ಉಡುಪಿ:ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಧೋರಣೆ ಹಾಗೂ ನಿಲುವು ಖಂಡಿಸಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತಾಂತರ ಹಾಗೂ ಗೋಹತ್ಯಾ ನಿಷೇಧ ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದೇ ಪೇಜಾವರಶ್ರೀಗಳ ಅಸಮಾಧಾನಕ್ಕೆ ಕಾರಣ. ಸಮಾಜದಲ್ಲಿ ಏರ್ಪಟ್ಟಿದ್ದ ಪ್ರಮುಖ ಎರಡು ಗೊಂದಲ‌ ನಿವಾರಣೆಗೆ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿತ್ತು. ಮತಾಂತರ ಹಾವಳಿಯಿಂದ ಕೌಟುಂಬಿಕ ಕಲಹ ಏರ್ಪಟ್ಟು ಒಂದು ಕುಟುಂಬವೇ ಛಿದ್ರವಾಗುವ ಪ್ರಸಂಗ ನಿರ್ಮಾಣವಾಗಿತ್ತು. ಈ ಮತಾಂತರ ಹಾವಳಿ ತಪ್ಪಿಸಲು ಮತಾಂತರ ನಿಷೇಧ ಈ ಹಿಂದಿನ ಸರ್ಕಾರ ಜಾರಿ ಮಾಡಿತ್ತು ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಫ್ರೀ ಅಂತ ಬಂದ ಮಹಿಳೆಯರು ವಾಪಸ್ ಹೋಗಲು ಬಸ್ ಇಲ್ಲದೆ ಪರದಾಟ!
ಹಾಗೆಯೇ ನಾಲ್ಕು ಗೋವುಗಳನ್ನು ಸಾಕಿ ಅದರಿಂದ ಬಂದ ಹಾಲನ್ನು ಮಾರಾಟ ಮಾಡಿ ಹಲವಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಗೋವುಗಳನ್ನೇ ನಂಬಿ ಬದುಕುವ ಕುಟುಂಬಕ್ಕೆ ಗೋಕಳ್ಳರು ತಲವಾರು ತೋರಿಸಿ ಗೋವುಗಳನ್ನು ಕದ್ದೊಯ್ಯುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಹಿಂದಿನ ಸರ್ಕಾರ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿತ್ತು ಎಂದ ಸ್ವಾಮೀಜಿ, ಈಗಿನ ಸರ್ಕಾರ ಈ ಎರಡೂ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದು ಆತಂಕಕಾರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸುಪ್ರೀಂಕೋರ್ಟ್​ನಲ್ಲಿ ನನ್ನ ಪರ ವಾದಿಸಲು ಕಪಿಲ್ ಸಿಬಲ್​ಗೆ ಮನವಿ: ಹನಿಟ್ರ್ಯಾಪ್ ಕೇಸ್ ಕುರಿತಂತೆ ನವ್ಯಶ್ರೀ ರಾವ್
ಈ ಎರಡು ಕಾಯ್ದೆ ಹಿಂಪಡೆಯುವ ದುಸ್ಸಾಹಸ ಮಾಡಬಾರದು. ರಾಜ್ಯ ಸರ್ಕಾರ ಜನಪ್ರತಿನಿಧಿಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಬೇಕು. ಕಾಯ್ದೆ ಹಿಂಪಡೆಯುವ ದುಸ್ಸಾಹಸಕ್ಕೆ ಕೈಹಾಕದೆ ತಟಸ್ಥರಾಗಿರಿ ಎಂದೂ ಸ್ವಾಮೀಜಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
40 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಪೇಜಾವರಶ್ರೀ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
