ಉತ್ತರಕನ್ನಡ:ಕೋತಿಯೊಂದು ಅನಾರೋಗ್ಯಕ್ಕೀಡಾಗಿ ಸತ್ತಿದ್ದು, ಅದರ ಸಾವಿಗೆ ಮಕ್ಕಳ ಸಹಿತ ಊರಿನ ಜನರೇ ಮರುಗಿದ್ದಾರೆ. ಕೋತಿ ರಾಮು ಎಂದೇ ಕರೆಸಿಕೊಳ್ಳುತ್ತಿದ್ದ ಈ ಮಂಗನಿಗೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅಂತ್ಯಸಂಸ್ಕಾರವನ್ನೂ ನಡೆಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕಂಜರಪೇಟೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎಂಬುವವರ ಮನೆಯಲ್ಲಿ ಸಾಕಿದ್ದ ಕೋತಿ ರಾಮು, ಎರಡು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಸಾವಿಗೀಡಾಗಿದೆ.
ಈ ಕೋತಿ ಮರಿಯ ಸಾವಿಗೆ ಗ್ರಾಮಸ್ಥರು ಮರುಗಿ ಕಣ್ಣೀರು ಹಾಕಿದ್ದಲ್ಲದೆ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನಡೆಸಿದ್ದಾರೆ. ಮರದಿಂದ ಮರಕ್ಕೆ ಹಾರುವಾಗ ಬಿದ್ದು ಗಾಯ ಮಾಡಿಕೊಂಡಿದ್ದ ಕೋತಿಗೆ ಈ ಹಿಂದೆ ಚಿಕಿತ್ಸೆ ಕೊಡಿಸಿದ್ದ ಗ್ರಾಮಸ್ಥರು, ಗುಣವಾದ ಮೇಲೆ ಅದನ್ನು ಕಾಡಿಗೆ ಬಿಟ್ಟಿದ್ದರು. ಅದಾಗ್ಯೂ ಗ್ರಾಮಕ್ಕೆ ವಾಪಸ್​ ಆಗಿದ್ದ ಈ ಕೋತಿಯನ್ನು ರೆಹೋನೆತ್ ಮನೆಯಲ್ಲಿ ಸಾಕಿದ್ದರು.
ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!
ಫ್ರಿಡ್ಜ್​ ಒಳಗೆ ಕುಕ್ಕರ್​; ಶುರುವಾಯ್ತು ‘ಬಿಸಿಬಿಸಿ’ ಚರ್ಚೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
