ಉತ್ತರಕನ್ನಡ: ಕರೊನಾ ವೈರಸ್​ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ವದಂತಿಗಳು ಒಂದೆರಡೇ ಅಲ್ಲ. ಕರೊನಾ ವೈರಸ್​​ಗಳನ್ನು ನಿರ್ಮೂಲನ ಮಾಡಲು ಆಕಾಶದಿಂದ ಸೇನಾ ವಿಮಾನಗಳಲ್ಲಿ ರಾಸಾಯನಿಕ, ಮದ್ದು ಸಿಂಪಡಣೆ ಮಾಡುತ್ತಾರಂತೆ. ಹಾಗಾಗಿ ಭಾನುವಾರ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂಬಂತಹ ಒಂದು ಸುಳ್ಳು ಸುದ್ದಿ ಮೊನ್ನೆಯಿಂದಲೂ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು.
ಆದರೆ ಅನೇಕರು ಅದನ್ನು ಸತ್ಯ ಎಂದೇ ನಂಬಿಕೊಂಡಿದ್ದಾರೆ. ಹೀಗೆ ವದಂತಿಗಳನ್ನು ನಂಬಿಕೊಂಡು ತಮ್ಮ ಮನೆಯ ಕುಡಿಯುವ ನೀರಿನ ಹಾಗೂ ದಿನಬಳಕೆ ನೀರಿನ ಸೆಲೆಯಾದ ಬಾವಿಗಳನ್ನು ಮುಚ್ಚಿಟ್ಟಿದ್ದಾರೆ. ಮದ್ದು ಬಿದ್ದು ನೀರು ಕೆಡಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಇಂಥದ್ದೊಂದು ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಲ್ಲಿ. ಭಟ್ಕಳದ ಕೆಲವು ಗ್ರಾಮೀಣ ಪ್ರದೇಶಗಳ ಜನರು ಸುಳ್ಳು ಸುದ್ದಿಯನ್ನು ನಂಬಿಕೊಂಡು ತಮ್ಮ ಮನೆಯ ಬಾವಿಗಳನ್ನು ಪ್ಲಾಸ್ಟಿಕ್, ಬಟ್ಟೆಗಳಿಂದ ಮುಚ್ಚಿಟ್ಟಿದ್ದಾರೆ.ಆದರೆ ಇಂದು ಸರ್ಕಾರದಿಂದ ಯಾವುದೇ ಕರೊನಾ ನಿರ್ಮೂಲನಾ ಮದ್ದುಗಳನ್ನು ಹೆಲಿಕಾಪ್ಟರ್​​ಗಳ ಮೂಲಕ ಸಿಂಪಡಿಸಲಾಗುತ್ತಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + five =
Remember me
