ಬೆಂಗಳೂರು:ರಾಷ್ಟ್ರದ ಚರಿತ್ರೆ ನಿರ್ವಣದ ಜತೆಗೆ ರಾಮಮಂದಿರ ಸ್ಥಾಪನೆ ವಿಚಾರದಲ್ಲೂ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ್ದರು ಎಂದು ಯೋಗಗುರು ಬಾಬಾ ರಾಮ್ೇವ್ ಹೇಳಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗೆ ‘ಗುರುನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಪ್ರಿಂಕೋರ್ಟ್ ನಿಂದ ರಾಮಮಂದಿರ ತೀರ್ಪು ಬಂದಾಗ ಶ್ರೀಗಳು ತುಂಬ ಸಂತೋಷಪಟ್ಟಿದ್ದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಾಧು- ಸಂತರ ಸಭೆಯಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಅನ್ನುವ ಭಾವನೆಯನ್ನು ಶ್ರೀಗಳು ಹೊಂದಿದ್ದರು ಎಂದು ಬಣ್ಣಿಸಿದರು.
ಸಂತರಿಗೆ ಸಾವಿಲ್ಲ. ಇದು ಶೋಕ ಸಭೆ ಅಲ್ಲ. ಶ್ರೀಗಳು ಋಷಿ ಮತ್ತು ಬ್ರಹ್ಮಸದೃಶ ವ್ಯಕ್ತಿತ್ವ ಹೊಂದಿದ್ದರು. ಧರ್ಮವನ್ನು ತಮ್ಮ ಜೀವನದಲ್ಲಿ ಆಚರಣೆಗೆ ಮಾಡಿದವರು. ಪ್ರೇಮ, ಕರುಣೆಯ ಉದಾತ್ತ ತತ್ವಗಳನ್ನು ಸಾರಿದರು. ಚರಿತ್ರೆ ಎನ್ನುವುದು ಶರೀರದ ಜತೆಗೆ ಅಳಿಸಿ ಹೋಗುವುದಿಲ್ಲ. ಶ್ರೀಗಳ ಚಿತ್ರ ನೋಡಿದಾಗ ಅವರ ಚರಿತ್ರೆ ನಮ್ಮ ಕಣ್ಮುಂದೆ ಬರುತ್ತದೆ ಎಂದರು.
ಜತೆ ಇದ್ದು ಆಶೀರ್ವಾದ ಮಾಡಿದ್ದರು: ಕುಟುಂಬದ ವ್ಯವಸ್ಥೆಯಲ್ಲಿ ರಕ್ತ ಸಂಬಂಧ ಇದೆ. ಅದೇ ರೀತಿ, ಖುಷಿ ಪರಂಪರೆಯಲ್ಲಿ ಆತ್ಮಸಂಬಂಧ ಇದೆ. ಶ್ರೀ ವಿಶ್ವಪ್ರಸನ್ನ ತೀರ್ಥರು ವಿಶ್ವೇಶತೀರ್ಥರ ಪ್ರತಿರೂಪವೇ ಆಗಿದ್ದಾರೆ. ವಿಶ್ವೇಶತೀರ್ಥರ ಮೇಲೆ ಇಟ್ಟಿರುವ ವಿಶ್ವಾಸವನ್ನು ಈಗಿನ ಶ್ರೀಗಳ ಮೇಲೆ ಇಡುವುದು ಗುರು ಪರಂಪರೆ ಮೇಲಿನ ಗೌರವ. ಇಳಿವಯಸ್ಸಿನಲ್ಲೂ ಶ್ರೀಗಳು ಯೋಗಾಸನ ಮಾಡುತ್ತಿದ್ದರು. ಪತಂಜಲಿ ಯೋಗಪೀಠ ಉದ್ಘಾಟನೆ ಸೇರಿ ಅನೇಕ ಸಂದರ್ಭಗಳಲ್ಲಿ ನಮ್ಮ ಜತೆ ಇದ್ದು ಆಶೀರ್ವಾದ ಮಾಡಿದ್ದರು ಎಂದು ಬಾಬಾ ರಾಮ್ೇವ್ ತಿಳಿಸಿದರು. ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ರಾಜ್ಯಪಾಲ ವಿ.ಆರ್. ವಾಲಾ, ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಸಂಸದರಾದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಶಾಸಕರಾದ ಅರವಿಂದ ಲಿಂಬಾವಳಿ, ರವಿಸುಬ್ರಮಣ್ಯ, ಜೆಡಿಎಸ್ ಮುಖಂಡ ಟಿ.ಎ. ಶರವಣ, ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಮತ್ತಿತರರಿದ್ದರು.
ಶೋಷಿತರ ಒಳಿತಿಗಾಗಿ ಶ್ರಮಿಸಿದರು: ಕನ್ನಡ ನಾಡಿನ ಧರ್ಮ ಮತ್ತು ಸಾಮಾಜಿಕ ಬದುಕಿಗಾಗಿ ಹಲವು ದಶಕಗಳ ಕಾಲ ಮಾರ್ಗದರ್ಶನ ಮಾಡಿದವರು ಶ್ರೀಗಳು. ಅಧ್ಯಾತ್ಮ ಮತ್ತು ಸಮಾಜ ಸೇವೆ ಎರಡರ ಸಂಗಮವಾಗಿದ್ದ ಅವರು ಜೀವನಪರ್ಯಂತ ದಲಿತರು ಮತ್ತು ಶೋಷಿತರ ಒಳಿತಿಗಾಗಿ ಶ್ರಮಿಸಿದರು. ಜನಸೇವೆಯೇ ಜನಾರ್ದನ ಸೇವೆ ಎಂಬ ಪರಿಕಲ್ಪನೆ ಇಟ್ಟುಕೊಂಡು ಶ್ರೀಗಳು ದಲಿತರಕೇರಿಗೂ ಕಾಲಿಟ್ಟಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶ್ರೀಗಳ ದಾರಿಯಲ್ಲೇ ಸಾಗುತ್ತೇನೆ
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಶೌರ್ಯ ಮತ್ತು ಕ್ರೌರ್ಯದಿಂದ ದೇಶವನ್ನು ಗೆದ್ದವರಿದ್ದಾರೆ. ಆದರೆ, ಪ್ರೀತಿಯಿಂದ ದೇಶವನ್ನು ಗೆದ್ದಿರುವವರು ಕೆಲವೇ ಮಂದಿ. ಅಂಥವರಲ್ಲಿ ನಮ್ಮ ಗುರುಗಳು ಒಬ್ಬರು. ಅವರೊಬ್ಬ ಶ್ರೇಷ್ಠ ದೇಶಭಕ್ತರೂ, ದೈವಭಕ್ತರೂ ಆಗಿದ್ದರು ಎಂದರು.
ರಾಜ್ಯಪಾಲ ವಿ.ಆರ್.ವಾಲಾ ಅವರು ಶಸ್ತ್ರಚಿಕಿತ್ಸೆ ಬಳಿಕ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಗಮಿಸಿರುವುದು ಅವರಿಗೆ ಸಂತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಬಿಎಸ್​ವೈ ಲಿಂಗಾಯತ ಸಮುದಾಯದಲ್ಲಿ ಹುಟ್ಟಿದ್ದರಿಂದ ಲಿಂಗಾಯುತರು. ಆದರೆ, ಎಲ್ಲ ಧರ್ಮದ ಬಗ್ಗೆ ಪ್ರೀತಿ ಇದೆ. ಈ ವಯಸ್ಸಿನಲ್ಲೂ ರಾಜ್ಯಕ್ಕೆ ಕೊಡುಗೆ ನೀಡಬೇಕೆಂಬ ಬದ್ಧತೆ ಅವರಿಗೆ ಇದೆ.
| ಬಾಬಾ ರಾಮದೇವ್ ಯೋಗ ಗುರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
