ಬೆಳಗಾವಿ:ಪಕ್ಕದ ಗೋವಾ ರಾಜ್ಯದಿಂದ ಅಕ್ರಮವಾಗಿ ವಾಹನವೊಂದರಲ್ಲಿ ವಿವಿಧ ಕಂಪನಿಯ ಮದ್ಯದ ಬಾಕ್ಸ್​ಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಸೋಮವಾರ ಬಂಧಿಸಿರುವ ಉದ್ಯಮಭಾಗ ಠಾಣೆ ಪೊಲೀಸರು, 3.70 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಬೆಳಗಾವಿ ನಗರದ ಫೋರ್ಟ್​ ರಸ್ತೆಯ ನಿವಾಸಿಗಳಾದ ಮಂಜುನಾಥ ಪಾಟೀಲ (35), ಸುಭಾಷ ಸುಧಿರಡೆ (34) ಬಂಧಿತರು.
ಲಾಕ್​ಡೌನ್​ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ದಿನಸಿ ವಸ್ತುಗಳು ಮತ್ತು ತರಕಾರಿ ಸಮಸ್ಯೆ ಉಂಟಾಗಬಾರದೆಂದು ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತರಕಾರಿ ಸಾಗಿಸಲು ರಾಜ್ಯ ಸರ್ಕಾರವು ಸರಕು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ, ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ವಾಹನ ಚಾಲಕರು ಸುಲಭವಾಗಿ ಹಣ ಗಳಿಸಲು ತರಕಾರಿ ಚೀಲಗಳ ತಳಭಾಗದಲ್ಲಿ ಮದ್ಯದ ಬಾಕ್ಸ್​ಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ನಗರದ 3ನೇ ರೈಲ್ವೆ ಗೇಟ್​ ಬಳಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಗೂಡ್ಸ್​ ಟೆಂಪೋವನ್ನು ಪತ್ತೆ ಮಾಡಿ, ವಶಕ್ಕೆ ಪಡೆದರು.
ಪ್ರಧಾನಿ ಮೋದಿ ಮೆಚ್ಚಿಕೊಂಡ ಹುಬ್ಬಳ್ಳಿ ಬಾಲೆಯ ಯೋಗಾ ಯೋಗ; ಲಾಕ್​ಡೌನ್​ನಲ್ಲಿ ಫಿಟ್ನೆಸ್​ ಕಾಯ್ದುಕೊಳ್ಳುವುದು ಅನಿವಾರ್ಯವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
