|ಹರೀಶ್ ಬೇಲೂರುಬೆಂಗಳೂರು
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್​ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರ ವಿತರಣೆಗೆ ಸೀಮಿತವಾಗಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ, ಬ್ಯಾಂಕ್ ಖಾತೆ ತೆರೆಯುವುದು, ಇಂಟರ್​ನೆಟ್ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ. ಸಾರ್ವಜನಿಕರಿಗೆ ಸೌಲಭ್ಯ ನೀಡುವ ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರ್ಥಿಕ ವಹಿವಾಟು ಹೆಚ್ಚಿಸುವುದು ಯೋಜನೆಯ ಉದ್ದೇಶ. ಗ್ಯಾಸ್ ಸಿಲಿಂಡರ್, ದಿನಬಳಕೆ ವಸ್ತುಗಳು, ಅಂಚೆ ಇಲಾಖೆಯ ಮೂಲಕ ಬ್ಯಾಂಕ್ ಖಾತೆ ಓಪನ್ ಹಾಗೂ ಎರಡು ರೂ.ಗೆ ಇಂಟರ್​ನೆಟ್ ಸೌಲಭ್ಯ ಇನ್ನಿತರ ಸೇವೆಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಒದಗಿಸಲು ಆಹಾರ ಇಲಾಖೆ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಆರಂಭಿಸಿರುವ ಇಲಾಖೆ, ಕೆಲ ಸಂಸ್ಥೆಗಳ ಜತೆ ಒಡಂಬಡಿಕೆಯನ್ನೂ ಮಾಡಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ 2 ತಿಂಗಳ ಒಳಗೆ ಯೋಜನೆ ಜಾರಿಗೆ ಬರಲಿದೆ. ಅಲ್ಲದೆ, ಪಿಂಚಣಿ ಸೌಲಭ್ಯ ಸೇರಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ನ್ಯಾಯಬೆಲೆ ಅಂಗಡಿಗಳಲ್ಲೇ ದೊರಕಿಸುವ ಚಿಂತನೆ ಇದೆ. ನ್ಯಾಯಬೆಲೆ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳ ಮಾರಾಟ ಮಾಡುವ ಯೋಜನೆಯನ್ನು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ.
ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಜನರ ಅಲೆದಾಟ ತಪ್ಪಿಸಿ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲೇ ಅಗತ್ಯ ಸೇವೆಗಳನ್ನು ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ 1,15,79,081 ಬಿಪಿಎಲ್, 23,87,956 ಎಪಿಎಲ್ ಹಾಗೂ 10,90,563 ಅಂತ್ಯೋದಯ ಸೇರಿ ಒಟ್ಟು 1,50,57,600 ಕಾರ್ಡ್​ಗಳಿಗೆ ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆ ಮಾಡುತ್ತಿವೆ. ಪಡಿತರ ವಿತರಣೆಗಾಗಿ ಮಾಲೀಕರಿಗೆ ಸರ್ಕಾರ ನೀಡುವ ಕಮಿಷನ್ ಹೊರತುಪಡಿಸಿ ಬೇರೆ ಆದಾಯ ಇಲ್ಲ. ಹಾಗಾಗಿ, ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ನೀಡುವ ಮೂಲಕ ಮಾಲೀಕರಿಗೂ ಆದಾಯ ಸಿಗುವಂತೆ ಮಾಡಲು ಇಲಾಖೆ ಮುಂದಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಹೊಸದಾಗಿ ಬ್ಯಾಂಕ್ ಖಾತೆ ತೆರೆಯುವುದು, ಇಂಟರ್​ನೆಟ್ ಸೇವೆ ಒದಗಿಸುವುದು ಮತ್ತು ದಿನಬಳಕೆ ವಸ್ತುಗಳ ಮಾರಾಟ ಸೇರಿ ಜನಸ್ನೇಹಿ ಸೇವೆ ಒದಗಿಸಲು ತೀರ್ವನಿಸಿದ್ದೇವೆ. ಸದ್ಯದಲ್ಲೇ ಯೋಜನೆಯನ್ನು ಜಾರಿಗೆ ತರುತ್ತೇವೆ. ಇದರಿಂದ ಮಾಲೀಕರಿಗೂ ಆದಾಯ ಸಿಗಲಿದೆ.
|ಜ್ಞಾನೇಂದ್ರ ಕುಮಾರ್ ಗಂಗ್ವಾರ್ಅಪರ ನಿರ್ದೇಶಕ, ಆಹಾರ ಇಲಾಖೆಯ ಸಕ್ಷಮ ದಳ ಮತ್ತು ಐಟಿ ವಿಭಾಗ
ಪಡಿತರ ವಿತರಣೆಯಿಂದ ಸರ್ಕಾರ ನೀಡುವ ಕಮಿಷನ್ ಹಣದಲ್ಲಿ ಜೀವನ ನಡೆಸಲು ನಮಗೆ ಕಷ್ಟವಾಗುತ್ತಿದೆ. ಆದ್ದರಿಂದ, ದಿನಬಳಕೆ ಸೇರಿ ಇತರ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದರೆ ನಮಗೆ ಆದಾಯವೂ ಬರಲಿದೆ. ಸರ್ಕಾರ ತೆಗೆದುಕೊಳ್ಳುವ ತೀರ್ವನಕ್ಕೆ ನಾವೆಲ್ಲರೂ ಬದ್ಧ.
|ಟಿ.ಕೃಷ್ಣಪ್ಪಅಧ್ಯಕ್ಷ, ರಾಜ್ಯ ಪಡಿತರ ವಿತರಕರ ಸಂಘ
ನೆಟ್ ಸೇವೆಗೆ ಮೋದಿ ಹೆಸರು?:ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಹಾರ ಇಲಾಖೆ ಅತಿ ಕಡಿಮೆ ದರದಲ್ಲಿ ಇಂಟರ್​ನೆಟ್ ಸೇವೆ ಒದಗಿಸಲು ಯೋಜನೆ ಜಾರಿಗೆ ತರಲಿದೆ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಕಾಯಿನ್ ಬೂತ್ ಸ್ಥಾಪಿಸಿ ಅದರಲ್ಲಿ ಸಾರ್ವಜನಿಕರು, 2 ರೂ.ಕಾಯಿನ್ ಹಾಕಿದರೆ 1 ಅಥವಾ 2 ಜಿಬಿವರೆಗೆ ಇಂಟರ್​ನೆಟ್ ಬಳಸಬಹುದು. ಈ ಯೋಜನೆ ಜಾರಿಗೆ ಇಲಾಖೆ ಈಗಾಗಲೇ ಕೆಲ ಕಂಪನಿಗಳ ಜತೆ ಮಾತುಕತೆ ನಡೆಸಿದೆ. ಕೆಲ ಕಂಪನಿಗಳು ಈ ಸೇವೆಯನ್ನು ನೀಡಲು ಮುಂದೆ ಬಂದಿವೆ. ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಇಡಲು ಚರ್ಚೆ ನಡೆಯುತ್ತಿದೆ. ಒಂದು ವೇಳೆ ಯೋಜನೆ ಜಾರಿಗೆ ಬಂದರೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಬ್ಯಾಂಕಿಂಗ್ ಸೇವೆ:ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸದಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅವಕಾಶ ಸಿಗಲಿದೆ. ಉಳಿತಾಯ ಖಾತೆ, ಚಾಲ್ತಿ ಖಾತೆ ಸೇರಿ ಇತರೆ ಖಾತೆಗಳನ್ನು ಓಪನ್ ಮಾಡಬಹುದು. ಇದರಿಂದ ಸಣ್ಣ ಉದ್ದಿಮೆದಾರರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಆಗಲಿದೆ. ಈ ಸೌಲಭ್ಯವನ್ನು ಕಲ್ಪಿಸಲು ಆಹಾರ ಇಲಾಖೆ, ಅಂಚೆ ಇಲಾಖೆ ಜತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಸಿಲಿಂಡರ್ ಲಭ್ಯ:ನ್ಯಾಯಬೆಲೆ ಅಂಗಡಿಗಳಲ್ಲಿ ಮಾರುಕಟ್ಟೆಯ ದರದಲ್ಲಿ 5 ಕೆ.ಜಿ.ತೂಕದ ಎಲ್ಪಿಜಿ ಸಿಲಿಂಡರ್​ಗಳನ್ನು ಮಾರಾಟ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.
ದಿನಬಳಕೆ ವಸ್ತು ಮಾರಾಟ:ನ್ಯಾಯಬೆಲೆ ಅಂಗಡಿಗಳಲ್ಲಿ ಅಡುಗೆ ಎಣ್ಣೆ, ಸೋಪು, ಉಪು್ಪ ಇತರ ದಿನಬಳಕೆ ವಸ್ತುಗಳನ್ನು ಕಾರ್ಡ್​ದಾರರು ರೇಷನ್ ಪಡೆಯುವ ಸಂದರ್ಭದಲ್ಲಿ ಹಣ ಕೊಟ್ಟು ಖರೀದಿಸಬಹುದು. ಆದರೆ, ಕಾರ್ಡ್​ದಾರರಿಗೆ ಮಾಲೀಕರು ಇವುಗಳನ್ನು ಖರೀದಿಸುವಂತೆ ಒತ್ತಾಯ ಮಾಡುವಂತಿಲ್ಲ. ದಿನಬಳಕೆಯ ವಸ್ತುಗಳ ಮಾರಾಟದಿಂದ ಮಾಲೀಕರಿಗೂ ಆದಾಯ ಸಿಗಲಿದೆ. ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು.
ನಟಿ ವಿನಯಪ್ರಸಾದ್ ಮನೆಯಲ್ಲಿ ಕಳವು; ಬೆಡ್​ರೂಮ್​ನಲ್ಲಿದ್ದ ನಗದು ಕದ್ದ ಕಳ್ಳರು!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − one =
Remember me
