ಬೆಂಗಳೂರು:ಗೌರಿ-ಗಣೇಶ ಹಬ್ಬದ ಸಲುವಾಗಿ ಊರಿಗೆ ಹೋಗಲಿರುವ ಹಲವಾರು ಮಂದಿ ಇಂದೇ ಹೊರಟಿರುವುದರಿಂದ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಗಿಜಿಗುಡುವ ಜನಜಂಗುಳಿ ಸೃಷ್ಟಿಯಾಗಿದೆ. ಮಾತ್ರವಲ್ಲ, ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರೂ ಪರದಾಡುವಂತಾಗಿದೆ.
ಕೆಲವೆಡೆ ಸೆ. 18ರಂದು ಹಾಗೂ ಇನ್ನು ಕೆಲವು ಕಡೆ ಸೆ. 19ರಂದು ಈ ಸಲ ಚೌತಿ ಆಚರಣೆ ಮಾಡಲಾಗುತ್ತಿದೆ. ವಾರಾಂತ್ಯದ ರಜೆ ಜತೆಗೆ ಹಬ್ಬದ ರಜೆಯೂ ಸೇರಿ ಮೂರ್ನಾಲ್ಕು ದಿನಗಳ ಸರಣಿ ರಜೆ ಸಿಗುವುದರಿಂದ ಹಲವರು ಹಬ್ಬಕ್ಕಾಗಿ ಇಂದೇ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಜನಜಂಗುಳಿ ಉಂಟಾಗಿದೆ.
ಇದನ್ನೂ ಓದಿ:ಕೋವಿಡ್​ಗಿಂತಲೂ ಮಾರಕ ಈ ನಿಫಾ ವೈರಸ್: ಮರಣ ಪ್ರಮಾಣ ಅಧಿಕ ಎಂದ ಐಸಿಎಂಆರ್​
ಜನಸಂಚಾರ ಜಾಸ್ತಿ ಇರುವುದರಿಂದ ಊರಿಗೆ ಹೊರಟ ಬಸ್ ಹಾಗೂ ಇತರ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಟೌನ್​ಹಾಲ್​ನಿಂದ ಮೆಜೆಸ್ಟಿಕ್​ವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿವೆ. ಟ್ರಾಫಿಕ್ ಜಾಮ್​ ಕೂಡ ಜಾಸ್ತಿ ಇದ್ದಿದ್ದರಿಂದ 2-3 ಕಿ.ಮೀ. ದೂರ ವಾಹನದಟ್ಟಣೆ ಉಂಟಾಗಿ, ನಿಧಾನಗತಿಯ ಚಲನೆ ಕಂಡುಬಂದಿದೆ. ಪರಿಣಾಮವಾಗಿ ಕೆಲವರು ನಡೆದೇ ಬಸ್​ ನಿಲ್ದಾಣ ತಲುಪುವಂತಾಗಿದೆ.
ಆಟೋ-ಕ್ಯಾಬ್​ಗಳಿಗೆ ಬೇಡಿಕೆ ಉಂಟಾಗಿದ್ದಲ್ಲದೆ, ಮೆಟ್ರೋ ಕೂಡ ತುಂಬಿ ತುಳುಕಿದೆ. ಸೋಮವಾರ- ಮಂಗಳವಾರ ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಜೆ ಇರುವುದರಿಂದ ಪರ ಊರಿನವರು ಇಂದೇ ಊರಿಗೆ ಹೊರಟಿದ್ದರಿಂದ ಇಂಥ ಸನ್ನಿವೇಶ ಸೃಷ್ಟಿಯಾಗಿದೆ.
ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

ಗೋಶಾಲೆಗಾಗಿ ಹಣದ ಮಳೆಯೇ ಸುರಿಯಿತು!; ಸಂಗೀತ ಕಾರ್ಯಕ್ರಮದಲ್ಲೊಂದು ಅದ್ಭುತ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen + twelve =
Remember me
