ಕಾರವಾರ:ಫೋನ್​ನಲ್ಲಿ ‘ಹಲೋ ಕಂದಾಯ ಸಚಿವರೆ’ ಎಂದು ಹೇಳಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್ ನಂಬರ್ ಕೊಟ್ಟರೆ ಸಾಕು, 72 ಗಂಟೆಯಲ್ಲಿ ಪಿಂಚಣಿ ಆದೇಶ ನಿಮ್ಮ ಕೈಸೇರಲಿದೆ. ‘ಫೋನ್ ಮೂಲಕ ಪೆನ್ಶನ್’ ಎಂಬ ಈ ವಿನೂತನ ಕಾರ್ಯಕ್ರಮಕ್ಕೆ 10 ದಿನದಲ್ಲಿ ಚಾಲನೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಶುಕ್ರವಾರ ಪ್ರಕಟಿಸಿದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕುಂಟಗಣಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು. ಜನರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಬೇಕು ಎಂಬುದು ಬಸವರಾಜ ಬೊಮ್ಮಾಯಿ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ ಎಂದರು.
ಈ ವಿನೂತನ ಕಾರ್ಯಕ್ರಮದಲ್ಲಿ ನಾಲ್ಕು ಸಂಖ್ಯೆಯ ಸಹಾಯವಾಣಿ ಪ್ರಾರಂಭಿಸಲಾಗುತ್ತದೆ. ಬೆಂಗಳೂರಿನಲ್ಲಿ ನಿಯಂತ್ರಣ ಕೇಂದ್ರ ತೆರೆಯಲಾಗುತ್ತದೆ. ಈ ಸಹಾಯವಾಣಿಗೆ ಕರೆ ಮಾಡಿ ದಾಖಲೆಗಳ ಸಂಖ್ಯೆ ಕೊಟ್ಟಲ್ಲಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ನಂತರ ಗ್ರಾಮಲೆಕ್ಕಿಗರು ಮನೆಗೆ ಬಂದು ಪರಿಶೀಲಿಸುತ್ತಾರೆ. ಬಳಿಕ 72 ಗಂಟೆಯಲ್ಲಿ ಪಿಂಚಣಿ ಆದೇಶ ಕೈಸೇರಲಿದೆ. 7 ಸಾವಿರ ಜನರಿಗೆ ಪಿಂಚಣಿ ನೀಡುವ ಗುರಿ ಹೊಂದಿರುವುದಾಗಿ ಅಶೋಕ್ ತಿಳಿಸಿದರು.
ಕಾರ್ಯಕ್ರಮ ನಿರಂತರ:ಇದು ಅಶೋಕನ ಗ್ರಾಮ ವಾಸ್ತವ್ಯವಾಗಬಾರದು. ಹೀಗಾಗಿಯೇ ಇದಕ್ಕೆ ‘ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ ಎಂದು ಹೆಸರಿಟ್ಟಿದ್ದೇವೆ. ನಿರಂತರವಾಗಿ ಈ ಕಾರ್ಯಕ್ರಮ ನಡೆದರೆ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಬರಲಿದೆ. ಮುಂದಿನ ದಿನದಲ್ಲಿ ರೇಷನ್ ಸೇರಿ ಎಲ್ಲವನ್ನೂ ಜನರ ಮನೆ ಬಾಗಿಲಿಗೇ ತಲುಪಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಸಚಿವರು ವಿವರಿಸಿದರು.
ಗ್ರಾಮಕ್ಕೆ 1 ಕೋಟಿ ರೂ.:ಕಳೆದ 50 ವರ್ಷದಿಂದ ಜನ ಕಚೇರಿಗೆ ಅಲೆದು ದಣಿದಿದ್ದಾರೆ. ಅದನ್ನು ತಪ್ಪಿಸಬೇಕು. ಜನರಿಗಾಗಿ, ಜನರಿದ್ದಲ್ಲೇ ಸರ್ಕಾರ ಎಂಬ ಯೋಚನೆಗೆ ಅಡಿಯಿಟ್ಟಿದ್ದೇವೆ. ಅದರ ಭಾಗವಾಗಿ ಗ್ರಾಮ ಒನ್ ಕೇಂದ್ರ ತೆರೆಯಲಾಗಿದೆ. ಕಂದಾಯ ಸಚಿವನಾಗಿ 5 ಕಡೆ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆ ಅರಿತಿದ್ದೇನೆ. 6ನೇ ಗ್ರಾಮ ವಾಸ್ತವ್ಯ ಇದಾಗಿದೆ. ವಾಸ್ತವ್ಯ ಮಾಡಿದ ಗ್ರಾಮದ ಅಭಿವೃದ್ಧಿಗೆ 1 ಕೋಟಿ ರೂ.ಮಂಜೂರು ಮಾಡುತ್ತೇನೆ. ಈವರೆಗಿನ ಗ್ರಾಮ ವಾಸ್ತವ್ಯಗಳಲ್ಲಿ 99,170 ಅರ್ಜಿ ಬಂದಿವೆ. ಸುಮಾರು 87 ಸಾವಿರ ಕಂದಾಯ ಇಲಾಖೆ ಅರ್ಜಿ ವಿಲೇವಾರಿ ಮಾಡಲಾಗಿದೆ. ಬಡವರಿಗೆ ಸರ್ಕಾರ ಪ್ರತಿ ವರ್ಷ 10 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದೆ. ಅದನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

ಕರೊನಾ ಪ್ರಕರಣ ಹೆಚ್ಚಳ, ಶಾಲೆಗಳನ್ನು ಮುಚ್ಚುವುದೇ ಕೊನೆಯ ಆಯ್ಕೆ!; ಎಲ್ಲಿ ಈ ಚಿಂತನೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
