ಬೆಂಗಳೂರು:ಆಗ್ನೇಯ ಪೊಲೀಸ್ ವಿಭಾಗದಿಂದ ಪೊಲೀಸ್ ಠಾಣೆಗಳನ್ನು ಕನ್ನಡತನದಿಂದ ಅಲಂಕರಿಸಿ ಮೂರು ಠಾಣೆಗಳಲ್ಲಿ ಆರಕ್ಷಕ ಜನಸ್ನೇಹಿ ಗ್ರಂಥಾಲಯ ಆರಂಭಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಇಂದು (ಮಂಗಳವಾರ) ಆಚರಿಸಲಾಯಿತು.
ವಿಭಾಗದ ವ್ಯಾಪ್ತಿಯ ಕೋರಮಂಗಲ ಪೊಲೀಸ್ ಠಾಣೆ, ಮೈಕೊ ಲೇಔಟ್ ಪೊಲೀಸ್ ಠಾಣೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ. ತಮ್ಮ ಠಾಣೆ ವ್ಯಾಪ್ತಿಯ ಹಿರಿಯ‌ ಚೇತನಗಳ ಮೂಲಕ ಉದ್ಘಾಟಿಸಿ ಜನಸ್ನೇಹಿ ವ್ಯವಸ್ಥೆಗೆ ಗ್ರಂಥಾಲಯದ ಮೂಲಕ ಮುನ್ನುಡಿ ಬರೆಯಲಾಗಿದೆ.
ಜನರು ಮತ್ತು ಪೊಲೀಸರೊಂದಿಗೆ ಉತ್ತಮ ಭಾಂದವ್ಯ, ಪೊಲೀಸ್‌ ಠಾಣೆಗೆ ಆಗಮಿಸಿದ ಜನರು ಕಾಯುವ ಸಮಯದಲ್ಲಿ ಪುಸ್ತಕ ಓದಲು ಈ ಜನಸ್ನೇಹಿ ಗ್ರಂಥಾಲಯ ಸಹಕಾರಿಯಾಗಲಿದೆ. ಪೊಲೀಸ್ ಭಯ ದೂರ ಮಾಡುವ ಸದುದ್ದೇಶವೂ ಈ ಗ್ರಂಥಾಲಯದ ಕಲ್ಪನೆಗಿದೆ.
ಉದಯವಾಗಲಿ ಚೆಲುವ ಕನ್ನಡನಾಡು ಖ್ಯಾತಿಯ ಹುಯಿಲಗೋಳು ನಾರಾಯಣರಾವ್ ಅವರ ಮೊಮ್ಮಗಳು ರಾಧಾ ಕುಲಕರ್ಣಿ ಅವರು ಕೋರಮಂಗಲ ಠಾಣೆಯ ಜನಸ್ನೇಹಿ ಗ್ರಂಥಾಲಯಕ್ಕೆ ಚಾಲನೆ ನೀಡಿದರೆ, ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಅವರು ಮೈಕೊ ಲೇಔಟ್ ನ ಗ್ರಂಥಾಲಯಕ್ಕೆ, ಬುಕ್ ಬ್ರಹ್ಮದ ಸಂಸ್ಥಾಪಕ‌ ಸತೀಶ ಚಪ್ಪರಕಿ ಅವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಆರಕ್ಷಕ ಜನಸ್ನೇಹಿ‌ ಗ್ರಂಥಾಲಯಕ್ಕೆ ಚಾಲನೆ ನೀಡಿದರು.

‘ಪ್ರಗತಿ’ಯ ಹೊಳಪಲ್ಲಿ ರಿಷಬ್​ ಶೆಟ್ಟಿ; ಹಳೇದನ್ನೆಲ್ಲ ನೆನಪಿಸಿಕೊಂಡು ಆ ಮೊದಲ ಫೋಟೋ ಹಂಚಿಕೊಂಡ ನಟ-ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 5 =
Remember me
