|ರಮೇಶ ದೊಡ್ಡಪುರಬೆಂಗಳೂರು
ರಾಜಧಾನಿ ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ಲಸಿಕೆ ಕೊರತೆ ಕಾಡುತ್ತಿರುವ ಪರಿಣಾಮ ಅಲ್ಲಿನ ಜನರು ದೂರದೂರದ ಹಳ್ಳಿಗಳ ಲಸಿಕಾ ಕೇಂದ್ರಗಳನ್ನು ಬುಕ್ ಮಾಡಿಕೊಂಡು ಗುಳೆ ಹೊರಟಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರಿನ ಯುವ ಸಮುದಾಯ ವ್ಯಾಕ್ಸಿನ್​ಗಾಗಿ ಹಳ್ಳಿ ಹುಡುಕುವ ಕಾಯಕಕ್ಕೆ ಮುಂದಾಗಿದೆ. ಈ ಬೆಳವಣಿಗೆಯಿಂದಾಗಿ ಹಳ್ಳಿಗರಿಗೆ ಲಸಿಕೆ ಕೊರತೆ ಕಾಡಲಾರಂಭಿಸಿದೆ. 18-44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ರಾಜ್ಯದ ಎಲ್ಲ ಕೇಂದ್ರಗಳೂ ಸಂಪೂರ್ಣ ಬುಕ್ ಆಗಿವೆ. ಯುವಕರು ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಬಳಸಿಕೊಂಡು ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮುಂತಾದ ಜಿಲ್ಲೆಗಳಲ್ಲಿರುವ ತಾಲೂಕು ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ‘ಇದಕ್ಕೆ ನಿಯಮದಲ್ಲಿ ಅವಕಾಶವಿದೆ. ಕೋವಿನ್ ಪೋರ್ಟಲ್​ನಲ್ಲಿ ಪಿನ್ ಕೋಡ್ ಅಥವಾ ಜಿಲ್ಲಾವಾರು ಲಸಿಕಾ ಕೇಂದ್ರಗಳನ್ನು ಹುಡುಕಿ ಬುಕ್ ಮಾಡಬಹುದು.
‘ಬೇರೆ ಜಿಲ್ಲೆಯವರು ಎಂದು ತಡೆಯಲು ಆಗುವುದಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ. ಮೈಸೂರು, ಮಂಗಳೂರಿನಂತಹ ಬೃಹತ್ ನಗರಗಳ ಸುತ್ತಲಿನ ಹಳ್ಳಿಗಳಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಈ ಕಾರಣದಿಂದಾಗಿ, ರಾಜ್ಯದಲ್ಲಿ 18-44 ವರ್ಷದವರಿಗೆ ಲಸಿಕೆ ನೀಡಲು ನಿಗದಿಯಾಗಿರುವ 197 ಕೇಂದ್ರಗಳಲ್ಲಿ ಮಂಗಳವಾರ ಸಂಜೆ ವೇಳೆಗೆ 21ರಲ್ಲಿ ಮಾತ್ರ ಕೆಲವೇ ಲಸಿಕೆಗಳು ಲಭ್ಯವಿದ್ದವು. ಅದೂ ಸಹಿತ ಬೆಂಗಳೂರು, ಮಂಗಳೂರು ಹಾಗೂ ಮೈಸೂರಿನಿಂದ ದೂರವಿರುವ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಗದಗ, ಕಲಬುರಗಿ ಹಾವೇರಿ, ಕೊಪ್ಪಳ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ.
45+ ಲಸಿಕೆ ಲಭ್ಯ:ಚಿತ್ರದುರ್ಗ, ಮಂಡ್ಯ, ಶಿವಮೊಗ್ಗ, ತುಮಕೂರು, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ 45ಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಸಾಕಷ್ಟು ಲಸಿಕೆ ಲಭ್ಯವಿವೆ. ಆದರೆ ಮೈಸೂರು, ಬೆಂಗಳೂರಿನಲ್ಲಿ ಈ ವಯೋಮಾನದವರಿಗೂ ಸ್ಲಾಟ್​ಗಳು ಸಿಗುತ್ತಿಲ್ಲ.
2ನೇ ಡೋಸ್ ರದ್ದು:ಎರಡನೇ ಡೋಸ್ ಲಸಿಕೆಗೆ ನಿಗದಿಯಾಗಿದ್ದ ಸ್ಲಾಟ್​ಗಳು ರದ್ದಾಗಿದೆ ಎಂಬ ಸಂದೇಶಗಳು 45ಕ್ಕಿಂತ ಹೆಚ್ಚಿನ ವಯೋಮಾನದವರನ್ನು ಚಿಂತೆಗೆ ದೂಡಿದೆ. ಸಹಕಾರ ನಗರದ ಬಿ.ಎಸ್. ಶ್ರೀಕಂಠ ಎಂಬವರಿಗೆ ಮೇ 20ರ ಬೆಳಗ್ಗೆ 9-10ರವರೆಗೆ ಎರಡನೇ ಡೋಸ್​ಗೆ ಸಮಯ ನಿಗದಿಯಾಗಿ ಖಾತರಿಗೆ ಸಂದೇಶವೂ ಲಭಿಸಿತ್ತು. ಆದರೆ, ಇದೀಗ ಮತ್ತೊಂದು ಸಂದೇಶದಲ್ಲಿ ರದ್ದಾಗಿದೆ ಎಂದು ಮಾಹಿತಿ ಸಿಕ್ಕಿದೆ. ಮತ್ತೊಮ್ಮೆ ಸ್ಲಾಟ್ ಖಾತ್ರಿಗೆ ತಿಳಿಸಲಾಗಿದೆಯಾದರೂ ಇದೀಗ ಬೆಂಗಳೂರಿನಲ್ಲಿ ಎಲ್ಲಿಯೂ ಖಾಲಿ ಇಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಅನೇಕರಿಗೆ ಸಂದೇಶ ಬಂದಿದೆ.
ನಗರದ ಜನರು ಲಸಿಕೆ ಪಡೆಯಲು ಗ್ರಾಮೀಣ ಪ್ರದೇಶಕ್ಕೆ ಹೋಗುವುದು ಬೇಡ. ನಗರದಲ್ಲೇ ಲಸಿಕೆ ಪಡೆಯಲಿ. ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ. ಈ ಬಗ್ಗೆ ಮಾರ್ಗಸೂಚಿ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿರುವೆ.
|ಡಾ.ಸಿ.ಎನ್.ಅಶ್ವತ್ಥನಾರಾಯಣಉಪ ಮುಖ್ಯಮಂತ್ರಿ
ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!
ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
