ಬೆಂಗಳೂರು:ಶಿಶುಗಳ ಆರೈಕೆಗೆ ದಾದಿಯರ ಸೇವೆ ಒದಗಿಸುವುದಾಗಿ ಹಣ ಪಡೆದು ಬಳಿಕ ನಿರ್ಲಕ್ಷ್ಯ ತೋರಿದ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಗೆ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿದೆ. ಜತೆಗೆ ದಂಡದ ಮೊತ್ತ ಸೇರಿ ಮುಂಗಡವಾಗಿ ಪಾವತಿ ಮಾಡಿರುವ 23 ಸಾವಿರ ರೂ.ಗಳನ್ನು ಶೇ.6 ಬಡ್ಡಿಸಮೇತ ದೂರುದಾರರಿಗೆ ಹಿಂದಿರುಗಿಸಲು ಸೂಚಿಸಿದೆ.
ನಗರದ ನಂದಿನಿ ಬಡಾವಣೆಯ ವೈ.ಸಿ. ಶಿವರಾಮ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷ ವಿಜಯ್ಕುಮಾರ್ ಎಂ. ಪಾವಲೆ ನೇತೃತ್ವದ ತ್ರಿಸದಸ್ಯ ಪೀಠ ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಸೇವಾ ನ್ಯೂನತೆಗಾಗಿ ದಂಡ ವಿಧಿಸಿ ಈ ಆದೇಶ ಮಾಡಿದೆ.
ಒಂದು ದಿನ ಬಂದು ಮತ್ತೆ ಬರಲಿಲ್ಲ:ಹಿರಿಯ ನಾಗರಿಕರಾದ ಅರ್ಜಿದಾರರ ಮಗಳಿಗೆ 2023ರ ಅ. 25ರಂದು ಅವಳಿ ಮಕ್ಕಳು ಜನಿಸಿದ್ದು, ರಾತ್ರಿ 8ರಿಂದ ಬೆಳಗ್ಗೆ 6 ರವರೆಗೆ 10 ತಾಸುಗಳ ಕಾಲ ಮಕ್ಕಳನ್ನು ನೋಡಿಕೊಳ್ಳಲು ದಾದಿಯ ಸೇವೆ ಒದಗಿಸುವ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಲಾಗಿತ್ತು. ಅದಕ್ಕಾಗಿ 5,500 ರೂ.ಗಳನ್ನು ಪಾವತಿಸಲಾಗಿತ್ತು.
2023ರ ನ.1ರಂದು ಮಂಜುಳಾ ಎಂಬ ದಾದಿಯನ್ನು ಕಳುಹಿಸಿದ್ದು, 10 ತಾಸುಗಳ ಕಾಲ ಮಕ್ಕಳನ್ನು ನೋಡಿಕೊಂಡಿದ್ದರು. ಆಕೆಯ ಸೇವೆಯನ್ನು ಪರಿಗಣಿಸಿ 18 ಸಾವಿರ ರೂ. ಪಾವತಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ, ಮರುದಿನ ದಾದಿ 8 ಗಂಟೆಯಾದರೂ ಬಂದಿರಲಿಲ್ಲ. ಆಕೆಯನ್ನು ಸಂಪರ್ಕಿಸಿದಾಗ ಮತ್ತೊಂದು ಕೆಲಸದಲ್ಲಿದ್ದು, ಕ್ಯಾಬ್ ಕಳುಹಿಸಿದಲ್ಲಿ 9 ಗಂಟೆಗೆ ಬರುವುದಾಗಿ ತಿಳಿಸಿದ್ದರು. ಕೆಲ ದಿನಗಳ ಬಳಿಕ ದಾದಿ ಬರುವುದಕ್ಕೆ ನಿರಾಕರಿಸಿದ್ದರು. ಈ ಸಂಬಂಧ ಅರ್ಜಿದಾರರು ಸಂಸ್ಥೆಯ ಗಮನಕ್ಕೆ ತಂದರೂ ಸಂಸ್ಥೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಭರವಸೆ ನಂತರವೂ ಸೇವೆ ಕೊಡಲಿಲ್ಲ2023ರ ನ. 3ರಂದು 18 ಸಾವಿರ ರೂ.ಗಳನ್ನು ಸಂಸ್ಥೆಗೆ ಪಾವತಿಸಲಾಗಿತ್ತು. ಹಣ ಪಡೆದ ಸಂಸ್ಥೆ ಎರಡು ಮೂರು ದಿನದಲ್ಲಿ ದಾದಿಯನ್ನು ಕಳುಹಿಸುವುದಾಗಿ ಭರವಸೆ ನೀಡಿತ್ತು. ಆದರೆ, ಕಳುಹಿಸಲಿಲ್ಲ. ಹಣ ಹಿಂದಿರುಗಿಸುವಂತೆ ಇ-ಮೇಲ್ ಮತ್ತು ೆನ್ ಮೂಲಕ ಕರೆ ಮಾಡಿ ಮನವಿ ಮಾಡಿದರೂ ಕೊಡಲಿಲ್ಲ.
ಹೀಗಾಗಿ, ಸೇವಾ ನ್ಯೂನತೆ ಆರೋಪದಲ್ಲಿ ದೂರು ದಾಖಲಿಸಿ, ತಾವು ಪಾವತಿಸಿರುವ 23,500 ರೂ ಮತ್ತು 1 ಲಕ್ಷ ರೂ. ಪರಿಹಾರ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ಪರಿಣಾಮ 10 ಸಾವಿರ ರೂ. ಪರಿಹಾರ ಕೊಡಿಸಲು ನಿರ್ದೇಶನ ನೀಡುವಂತೆ ಕೋರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 9 =
Remember me
