ಬೆಂಗಳೂರು:ಫೋನ್ ಕರೆ ಮಾಡಿ ‘ಹಲೋ ಕಂದಾಯ ಸಚಿವರೇ..’ ಅಂದರೆ ಸಾಕು, 72 ತಾಸುಗಳಲ್ಲೇ ಅರ್ಹರ ಮನೆ ಬಾಗಿಲಿಗೆ ಮಾಸಾಶನ ಮಂಜೂರು ಆದೇಶ ಪತ್ರ ತಲುಪಿಸುವ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಪರಿಷತ್​ನಲ್ಲಿ ಬುಧವಾರ ಪ್ರಕಟಿಸಿದರು. ಬಿಜೆಪಿಯ ತುಳಸಿ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿ, ನೂತನ ಪಿಂಚಣಿ ವ್ಯವಸ್ಥೆಗಾಗಿ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದ್ದು, ಸಹಾಯವಾಣಿ ಸ್ಥಾಪಿಸಲು ತೀರ್ವನಿಸಲಾಗಿದೆ. ಸಹಾಯವಾಣಿಗೆ ಕರೆ ಮಾಡಿದವರ ಬಿಪಿಎಲ್ ಕಾರ್ಡ್, ಆಧಾರ್ ಗುರುತಿನ ಸಂಖ್ಯೆಯಲ್ಲೇ ಎಲ್ಲ ವಿವರಗಳು ಲಭ್ಯವಿರುತ್ತವೆ. ಅರ್ಹರ ಮನೆಬಾಗಿಲಿಗೆ ಪಿಂಚಣಿ ಮಂಜೂರು ಆದೇಶ ಪತ್ರ ತಲುಪಲಿದ್ದರೆ, ಅವರ ಬ್ಯಾಂಕ್ ಖಾತೆಗೆ ನೇರವಾಗಿ ಮಾಸಾಶನ ಜಮಾ ಆಗಲಿದ್ದು, ಪಿಂಚಣಿಗಾಗಿ ಅಲೆದಾಟ, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದರು.
ವಿಶೇಷ ಅನುದಾನ:ಪ್ರತಿ ತಿಂಗಳು ಮೂರನೇ ಶನಿವಾರ ನಡೆಯುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ವಾಸ್ತವಾಂಶ ತಿಳಿದುಕೊಳ್ಳಲು, ಅಧಿಕಾರಿಗಳ ಕಾರ್ಯಶೈಲಿಯಲ್ಲಿ ಬದಲಾಯಿಸಲು ಸಾಧ್ಯವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದ ಆರ್.ಅಶೋಕ್, ಕರೊನಾ ಕಾರಣಕ್ಕೆ ಸ್ಥಗಿತವಾಗಿದ್ದ ಈ ಕಾರ್ಯಕ್ರಮ ಪುನರಾರಂಭವಾಗಿದೆ. ಈಗಾಗಲೆ ಐದು ಗ್ರಾಮ ವಾಸ್ತವ್ಯಗಳಾಗಿವೆ. ಒಟ್ಟು 29,522 ಅರ್ಜಿಗಳು ಸ್ವೀಕೃತವಾಗಿದ್ದು, 24,410 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿಯಾಗಿವೆ. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ವಿವರಿಸಿದರು. ವಾಸ್ತವ್ಯ ಹೂಡಿದ ಹಳ್ಳಿಗಳಿಗೆ ಒಂದು ಕೋಟಿ ರೂ. ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಗ್ರಾಮಸ್ಥರೇ ಸೂಚಿಸುವ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಣ ಬಳಸಬೇಕೆಂಬ ಸೂಚನೆ ನೀಡಲಾಗಿದೆ ಎಂದರು.
15 ಕೋಟಿ ರೂ. ಖರ್ಚು:ಮನೆ ಬಾಗಿಲಿಗೆ ದಾಖಲೆಪತ್ರ ಕಾರ್ಯಕ್ರಮಕ್ಕೆ 15 ಕೋಟಿ ರೂ. ವೆಚ್ಚವಾಗಿದೆ. ಪಹಣಿ, ಅಟ್ಲಾಸ್, ಜಾತಿ ಪ್ರಮಾಣಪತ್ರ, ಇಂಡೆಕ್ಸ್, ಲಕೋಟೆ ಮತ್ತು ಕಿರುಸಾಧನಾ ಪುಸ್ತಕದ ಒಂದು ಸೆಟ್ ಅನ್ನು 60 ಲಕ್ಷ ರೈತರಿಗೆ ತಲುಪಿಸಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು. ಕಾಂಗ್ರೆಸ್​ನ ಕೆ.ಹರೀಶ್​ಕುಮಾರ್ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಹಣಿ ಒಂದು ವರ್ಷದ ಅವಧಿಯದಾಗಿದ್ದು, ಜಾತಿಪ್ರಮಾಣಪತ್ರ ಶಾಶ್ವತವೆಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟದ ಉಪ ಸಮಿತಿ:ಕುಮ್ಕಿ, ಬಾಣಿ, ಕಾಣಿ, ಬೆಟ್ಟ, ಹಾಡಿ, ಕಾನು, ಸೊಪ್ಪಿನ ಬೆಟ್ಟ, ಗಾಯರಾಣ, ಹುಲ್ಲುಬನ್ನಿ ಇತ್ಯಾದಿ ಜಮೀನು ಸಾಗುವಳಿ ಮಾಡುತ್ತಿರುವವರಿಗೆ ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ತಮ್ಮದೇ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ ಎಂದು ಆರ್.ಅಶೋಕ್ ಹೇಳಿದರು. ಗೋಮಾಳ ಜಮೀನು ರಕ್ಷಣೆ ಪರವಾಗಿ ನಾನಿರುವೆ ಎಂದ ಆರ್.ಅಶೋಕ್, ಸಾಗುವಳಿದಾರರಿಗೆ ಜಮೀನು ಲೀಸ್​ಗೆ ಕೊಡುವ ಚಿಂತನೆಯಿದೆ ಎಂದರು.
ಆಪರೇಷನ್ ಕಮಲ ಅಲ್ಲ ತಾನೆ?:ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲೇ ನಡೆದಿವೆ ಎಂದು ಆರ್.ಅಶೋಕ್ ಹೇಳಿದಾಗ, ‘ಆಪರೇಷನ್ ಮಾಡುತ್ತಿಲ್ಲ ತಾನೆ?’ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಾಲೆಳೆದರು. ಪಕ್ಷಭೇದ ಮರೆತು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಅಶೋಕ್ ಪ್ರಸ್ತಾಪಿಸಿದ್ದು, ಆಪರೇಷನ್ ಮಾಡುವುದಕ್ಕೆ ಅವರೇನು ನುರಿತ ವೈದ್ಯರಲ್ಲವೆಂದು ತೇಜಸ್ವಿನಿಗೌಡ ಕುಟುಕಿದರು. ಆಪರೇಷನ್​ನಲ್ಲಿ ನೀವು (ಬಿಜೆಪಿ) ಎಕ್ಸಪರ್ಟ್ ಅದಕ್ಕೆ ಕೇಳಿದೆ ಎಂದು ಹರಿಪ್ರಸಾದ್ ಮತ್ತೆ ಕೊಂಕು ನುಡಿದಾಗ, ಅಂತಹದ್ದೇನಿಲ್ಲವೆಂದು ಅಶೋಕ್ ನಸುನಕ್ಕರು.
ಕೊರಗರು ಭೂ ಒಡೆಯರು:ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಬದುಕು ಶೋಚನೀಯವಾಗಿದ್ದು, ತಲೆತಲಾಂತರದಿಂದ ಅವರು ಸಾಗುವಳಿ ಮಾಡುತ್ತಿರುವ 100 ಎಕರೆ ಜಮೀನಿನ ಮಾಲೀಕತ್ವ ಇನ್ನೂ ಮಹಾರಾಜರ ಹೆಸರಿನಲ್ಲೇ ಇದೆ. ತಲಾ ಒಂದು ಅಥವಾ ಎಕರೆಯಂತೆ ಹಂಚಿಕೆ ಮಾಡಿ, ಪಹಣಿಯಲ್ಲಿ ನಮೂದಿಸಲು ಜಿಲ್ಲಾಧಿಕಾರಿಗೆ ಆದೇಶಿಸಿ ಒಂದು ತಿಂಗಳ ಗಡುವು ವಿಧಿಸಿರುವೆ ಎಂದು ಆರ್.ಅಶೋಕ್ ತಿಳಿಸಿದರು.
ಪೊಲೀಸರ ಸಮ್ಮುಖದಲ್ಲೇ ಪ್ರೇಮಿಗಳನ್ನು ಬೇರೆ ಮಾಡಿದ ಸಂಬಂಧಿಕರು: ಮದ್ವೆಯಾಗಿದ್ರೂ ಬಿಡಲಿಲ್ಲ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 8 =
Remember me
