ಬೆಂಗಳೂರು:ಇಲ್ಲಿಯೇ ಇದ್ದುಕೊಂಡು ಮತ ಹಾಕಲು ಹಿಂದೇಟು ಹಾಕುವವರ ಮಧ್ಯೆ ಈ ಯುವತಿಯರಿಬ್ಬರು ವಿದೇಶದಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಬಸವನಗುಡಿ ಕ್ಷೇತ್ರದ ಮೇಘನಾ ಎಂಬುವರು ವೋಟ್ ಮಾಡಲೆಂದೇ ಬೆಂಗಳೂರಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಮೂಲಕ ಮತದಾನವೇ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ.
ಇದನ್ನೂ ಓದಿ:ಹಾಸನದಲ್ಲಿ ಮತದಾನದ ವೇಳೆ ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಬೆಳಗಾವಿಯಲ್ಲಿ ಬಿಪಿ ಲೋ ಆಗಿ ವೃದ್ಧೆ ಸಾವು
ಫಿಲಿಪೈನ್ಸ್​ನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿರುವ ಲಿಖಿತಾ, ಚಿತ್ರದುರ್ಗದ‌ ಮತಗಟ್ಟೆ ಸಂಖ್ಯೆ 225ರಲ್ಲಿ ಮತದಾನ ಮಾಡಿದ್ದಾರೆ. ಲಿಖಿತಾ, SSLC ಬೋರ್ಡ್ ಜಂಟಿ ನಿರ್ದೆಶಕ ರೇವಣಸಿದ್ದಪ್ಪ ಅವರ ಪುತ್ರಿ. ಮತದಾನದ ಬಳಿಕ ಪ್ರತಿಕ್ರಿಯೆ ನೀಡಿರುವ ಲಿಖಿತಾ, ವಿದೇಶದಲ್ಲಿನ ವಿದ್ಯಾರ್ಥಿಗಳಿಗೆ ಪೋಸ್ಟಲ್ ಬ್ಯಾಲೆಟ್ ನೀಡುವಂತೆ ಮನವಿ ಮಾಡಿದರು. ಕಡ್ಡಾಯ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ವಿದೇಶದಿಂದ ಬಂದು ಮತದಾನ ಮಾಡಿದ್ದಕ್ಕೆ ಖುಷಿಯಿದೆ. ಇಲ್ಲಿನ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪಡೆದು ಮತಚಲಾಯಿಸಿದ್ದೇನೆ ಎಂದರು.
ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.(ದಿಗ್ವಿಜಯ ನ್ಯೂಸ್​)
ಹಾಸನದಲ್ಲಿ ಮತದಾನದ ವೇಳೆ ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಬೆಳಗಾವಿಯಲ್ಲಿ ಬಿಪಿ ಲೋ ಆಗಿ ವೃದ್ಧೆ ಸಾವು

ಮತ ಚಲಾಯಿಸಿದ ಶಿವರಾಜ್ ಕುಮಾರ್ ದಂಪತಿ; ದೊಡ್ಮನೆ ದಂಪತಿಯಿಂದ ಯುವಕರಿಗೆ ಸಂದೇಶ

LIVE| ಕರ್ನಾಟಕ ಚುನಾವಣೆ 2023: ಮತದಾನದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
