ನರಗುಂದ:ಪ್ರಧಾನಿ ನರೇಂದ್ರ ಮೋದಿ ಜನಧನ ಖಾತೆ ಹೊಂದಿದವರಿಗೆ ಹಣ ಹಾಕಿದ ರೀತಿಯಲ್ಲೇ ಅಂಚೆ ಕಚೇರಿಯಲ್ಲಿ ಖಾತೆ ಇರುವವರಿಗೆ ಹಣ ಹಾಕುತ್ತಾರೆ ಎಂಬ ವದಂತಿ ನಂಬಿದ ಜನರು ಖಾತೆ ತೆರೆಯಲು ಅಂಚೆ ಕಚೇರಿಗೆ ಮುಗಿಬಿದ್ದಿದ್ದಾರೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೆ ಪ್ರಧಾನಿ ತಲಾ 5 ಸಾವಿರ ರೂ. ಹಾಕಲಿದ್ದಾರೆ ಎಂಬ ಗಾಳಿಸುದ್ದಿ ನಂಬಿದ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿ ನೂರಾರು ಜನರು ಉಳಿತಾಯ ಖಾತೆ ತೆರೆಯಲು ಪಟ್ಟಣದ ಅಂಚೆ ಕಚೇರಿಗೆ ಕೆಲ ದಿನಗಳಿಂದ ಧಾವಿಸುತ್ತಿದ್ದಾರೆ. ಲಾಕ್​ಡೌನ್ ಹಿನ್ನೆಲೆ ಪಿಂಚಣಿದಾರರಿಗೆ 3 ತಿಂಗಳ ಮುಂಗಡ ಪಿಂಚಣಿ ಈಗಾಗಲೆ ಕೇಂದ್ರ ಜಮೆ ಮಾಡಿದೆ. ಜನಧನ ಖಾತೆ ಇರುವ ಮಹಿಳೆಯರಿಗೆ ತಿಂಗಳಿಗೆ 500 ರೂ.ನಂತೆ 3 ತಿಂಗಳಿನ 1,500 ರೂ. ನೀಡಿದೆ. ಅದೇ ರೀತಿ ಅಂಚೆ ಇಲಾಖೆಯಲ್ಲಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆದರೆ ತಲಾ 5 ಸಾವಿರ ರೂ. ಹಾಕುತ್ತಾರೆಂಬ ಸುಳ್ಳುಸುದ್ದಿ ನಂಬಿ ಖಾತೆ ತೆರೆಯಲು ಮುಂದಾಗಿದ್ದಾರೆ.ಇದನ್ನೂ ಓದಿ:ಕ್ವಾರಂಟೈನ್​ ಕೇಂದ್ರದ ಸುತ್ತ ಹಾವುಗಳಿಗೆ ಲಕ್ಷ್ಮಣ ರೇಖೆ, ಮೂಢನಂಬಿಕೆ ವಿರೋಧಿಗಳ ಆಕ್ಷೇಪ
ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೆ ಪ್ರಧಾನಿ ಮೋದಿ ತಲಾ 5 ಸಾವಿರ ರೂ. ಹಾಕುತ್ತಾರಂತೆ. ಹೀಗಾಗಿ, ಪಟ್ಟಣದ ಪೋಸ್ಟ್ ಆಫೀಸಿನಲ್ಲಿ ಕುಟುಂಬದ ಎಲ್ಲ ಸದಸ್ಯರ ಖಾತೆ ಮಾಡಿಸಿದ್ದೇನೆ. ಹಣ ಬಂದರೆ ಬರಲಿ, ಬಿಟ್ಟರೆ ಬಿಡಲಿ.
| ಕೆ.ಆರ್. ಅನ್ಸಾರಿನರಗುಂದ ನಿವಾಸಿ
ನಮ್ಮಲ್ಲಿ ಈ ಖಾತೆ ತೆರೆಯಲು ಪ್ರತ್ಯೇಕ ಕೌಂಟರ್​ಗಳನ್ನು ಇರಲಿಲ್ಲ. ಆದರೀಗ ಜನರನ್ನು ನಿಯಂತ್ರಿಸಲು ಜಿಲ್ಲೆಯ ವಿವಿಧೆಡೆಯ ಸಿಬ್ಬಂದಿಯನ್ನು ಕರೆಸಿಕೊಂಡು 10 ಕೌಂಟರ್ ತೆರೆಯಲಾಗಿದೆ. ಅದಕ್ಕೂ ಮೀರಿ ಜನರು ಬರುತ್ತಿರುವುದರಿಂದ ಪ್ರತಿದಿನ 250 ಆನ್​ಲೈನ್ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ.
| ದೀಪಾ ಪತ್ತೇಪೂರಪ್ರಭಾರ ಪೋಸ್ಟ್ ಮಾಸ್ಟರ್, ನರಗುಂದ
2014ರಲ್ಲಿ ಆರಂಭಿಸಿದ್ದ ಐಪಿಪಿಬಿ ಯೋಜನೆಯಡಿ ನರಗುಂದದ ಅಂಚೆ ಇಲಾಖೆಯಲ್ಲಿ ಇದುವರೆಗೆ 5 ಸಾವಿರ ಗ್ರಾಹಕರಷ್ಟೇ ಉಳಿತಾಯ ಖಾತೆ ಹೊಂದಿದ್ದರು. ಈಗ ವದಂತಿಯಿಂದಾಗಿ ಒಂದೇ ವಾರದಲ್ಲಿ 1,600ಕ್ಕೂ ಅಧಿಕ ಜನರು ಇಲ್ಲಿ ಖಾತೆ ತೆರೆದಿದ್ದಾರೆ. ಇನ್ನೂ ಹಲವರು ಕುಟುಂಬಸಮೇತ ಬಂದು ಖಾತೆ ತೆರೆಯುತ್ತಿದ್ದಾರೆ. ಅಂಚೆ ಇಲಾಖೆ ಅಧಿಕಾರಿ-ಸಿಬ್ಬಂದಿಗೆ ಜನರನ್ನು ನಿಯಂತ್ರಿಸುವುದು ತಲೆನೋವಾಗಿ ಪರಿಣಿಮಿಸಿದೆ. ಖಾತೆ ತೆರೆಯುವವರಿಗೆ ತಹಸೀಲ್ದಾರ್ ಎ.ಎಚ್. ಮಹೇಂದ್ರ, ಸಿಪಿಐ ಡಿ.ಬಿ. ಪಾಟೀಲ ಮತ್ತಿತರ ಅಧಿಕಾರಿಗಳು ತಿಳಿವಳಿಕೆ ಹೇಳುತ್ತಿದ್ದರೂ ಲೆಕ್ಕಿಸದ ಜನರು ಖಾತೆ ತೆರೆಯಲು ಜಮಾಯಿಸುತ್ತಲೇ ಇದ್ದಾರೆ.ಇದನ್ನೂ ಓದಿ:ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರನ್ನು ಥಳಿಸಿದ ಪೊಲೀಸ್​ ವಿರುದ್ಧ ಕೇಸ್​
ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
