ಬೆಂಗಳೂರು:ಜತೆಯಲ್ಲಿ ಹುಡುಗಿಯರನ್ನು ಕೂರಿಸಿಕೊಂಡು ಬೆಂಗಳೂರಿನಲ್ಲಿ ಅಡ್ಡಾದಿಡ್ಡಿಯಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದವನಿಗೆ ಸಾರ್ವಜನಿಕರೇ ಹಿಡಿದು ಗೂಸಾ ಕೊಟ್ಟಿದ್ದಾರೆ!
ಆರ್‌ಟಿ ನಗರದಲ್ಲಿ ಭಾನುವಾರ ರಸ್ತೆ ಖಾಲಿ ಇದೆಯೆಂದು ಈ ಆಸಾಮಿ ಅತಿವೇಗವಾಗಿ ಕಾರ್ ಚಲಾಯಿಸಿದ್ದ. ಒಂದು ಹಂತದಲ್ಲಿ ಕಾರು ನಿಧಾನವಾದಾಗ ಕಾರ್‌ನಲ್ಲಿದ್ದ ಈ ವ್ಯಕ್ತಿಯನ್ನು ಜನರೇ ಹೊರಗೆಗಳೆದು ಥಳಿಸಿದ್ದಾರೆ.
ಅದಲ್ಲದೆ ಆತ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸುತ್ತಿದ್ದುದು ಮತ್ತು ಜನ ಹಿಡಿದು ಥಳಿಸುತ್ತಿರುವುದನ್ನು ಸಾರ್ವಜನಿಕರೇ ವಿಡಿಯೋ ಮಾಡಿ ಬೆಂಗಳೂರು ಪೊಲೀಸರಿಗೆ ಟ್ಟಿಟರ್ ಮುಖಾಂತರ ತಲುಪಿಸಿದ್ದಾರೆ. ಈ ವಿಡಿಯೋ ನೋಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್ ಅವರು, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಇದೆಂಥಾ ದೌರ್ಜನ್ಯ? ಕರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ವೈದ್ಯರ ಮೇಲೆ ಕಲ್ಲು ಬೀಸಿದ್ರು…
ಕಮಿಷನರ್ ಸೂಚನೆ ಮೇರೆಗೆ ಸಂಚಾರ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ವಿಡಿಯೋ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದಿದ್ದೆಲ್ಲಿ, ಆತನ ಪೂರ್ವಾಪರ ಏನು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.ಇದನ್ನೂ ಓದಿ:ಗರ್ಭಿಣಿ ಆನೆ ಸಾವಿನಲ್ಲಿ ಮುಸ್ಲಿಮರ ಹೆಸರು: ಪತ್ರಕರ್ತನಿಂದ ಕ್ಷಮೆಯಾಚನೆ
https://www.facebook.com/VVani4U/videos/615833112359106/?t=0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
