರ್ಕಾರ ವಾದಿಸಿದ್ದು, ಅದರ ಬಗ್ಗೆ ತನಿಖೆಗೂ ಆದೇಶ ಮಾಡಿದೆ. ಚಲುವರಾಯಸ್ವಾಮಿ ಕೂಡ ಸ್ವತಃ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಟಾಪ್​ಲೆಸ್ ಆಗಿ ವಿಚಿತ್ರ ಭಂಗಿಯಲ್ಲಿ ಪೋಸ್​ ನೀಡಲು ಆದೇಶ: ಮಿಸ್​ ಯೂನಿವರ್ಸ್​ ಸ್ಪರ್ಧಿಗಳ ಗಂಭೀರ ಆರೋಪ
ಈ ಆರೋಪವನ್ನೇ ಗುರಿಯಾಗಿಸಿಕೊಂಡು ಇದೀಗ ಚಲುವರಾಯಸ್ವಾಮಿ ವಿರುದ್ಧ ಪೇಸಿಎಸ್​ ಅಭಿಯಾನ ಆರಂಭವಾಗಿದೆ. ಪೇಸಿಎಂ ಅಭಿಯಾನದ ರೀತಿಯಲ್ಲೇ ಪೇಸಿಎಸ್​ ಕ್ಯೂಆರ್​ ಕೋಡ್​ ರಚನೆ ಮಾಡಿ, ಅದಕ್ಕೆ ಚಲುವರಾಯಸ್ವಾಮಿ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೆ, ಮಂಡ್ಯದ ಹಲವೆಡೆಯೂ ಅಂಟಿಸಲಾಗಿದೆ. ಈ ಅಭಿಯಾನವನ್ನು ಮಂಡ್ಯ ಬಿಜೆಪಿಯವರು ಆರಂಭಿಸಿದ್ದು, ಇಂದು ಪ್ರತಿಭಟನಾ ವೇಳೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಮಂಡ್ಯದ ಎಎಸ್ಪಿ ತಮ್ಮಯ್ಯ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕಾರ್ಯಕರ್ತರ ಕುತ್ತಿಗೆ ಪಟ್ಟಿ ಹಿಡಿದು ವಾಹನಕ್ಕೆ ತುಂಬಲಾಯಿತು. ಇದಕ್ಕೂ ಮುನ್ನ ಕಾರ್ಯಕರ್ತರು ಅಂಟಿಸಿದ್ದ ಪೋಸ್ಟರ್ ಸಹ ಕಿತ್ತೆಸೆಯಲಾಯಿತು. ಪ್ರತಿಭಟನೆಯನ್ನು ತಡೆದಿದ್ದಕ್ಕೆ ಬಿಜೆಪಿಗರು ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಮಾಡುವುದು ಸಂವಿಧಾನದ ಹಕ್ಕು ಎಂದು ಪ್ರತಿಪಾದಿಸಿದರು. ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ಆದರೂ ಎರಡು ಜೀಪಿನಲ್ಲಿ ಕಾರ್ಯಕರ್ತರನ್ನು ತುಂಬಿಕೊಂಡು ಹೋಗಲಾಯಿತು. ಇದೇ ವೇಳೆ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು.
ಸಚಿವ ಚಲುವರಾಯಸ್ವಾಮಿ ಪರ ಮಂಡ್ಯದ ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್​ನಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪ ಮಾಡಿದರು. ಅಧಿಕಾರಿಗಳ ಹೆಸರಿನಲ್ಲಿ ಜೆಡಿಎಸ್ ನಾಯಕರು ದೂರು ನೀಡಿದ್ದಾರೆ. ಮಂಡ್ಯದ ಅಭಿವೃದ್ದಿ ಸಹಿಸಲಾಗದೆ ಚಲುವರಾಯಸ್ವಾಮಿ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಶಕ್ತಿ ಕುಂದುತಿದೆ ಎಂದು ಷಡ್ಯಂತ್ರ ಮಾಡಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪ ಮಾಡಿದರು.
ಇದನ್ನೂ ಓದಿ:ಬೇಕಾಬಿಟ್ಟಿ ಬೈಕ್​ ಚಾಲನೆ ಜತೆಗೆ ಅಪಾಯಕಾರಿ ಸಾಹಸ ಮಾಡ್ತಿದ್ದ ಮಿಸ್ಟರ್​ ಕ್ರೇಜಿ ಈಗ ಪೊಲೀಸರ ಅತಿಥಿ!
ಜೆಡಿಎಸ್ ವಿರುದ್ದ ಧಿಕ್ಕಾರ ಕೂಗುತ್ತಾ ನಾಗಮಂಗಲದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಾಗಮಂಗಲದ ಐಬಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಚಲುವರಾಯಸ್ವಾಮಿ ಭ್ರಷ್ಟಾತೀತ ರಾಜಕೀಯ ಮಾಡ್ತಾ ಇದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ಜೆಡಿಎಸ್ ಸುಳ್ಳು ಹೇಳ್ತಾ ಇದೆ. ಸುಳ್ಳು ಆರೋಪ ಮಾಡುವ ಜೆಡಿಎಸ್‌ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೊಸಪೇಟೆಯಲ್ಲಿ ಚಿಕನ್ ಸೇವಿಸಿ 30ಕ್ಕೂ ಹೆಚ್ಚು ಹಾಸ್ಟೆಲ್​ ವಿದ್ಯಾರ್ಥಿನಿಯರು ಅಸ್ವಸ್ಥ

RBI MPC: ಗುಡ್ ನ್ಯೂಸ್…ಸಾಲ ಮತ್ತು ಇಎಂಐ ಹೊರೆ ಹೆಚ್ಚಾಗುವುದಿಲ್ಲ, ರೆಪೋ ದರ ಮೂರನೇ ಬಾರಿಗೆ ಸ್ಥಿರ; ಶಕ್ತಿಕಾಂತ್ ದಾಸ್ ಘೋಷಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − eleven =
Remember me
