ಯಾದಗಿರಿ:ಈ ಕುರಿತ ವಿಡಿಯೋವನ್ನು ನೋಡಿದರೆ ಯಾರಿಗೇ ಆದರೂ ಒಮ್ಮೆ, ‘ಛೇ ಇದೆಂಥ ವಿಕೃತಿ..’ ಎಂದನಿಸದೇ ಇರಲಾರದು. ಒಂದು ಹೆಬ್ಬಾವನ್ನು ಹಲವಾರು ಜನರು ಸೇರಿ ವಿಪರೀತ ಹಿಂಸೆ ಕೊಟ್ಟು ಸಾಯಿಸಿ ಸಂಭ್ರಮಿಸಿದ್ದಾರೆ. ಇಂಥದ್ದೊಂದು ದುಷ್ಕೃತ್ಯ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯಲ್ಲಿ ಈ ಘಟನೆ ನಡೆದಿದೆ. ಬೀದರ್-ಬೆಂಗಳೂರು ಹೆದ್ದಾರಿಯ ರಂಗಂಪೇಟೆಯಲ್ಲಿ ಮಂಗಳವಾರ ರಾತ್ರಿ ಕಲ್ಲುಗಳ ಸಂದಿಯಲ್ಲಿ ಹೋಗುತ್ತಿದ್ದ ಹೆಬ್ಬಾವೊಂದನ್ನು ಹಿಡಿದ ಸಾರ್ವಜನಿಕರು ಅದನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ. ಮಾತ್ರವಲ್ಲ, ಬಳಿಕ ಅದರ ಮೇಲೆ ಸಾರಿಗೆಯ ಬಸ್​ವೊಂದನ್ನು ಹರಿಸಿ ಹಿಂಸಿಸಿ ಸಂಭ್ರಮಿಸಿದ್ದಾರೆ. ದುರುಳರ ಈ ಕೃತ್ಯಕ್ಕೆ ಬಸ್ ಚಾಲಕ ಕೂಡ ಸಹಕರಿಸಿದ್ದಾನೆ.
ತನ್ನ ಪಾಡಿಗೆ ಸುಮ್ಮನಿದ್ದ ಹೆಬ್ಬಾವನ್ನು ಹಿಡಿದು ಹಿಂಸಿಸಿದ ಈ ಜನರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದವರು ಕೂಡ ಈ ಕೃತ್ಯವನ್ನು ನೋಡಿ ಹೋ ಎಂದು ಕೂಗಾಡಿ ವಿಕೃತ ಸಂತೋಷ ಅನುಭವಿಸಿದ್ದಾರೆ. ಈ ಕುರಿತ ವಿಡಿಯೋಗಳು ಈಗ ಅಲ್ಲಲ್ಲಿ ಹರಿದಾಡಲಾರಂಭಿಸಿವೆ.
‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

ಇನ್ನು ಸಬ್ ರಿಜಿಸ್ಟ್ರಾರ್​ ಕಚೇರಿ ರಾತ್ರಿ ವರೆಗೂ ಓಪನ್; ಉತ್ತಮ ಸೇವೆ ಒದಗಿಸಲು ಸಮಯ ವಿಸ್ತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nine =
Remember me
