ಬೆಂಗಳೂರು:ಪೇಟಿಎಂ ಕೆವೈಸಿ ಅಪ್​ಡೇಟ್​ ಮಾಡ್ತೀವಿ, ಆನ್​ಲೈನ್​ ಚಾರ್ಚ್​ 5 ರೂಪಾಯಿ ಆಗುತ್ತೆ ಎಂಬ ಅಪರಿಚಿತರ ಮಾತಿಗೆ ಮರುಳಾದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಬರೋಬ್ಬರಿ 1.74 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಜೆ.ಪಿ.ನಗರದ ನಿವಾಸಿ ಭೀಮಸಿಂಹ (55) ಅವರ ಮೊಬೈಲ್​ಗೆ ಅ.12ರಂದು ಕರೆ ಮಾಡಿದ್ದ ಅಪರಿಚಿತರು, ನಾವು ಪೇಟಿಎಂ ಕೆವೈಸಿ ಅಪ್​ಡೇಟ್​ ಮಾಡಿಕೊಡುತ್ತೇವೆ ಎಂದಿದ್ದರು. ಅಲ್ಲದೆ, ಭೀಮಸಿಂಹರ ಮೊಬೈಲ್​ಗೆ ಲಿಂಕ್ ಕೂಡ ಕಳಿಸಿದ್ದರು. ಈ ಲಿಂಕ್​ ಮೇಲೆ ಕ್ಲಿಕ್​ ಮಾಡುವಂತೆ ಸೂಚಿಸಿ ಅದರಲ್ಲಿ ಬರುವ ಅಪ್ಲಿಕೇಶನ್​ನ್ನು ಡೌನ್​ಲೋಡ್​ ಮಾಡುವಂತೆ ಹೇಳಿದ್ದರು. ಇದಾದ ನಂತರ ಆನ್​ಲೈನ್​ ಚಾರ್ಜ್​ಗಾಗಿ 5 ರೂ.ಗಳನ್ನು ಕಳಿಸುವಂತೆ ತಿಳಿಸಿದ್ದರು.
ಅಪರಿಚಿತರ ಮಾತಿಗೆ ಮರುಳಾದ ಭೀಮಸಿಂಹ 5 ರೂ.ನ್ನು ಅವರು ಹೇಳಿದ ಖಾತೆಗೆ ಆನ್​ಲೈನ್​ ಮೂಲಕ ಕಳಿಸಿದ್ದರು. ಇದಾದ ಕೆಲ ಕ್ಷಣದಲ್ಲೇ ಹಂತ-ಹಂತವಾಗಿ ಭೀಮಸಿಂಹರ ಬ್ಯಾಂಕ್​ ಖಾತೆಯಿಂದ ಒಟ್ಟು 1.74 ಲಕ್ಷ ರೂ. ಮಾಯವಾಗಿದೆ.
ಪೇಟಿಎಂ ಕೆವೈಸಿ ಅಪ್​ಡೇಟ್​ ಮಾಡಿಕೊಡುವ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್​ ಕಳ್ಳರು, ಉದ್ಯೋಗಿಯ ಹಣ ಲಪಟಾಯಿಸಿದ್ದಾರೆ. ಈ ಕುರಿತು ದಕ್ಷಿಣ ಸಿಇಎನ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಗೆ ಬಿದ್ದಿದ್ದ ಕಾರು, ಒಂದು ದಿನದ ಬಳಿಕ ಪತ್ತೆ! ಬಾಗಿಲು ತೆರೆದವರಿಗೆ ಕಾದಿತ್ತು ಶಾಕ್​

ಇಡೀ ದೇಶದಲ್ಲಿ ಒಬ್ಬ ಸಿಎಂ ಕಣ್ಣೀರು ಹಾಕಿದ್ದಾರೆ ಅಂದರೆ ಅದು ನಾನು ಮಾತ್ರ: ಎಚ್​ಡಿಕೆ

ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 9 =
Remember me
