ಉಡುಪಿ:‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ತೋರಿಸಿರುವ ದೃಶ್ಯಗಳ ವಿರುದ್ಧ ಸಿಡಿದೆದ್ದಿರುವ ಬ್ರಾಹ್ಮಣ ಸಮಾಜ, ಅದನ್ನು ಗಟ್ಟಿದನಿಯಲ್ಲೇ ಖಂಡಿಸಿದ್ದು, ಇದೀಗ ಅವರೊಂದಿಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೂಡ ದನಿಗೂಡಿಸಿದ್ದಾರೆ.
‘ಪೊಗರು’ ಕನ್ನಡ ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯ ಇರುವುದು ತಿಳಿಯಿತು. ಬ್ರಾಹ್ಮಣರೆಲ್ಲ ಒಂದಾಗಿ ಅದನ್ನು ಖಂಡಿಸಿದಾಗ ಅಂಥ ದೃಶ್ಯಗಳನ್ನು ತೆಗೆಯುವ ವಾಗ್ದಾನ ಸಿಕ್ಕಿದೆ. ಯಾರೂ ಇಂಥ ಕೆಲಸಗಳಿಗೆ ಕೈ ಹಾಕಬಾರದು.
ಸಮಾಜದಲ್ಲಿ ಎಲ್ಲರೂ ನೆಮ್ಮದಿಯಾಗಿ ಬದುಕಬೇಕೆಂದರೆ ಯಾರೂ ಯಾವುದೇ ಸಮಾಜ, ಜಾತಿ, ಮತ, ಪಂಗಡವನ್ನು ಅವಹೇಳನ ಮಾಡುವ ಕೆಲಸಕ್ಕೆ ಮುಂದಾಗಬಾರದು. ಇದೇ ಕೊನೆಯದಾಗಬೇಕು, ಯಾವುದೇ ಸಮಾಜದಲ್ಲಿನ ಶಾಂತಿಯನ್ನು ಕೆಡಿಸುವ ಪ್ರಯತ್ನಕ್ಕೆ ಯಾರೂ ಕೈಹಾಕಬಾರದು ಎಂಬುದಾಗಿ ಪೇಜಾವರ ಮಠದ ಶ್ರೀಗಳು ಹೇಳಿದ್ದಾರೆ.
ಬ್ರಾಹ್ಮಣ ಸಮಾಜದ ಅವಹೇಳನ ಹಿನ್ನೆಲೆಯಲ್ಲಿ ದನಿ ಎತ್ತಿದ ಪೇಜಾವರಶ್ರೀವಿವರಗಳಿಗೆhttps://t.co/YaFZZbZDD9ನೋಡಿ…pic.twitter.com/pM6cPZAwzr
— Vijayavani (@VVani4U)February 23, 2021

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿವಾದದಲ್ಲಿ ನಟ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ: ನಿರ್ದೇಶಕ-ನಿರ್ಮಾಪಕರಿಂದ ಕ್ಷಮೆಯಾಚನೆ

ಪೊಗರು ಚಿತ್ರದ ವಿರುದ್ಧ ಕಿಡಿಕಾರಿದ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + two =
Remember me
