ಉಡುಪಿ:ಬಾವಿಗೆ ಬಿದ್ದ ಬೆಕ್ಕನ್ನು ತಾವೇ ಇಳಿದು ರಕ್ಷಿಸುವ ಮೂಲಕ ಉಡುಪಿ ಪೇಜಾವರ ಮಠದ ಸ್ವಾಮೀಜಿ ಗಮನ ಸೆಳೆದಿದ್ದು, ಅವರ ಈ ಮಾರ್ಜಾಲ ಪ್ರೇಮ ಮೆಚ್ಚುಗೆಗೆ ಪಾತ್ರವಾಗಿದೆ. ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬೆಕ್ಕನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಉಡುಪಿಯ ಮುಚ್ಲುಕೋಡು ಸುಬ್ರಹ್ಮಣ್ಯ ದೇವಾಲಯದ ಬಳಿಯ ಬಾವಿಗೆ ಬೆಕ್ಕು ಬಿದ್ದಿತ್ತು. ದೇವಾಲಯದ ಸಿಬ್ಬಂದಿಗೆ ಈ ವಿಷಯ ಗೊತ್ತಾಗಿದ್ದು, ಬಳಿಕ ಅದು ಸ್ವಾಮೀಜಿಯವರಿಗೂ ತಿಳಿಯಿತು. ವಿಷಯ ತಿಳಿಯುತ್ತಿದ್ದಂತೆ ಸ್ವಾಮೀಜಿ ಸ್ವತಃ ಬೆಕ್ಕಿನ ರಕ್ಷಣೆಗೆ ಧಾವಿಸಿದ್ದರು.
ಇದನ್ನೂ ಓದಿ:ಹೆಂಡ್ತಿ ಆ್ಯಪ್ ಡೌನ್​ಲೋಡ್ ಮಾಡೋದು ತಡವಾಯ್ತೆಂದು ಸಿಟ್ಟಾದ ಗಂಡ; ಸಮಾಧಾನಿಸಲು ಬಂದ ಮಗನ ಎದೆಗೆ ಚೂರಿ ಇರಿತ!
ಹಗ್ಗದ ಸಹಾಯದಿಂದ 40 ಅಡಿ ಆಳದ ಬಾವಿಗೆ ಇಳಿದ ಸ್ವಾಮೀಜಿ, ಬೆಕ್ಕನ್ನು ಬಕೆಟ್​ವೊಂದರಲ್ಲಿ ಹಾಕಿ ಹಗ್ಗದ ಮೂಲಕ ಮೇಲಕ್ಕೆ ಕಳಿಸಿ ರಕ್ಷಣೆ ಮಾಡಿದ್ದಾರೆ. ಗೋರಕ್ಷಣೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿ ಇರುವ ಪೇಜಾವರಶ್ರೀಗಳು ಹಾವು-ಹದ್ದು ಮುಂತಾದ ಪ್ರಾಣಿ-ಪಕ್ಷಿಗಳನ್ನು ಕೂಡ ರಕ್ಷಿಸಿದ್ದರು. ಇದೀಗ ಬೆಕ್ಕನ್ನು ರಕ್ಷಿಸುವ ಮೂಲಕ ಅವರ ಪ್ರಾಣಿಪ್ರೀತಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ.
ಅಪ್ಪನ ದಿನದಂದೇ ಮಕ್ಕಳಿಬ್ಬರನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ!: ಮೂವರೂ ಇನ್ನಿಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
