ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಸಾರ್ವತ್ರಿಕವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಉಚಿತ ಬಸ್ ಪ್ರಯಾಣದ ಬಗ್ಗೆ ಮಹಿಳಾ ವಲಯದಲ್ಲಿ ಸಾಕಷ್ಟು ಖುಷಿ ಕಾಣಿಸಿದೆ. ಇದೇ ವೇಳೆ ಉಚಿತ ವಿದ್ಯುತ್ ವಿಚಾರದಲ್ಲಿ ಸಾಕಷ್ಟು ಗೊಂದಲವನ್ನೂ ಹೊರಹಾಕುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಗ್ಯಾರಂಟಿ ಯೋಜನೆಗಳ ಮಾರ್ಗಸೂಚಿ ಬಂದ ನಂತರ ಎಲ್ಲವೂ ಸ್ಪಷ್ಟವಾಗುವ ಸಾಧ್ಯತೆ ಇದೆ.
ಗೃಹ ಜ್ಯೋತಿ ಯೋಜನೆಗೆ ಬಾಡಿಗೆ ಮನೆ ಬದಲಿಸಿದಾಗ ಆಗುವ ವ್ಯತ್ಯಾಸಗಳಿಂದ ಫಲಾನುಭವಿಯಾಗುವ ಅವಕಾಶ ತಪ್ಪಲಿದೆ ಎಂಬ ಒಂದು ವಾದವಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ಮಾಸದಲ್ಲಿ ಮಹಾ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾಡಿಗೆದಾರರು ವಿವಿಧ ಕಾರಣಗಳಿಂದ ಮನೆ ಬದಲಿಸುತ್ತಾರೆ. ಅಂಥ ಸಂದರ್ಭದಲ್ಲಿ ಮನೆಯ ಹಿಂದಿನ ಬಾಡಿಗೆದಾರ ಬಳಕೆ ಆಧಾರದಲ್ಲಿ ಹೊಸ ಬಾಡಿಗೆದಾರರಿಗೆ ಯೋಜನೆ ಲಾಭ ಸಿಗುತ್ತದೋ, ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ.
ನಗರ ಪ್ರದೇಶದಲ್ಲಿ ಗೀಸರ್ ಹಾಗೂ ರೆಫ್ರಿಜರೇಟರ್, ವಾಷಿಂಗ್ ಮಷೀನ್ ಬಳಕೆ ಸಾಮಾನ್ಯ. ಹೀಗಾಗಿ ಅನೇಕರಿಗೆ ಉಚಿತ ಅವಕಾಶ ತಪು್ಪವ ಅಂದಾಜು ಇದೆ. ಬಡ ಮಧ್ಯಮ ವರ್ಗದಲ್ಲಿ ಇವೆಲ್ಲದರ ಬಳಕೆಯೂ ಸಹಜ. ಬಹು ದಿನಗಳಿಂದ ಖಾಲಿ ಇದ್ದ ಮನೆಗಳಲ್ಲಿ ಹಾಗೂ ಹೊಸ ಮನೆಗಳಲ್ಲಿ ಸರಾಸರಿ ಪರಿಗಣಿಸುವ ವಿಧಾನ ಹೇಗೆ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ತಿಂಗಳಾನುಗಟ್ಟಲೆ ಖಾಲಿ ಇದ್ದ ಮನೆಗೆ ಹೊಸ ಬಾಡಿಗೆದಾರರು ಬಂದ ಸಂದರ್ಭದಲ್ಲಿ ಸರಾಸರಿಯ ಮಾನದಂಡದಿಂದ ಯೋಜನೆಯ ಅವಕಾಶ ಕೈತಪು್ಪವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಹಲವರಲ್ಲಿದೆ.
ವಿದ್ಯುತ್ ಉಪಕರಣಗಳ ಅವಲಂಬನೆ ಸಾಮಾನ್ಯ. ಹಿಂದಿನ ವರ್ಷದ ಸರಾಸರಿಯ ಶೇ.10ಕ್ಕಿಂತ ಬಳಕೆ ಹೆಚ್ಚಾಗುವುದು ಸಹಜ. ಈ ಮಾನದಂಡ ಅನೇಕರಿಗೆ ಅವಕಾಶ ತಪ್ಪಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ಒಂದು ತಿಂಗಳು ಮಾನದಂಡ ಪೂರೈಕೆ ಸಾಧ್ಯವಾಗದೇ ಹೋಗಬಹುದು. ಮುಂದಿನ ತಿಂಗಳು ಪುನಃ ಯೋಜನೆಗೆ ಲಾಭ ಸಿಗುತ್ತದೆಯೋ ಅಥವಾ ಒಂದು ಬಾರಿ ಮಾನದಂಡ ಪೂರೈಕೆ ವಿಫಲಗೊಂಡರೆ ಮುಂದಿನ ಅವಧಿಗೆ ಅವಕಾಶ ವಂಚಿತರಾಗುವರೇ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ಮನೆಯಲ್ಲಿ ಸಭೆ ಸಮಾರಂಭಗಳು ನಡೆದಾಗ, ವಿದ್ಯುತ್ ಅಲಂಕಾರ ಮಾಡಿದ ಸಂದರ್ಭದಲ್ಲಿ 200 ಯೂನಿಟ್ ದಾಟಲೂಬಹುದು. ಅಂತಹ ಸಂದರ್ಭದಲ್ಲಿ ಮಾನದಂಡ ಉಲ್ಲಂಘನೆ ನೆಪದಲ್ಲಿ ಯೋಜನೆ ವ್ಯಾಪ್ತಿಯಿಂದ ಹೊರಹಾಕಿದರೆ ಕಷ್ಟವಾಗಲಿದೆ ಎಂಬ ಮಾತು ಸಹ ಕೇಳಿಬಂದಿದೆ.
ಮನೆ ಯಜಮಾನತಿಗೆ ಮಾಸಿಕ 2000 ಸಾವಿರ ರೂ. ನೀಡುವ ಸರ್ಕಾರದ ತೀರ್ವನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಯಜಮಾನತಿ ನಿರ್ಧಾರದ ಬಗ್ಗೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಇತ್ತ ಸರ್ಕಾರ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಮನೆಯೊಡತಿ ಯಾರು ಎಂದು ಕುಟುಂಬದವರೇ ತೀರ್ಮಾನ ಮಾಡಬೇಕು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಯಜಮಾನರ ಬ್ಯಾಂಕ್ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಹೀಗಾಗಿ ಮಹಿಳೆಯರ ಬ್ಯಾಂಕ್ ಖಾತೆಯನ್ನೇ ಪಡೆಯಬೇಕು ಎಂದು ಸಚಿವರು ಹೇಳಿದ್ದಾರೆ. ಒಂದೇ ಕುಟುಂದಿಂದ ಎರಡು ಅರ್ಜಿ ಹಾಕಿದ ಸಂದರ್ಭದಲ್ಲಿ ಸರ್ಕಾರ ಏನು ಮಾಡುತ್ತದೆ, ಮನೆಯೊಡತಿ ಎಂದು ಅರ್ಜಿ ಹಾಕಿದಾಕೆಯ ಹೆಸರು ಪಡಿತರ ಚೀಟಿಯಲ್ಲಿ ಇಲ್ಲದಿದ್ದರೆ ಅವಕಾಶ ತಪು್ಪತ್ತದೆಯೇ? ಪಡಿತರ ಚೀಟಿ ವಿಳಾಸ ಬೇರೆ ಕಡೆ ಇದ್ದು ವಾಸ ಮತ್ತೊಂದೆಡೆ ವಾಸ ಇದ್ದರೆ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆಯೂ ಇದೆ.
ಗಿವ್​ಇಟ್ ಅಪ್​ಗೆ ಖಂಡಿತವಾಗಿಯೂ ಇದಕ್ಕೆ ಅವಕಾಶ ಕಲ್ಪಿಸುತ್ತೇವೆ. ಒಂದು ವೇಳೆ ಯಾರಿಗಾದರೂ ಈ ಯೋಜನೆ ಫಲ ಬೇಡವಾದರೆ ಅದನ್ನು ಅವರು ತ್ಯಜಿಸಿ ವಿದ್ಯುತ್ ಬಿಲ್ ಕಟ್ಟಬಹುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅನೇಕ ಅಧಿಕಾರಿಗಳು, ಮಾಧ್ಯಮ ಮುಖ್ಯಸ್ಥರು, ಸರ್ಕಾರಿ ನೌಕರರು ಈ ಗೃಹಜೋತಿ ಯೋಜನೆಯ ಫಲ ಬೇಡ ಎಂದು ಪತ್ರ ಬರೆದರೆ, ಮತ್ತೆ ಕೆಲವರು ಖುದ್ದಾಗಿ ಹೇಳಿದ್ದಾರೆ. ಯಾರಿಗೆಲ್ಲ ಈ ಯೋಜನೆಯ ಲಾಭ ಬೇಡವೋ ಅವರಿಗೆ ಇದನ್ನು ತ್ಯಜಿಸಲು ಅವಕಾಶ ನೀಡಲಾಗುವುದು. ಅದಕ್ಕಾಗಿ ಈ ಯೋಜನೆಗಳ ಫಲ ಪಡೆಯಲು ಅರ್ಜಿಯನ್ನು ಕರೆಯಲಾಗಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ ತ್ಯಜಿಸಲು ಕರೆ ಕೊಟ್ಟಾಗ ಅನೇಕರು ಅದಕ್ಕೆ ಸ್ಪಂದಿಸಿ ಸಬ್ಸಿಡಿ ಕೈಬಿಟ್ಟಿದ್ದರು. ಅದೇ ರೀತಿ ಇಲ್ಲಿಯೂ ಯೋಜನೆ ಲಾಭ ತ್ಯಜಿಸಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಗೃಹ ಜ್ಯೋತಿ ಯೋಜನೆಯಲ್ಲಿ ಸರ್ಕಾರದ ಮಾನ ದಂಡಗಳ ಮಿತಿ ದಾಟಿ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ನೀಡಿದ್ದು, 200 ಯೂನಿಟ್ ತನಕ ಯಾವುದೇ ಹಣ ಪಾವತಿ ಮಾಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ ಎಂದರು. 1 ವರ್ಷದ ಬಳಕೆಯ ಸರಾಸರಿಯ ಜತೆಗೆ ಶೇ.10 ಹೆಚ್ಚುವರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸರಾಸರಿ ವಿದ್ಯುತ್ 100 ಇದ್ದು, ಶೇ.10 ಸೇರಿದರೆ 110 ಯೂನಿಟ್ ಆಗಲಿದೆ. ಬಳಕೆ ಪ್ರಮಾಣ 5 ಯೂನಿಟ್ ಹೆಚ್ಚಿದರೆ ಆ 5 ಯೂನಿಟ್​ಗೆ ಬಿಲ್ ಪಾವತಿ ಮಾಡಬೇಕು ಎಂದರು.
ಬೆಂಗಳೂರು: ಅನ್ನಭಾಗ್ಯ ಯೋಜನೆಯ ಪ್ರತಿ ಪಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ವಿತರಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ವಿತರಿಸಲಾಗಿರುವ ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಕುಟುಂಬ ಪಡಿತರ ಚೀಟಿಗಳು ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಿತರಿಸಲಾಗಿರುವ ಆದ್ಯತಾ ಪಡಿತರ ಚೀಟಿಗಳ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಆಹಾರ ಧಾನ್ಯಗಳನ್ನು ಜು.1 ರಿಂದ ಅನ್ವಯವಾಗುವಂತೆ ಉಚಿತವಾಗಿ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಆಶ್ವಾಸನೆಗಳು ಬೋಗಸ್ ಆಗಿವೆ. ಸುಳ್ಳು ಭರವಸೆಗಳ ಮೂಲಕ ಮತದಾರ ರಿಗೆ ಮೋಸ ಮಾಡಲಾಗಿದೆ. ಘೋಷಿಸಿರುವ ಯೋಜನೆಗಳು ಜನರಿಗೆ ಸಿಗದಂತೆ ಹಲವು ಕಂಡೀಷನ್ ಹಾಕಿ ‘ಕಾಡುವ ದೇವರ ಕಾಟ ಕಳೆದಿದೆ’.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೊಷಣೆ ಮಾಡಿದಂತೆ 5 ಗ್ಯಾರಂಟಿಗಳನ್ನು ಏಕಕಾಲದಲ್ಲಿ ಜಾರಿಗೆ ತಂದಿದೆ. ಇದನ್ನು ವಿಪಕ್ಷಗಳು ಸ್ವಾಗತಿಸಬೇಕೆ ಹೊರತು ವಿನಾಕಾರಣ ಟೀಕೆ ಮಾಡುವುದು ಸರಿಯಲ್ಲ.
| ಚಲುವರಾಯಸ್ವಾಮಿ ಕೃಷಿ ಸಚಿವ

ಇಷ್ಟು ದಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಯ ನೀಡಿದ್ದೆವು. ಇನ್ನು ಮುಂದೆ ಬಿಜೆಪಿ ಸರ್ಕಾರ ನಡೆಸಿದ 40 ಪರ್ಸೆಂಟೇಜ್ ಮತ್ತು ಕೋವಿಡ್ ಹಗರಣ ತನಿಖೆ ನಡೆಸಲಾಗುವುದು.
| ಎಂ.ಬಿ.ಪಾಟೀಲ್ ಕೈಗಾರಿಕೆ ಸಚಿವ
ಬೆಂಗಳೂರು: ‘ಯುವ ನಿಧಿ ಯೋಜನೆ’ಯಡಿ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ನಿರುದ್ಯೋಗ ಭತ್ಯೆ ನೀಡಲು ಸಚಿವ ಸಂಪುಟ ಸಭೆ ಅನುಮೋದಿಸಿದ ಬೆನ್ನಲ್ಲೇ ಅಧಿಕೃತ ಆದೇಶ ಶನಿವಾರ ಪ್ರಕಟವಾಗಿದೆ.
ಯುವ ನಿಧಿ ಷರತ್ತುಬದ್ಧವಾಗಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, 2023ರ ವರ್ಷದಲ್ಲಿ ತೇರ್ಗಡೆಯಾಗಿ, ಉತ್ತೀರ್ಣರಾದ 180 ದಿನಗಳು ಕಳೆದರೂ ಉದ್ಯೋಗ ಸಿಗದವರು ನಿರುದ್ಯೋಗಿ ಭತ್ಯೆ ಪಡೆಯಲಿದ್ದಾರೆ.
ವೃತ್ತಿಪರ ಕೋರ್ಸ್​ಗಳು ಸೇರಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ., ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಮಾಸಿಕ 1,500 ರೂ. ನಿರುದ್ಯೋಗಿ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಗೆ ನೀಡಲಾಗುವುದು ಆದೇಶದಲ್ಲಿ ತಿಳಿಸಲಾಗಿದೆ.
* ಪದವಿ/ ಡಿಪ್ಲೋಮಾ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯ.* ಈ ಸೌಲಭ್ಯ ಎರಡು ವರ್ಷಗಳಿಗೆ ಅನ್ವಯಿಸುತ್ತದೆ. ನಿಗದಿ ಅವಧಿಯೊಳಗೆ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯ ಸ್ಥಗಿತಗೊಳ್ಳಲಿದೆ.* ಭತ್ಯೆಯು ಡಿಬಿಟಿ ಮೂಲಕ ಪಾವತಿಯಾಗಲಿದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.* ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪು್ಪ ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.
* ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸುವವರು.* ಶಿಶುಕ್ಷು (ಅಂಪ್ರೆಟೈಸ್) ವೇತನ ಪಡೆಯುತ್ತಿರುವವರು.* ಸರ್ಕಾರಿ/ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.* ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್​ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.
ನಿಗಮ-ಮಂಡಳಿ ಲೆಕ್ಕಾಚಾರ ಶುರು: ಪ್ರಮುಖರ ಮೇಲೆ ಆಕಾಂಕ್ಷಿಗಳ ಒತ್ತಡ; ಬಜೆಟ್ ಮಂಡನೆ ಬಳಿಕ ನೇಮಕ ಪ್ರಕ್ರಿಯೆ

ಇಂದಿರಾ ಕ್ಯಾಂಟೀನ್​​ ಮರುಜೀವಕ್ಕೆ 355 ಕೋಟಿ ರೂ. ಬೇಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
