ಪೆನ್​ಡ್ರೖೆವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜೆಡಿಎಸ್, ಬಿಜೆಪಿ ಆರೋಪಿತರ ಮೇಲೆ ಕ್ರಮ ಕೈಗೊಳ್ಳುತ್ತಿರುವ ಸರ್ಕಾರ, ಪ್ರಕರಣದ ಪ್ರಮುಖ ರೂವಾರಿಗಳೆನ್ನಲಾದ ಕಾರ್ತಿಕ್​ಗೌಡ ಹಾಗೂ ನವೀನ್​ಗೌಡ ಮೇಲೆ ಎಫ್​ಐಆರ್ ದಾಖಲಾಗಿ 20 ದಿನವಾದರೂ ಬಂಧನ ಮಾಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಶಾಸಕ ಎಚ್.ಡಿ. ರೇವಣ್ಣ ಜೈಲು ಪಾಲಾಗಿದ್ದಾರೆ. ಭವಾನಿ ರೇವಣ್ಣ ಅವರಿಗೂ ಎಸ್​ಐಟಿ ನೋಟಿಸ್ ನೀಡಿದೆ. ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದ ಬಿಜೆಪಿ ಮುಖಂಡ ದೇವರಾಜೇಗೌಡ ಅವರೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧನವಾಗಿದ್ದಾರೆ. ವಿಡಿಯೋ ಹಂಚಿಕೆ ಮಾಡಿದ್ದಾರೆಂಬ ಆರೋಪದಡಿ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎನ್ನಲಾದ ಚೇತನ್, ಲಿಖಿತ್ ಅವರನ್ನೂ ಎಸ್​ಐಟಿ ಭಾನುವಾರ ಬಂಧಿಸಿದೆ. ಪೆನ್​ಡ್ರೖೆವ್ ವಿಷಯದಲ್ಲಿ ಮೊದಲಿನಿಂದಲೂ ಆರೋಪ ಮಾಡಿಕೊಂಡು ಬರುತ್ತಿದ್ದ ದೇವರಾಜೇಗೌಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪೆನ್​ಡ್ರೖೆವ್ ಬಿಡುಗಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ನೇರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ನನ್ನೊಂದಿಗೆ ದೂರವಾಣಿಯಲ್ಲಿ ಹಾಗೂ ತಮ್ಮಲ್ಲಿಗೆ ಕರೆಸಿಕೊಂಡು ರ್ಚಚಿಸಿದ್ದರು ಎಂದು ಆರೋಪ ಮಾಡಿದ್ದರು. ಅದಾದ ಬಳಿಕ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿತ್ತು. ಈ ಹೇಳಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ದೇವರಾಜೇಗೌಡ ವಿರುದ್ಧ ಜ್ಯೋತಿ ಎಂಬ ಮಹಿಳೆ ಹೊಳೇನರಸೀಪುರ ಠಾಣೆಯಲ್ಲಿ ಏ.1ರಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯ ದಾಖಲಿಸಿದ್ದರು. ಅದೇ ಪ್ರಕರಣ ಸಂಬಂಧ ದೇವರಾಜೇಗೌಡರನ್ನು ಈವರೆಗೂ ಬಂಧಿಸದ ಪೊಲೀಸರು, ಸರ್ಕಾರದ ವಿರುದ್ಧ ಮಾತನಾಡಿದ ಎರಡು ದಿನಗಳ ಒಳಗೆ ಬಂಧಿಸಿದ್ದಾರೆ.
ಕಾರ್ತಿಕ್, ನವೀನ್ ಬಂಧನ ಏಕಿಲ್ಲ?:ಪ್ರಕರಣದ ಪ್ರಮುಖ ರೂವಾರಿ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ ಖಾಸಗಿ ವಾಹಿನಿ ಸಂದರ್ಶನದಲ್ಲಿ ಪ್ರತ್ಯಕ್ಷರಾದರೂ ಎಸ್​ಐಟಿ ಇನ್ನೂ ಈತನನ್ನು ವಶಕ್ಕೆ ಪಡೆದಿಲ್ಲ. ಸಚಿವ ಜಮೀರ್ ಅಹಮದ್ ಅವರ ಆಪ್ತ ಎನ್ನಲಾದ ಬೇಲೂರಿನ ನವೀನ್​ಗೌಡ, ‘ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಬಿಡುಗಡೆಗೆ ಕ್ಷಣಗಣನೆ’ ಎಂದು ಏ.22ರ ಸಂಜೆ ಎಫ್​ಬಿ ಖಾತೆಯಲ್ಲಿ ಪೋಸ್ಟ್ ಹಾಕಿದ್ದ. ಕೆಲವೇ ಗಂಟೆಗಳಲ್ಲಿ ಅಶ್ಲೀಲ ವಿಡಿಯೋಗಳು ಸಾರ್ವಜನಿಕರ ವಾಟ್ಸ್​ಆಪ್​ನಲ್ಲಿ ಹರಿದಾಡಿದವು. ಅವರ ವಿರುದ್ಧ ವಕೀಲ ಪೂರ್ಣಚಂದ್ರ ತೇಜಸ್ವಿ ಅಂದೇ ದೂರು ನೀಡಿದ್ದರೂ ಬಂಧನವಾಗಿಲ್ಲ.
ನವೀನ್​ಗೌಡ ಹೊಸ ಆರೋಪ
ಇಷ್ಟು ದಿನ ನಾಪತ್ತೆಯಾಗಿದ್ದ ಬೇಲೂರಿನ ನವೀನ್​ಗೌಡ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದು, ‘ನನಗೆ ಹಾದಿಯಲ್ಲಿ ಸಿಕ್ಕ ಪೆನ್​ಡ್ರೖೆವ್ ಅನ್ನು ಜೆಡಿಎಸ್ ಶಾಸಕ ಎ.ಮಂಜು ಅವರಿಗೆ ನೀಡಿದ್ದೆ ಎಂದು ಪೋಸ್ಟ್ ಮಾಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಆತನನ್ನು ಬಂಧಿಸಲೇಬೇಕು ಎಂದಾದರೆ ಆತ ಪೋಸ್ಟ್ ಮಾಡಿರುವ ಕಂಪ್ಯೂಟರ್ ಅಥವಾ ಮೊಬೈಲ್ ಐಪಿ ಅಡ್ರೆಸ್ ಮೂಲಕ ಕ್ಷಣಾರ್ಧದಲ್ಲೇ ಹಿಡಿಯಬಹುದು. ಆದರೂ ಆತ ಎಸ್​ಐಟಿ ಬಲೆಗೆ ಬಿದ್ದಿಲ್ಲ ಎಂಬುದೇ ಅಚ್ಚರಿ ಸಂಗತಿ.
ಸುಖ ನಿದ್ರೆಗಾಗಿ ಈಕೆ ಮಾಡಿದ್ದನ್ನು ಕಂಡು ದಂಗಾದ ಪ್ರಯಾಣಿಕರು! ಹಿಂದೆಂದೂ ಇಂತಹ ಘಟನೆ ಕೇಳಿರಲು ಸಾಧ್ಯವಿಲ್ಲ

ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
