ಪಂಕಜ ಕೆ.ಎಂ. ಬೆಂಗಳೂರುಒಮ್ಮೆ ಮೋಡ ಕವಿದ ವಾತಾವರಣ, ಮತ್ತೊಮ್ಮೆ ಬಿರು ಬಿಸಲು, ಚಳಿ, ಮಳೆ ಹೀಗೆ ಹವಾಮಾನದ ವಿಚಿತ್ರ ಬದಲಾವಣೆಯಿಂದಾಗಿ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ವೈರಾಣು ಜ್ವರ ವ್ಯಾಪಕವಾಗಿದ್ದು, ಜನರು ಹೈರಾಣಾಗಿದ್ದಾರೆ. ಮಕ್ಕಳು ಸೇರಿ ಎಲ್ಲ ವಯೋಮಾನದವರಲ್ಲೂ ಜ್ವರ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳು, ಕ್ಲಿನಿಕ್​ಗಳು ರೋಗಿಗಳಿಂದ ತುಂಬಿವೆ. ಜತೆಗೆ ಸೊಳ್ಳೆಗಳ ಹಾವಳಿಯೂ ಹೆಚ್ಚಿದ್ದು, ಒಂದು ವಾರದಲ್ಲಿ 1,256 ಡೆಂಘ, 58 ಚಿಕೂನ್ ಗುನ್ಯಾ, 104 ಮಲೇರಿಯಾ, 199 ಇನ್​ಫೋಯೇಂಜಾ ವೈರಾಣು ಪ್ರಕರಣಗಳು ವರದಿಯಾಗಿವೆ.
ಈ ಹಿಂದೆ ಜ್ವರ ಬಂದರೆ 3-5 ದಿನಗಳಲ್ಲಿ ಗುಣವಾಗುತ್ತಿತ್ತು. ಆದರೆ ಕೋವಿಡ್ ನಂತರದಲ್ಲಿ ಯಾರಿಗಾದರೂ ಜ್ವರ ಬಂದಲ್ಲಿ ಗುಣ ಹೊಂದಲು ಒಂದು ವಾರ ಕಾಲ ಬೇಕಾಗುತ್ತದೆ. ಮಾತ್ರವಲ್ಲ ಜ್ವರದಿಂದ ಉಂಟಾಗುವ ಅಡ್ಡಪರಿಣಾಮಗಳು (ಸುಸ್ತು, ಬಳಲಿಕೆ, ಮೈಕೈನೋವು,) ಹಲವು ದಿನಗಳ ವರೆಗೂ ಕಾಡಲಿದ್ದು, ಒಮ್ಮೆ ಜ್ವರ ಬಂದರೆ ಗುಣ ಹೊಂದಲು 10-15 ದಿನಗಳ ಬೇಕಾಗುತ್ತದೆ. ಮಾತ್ರವಲ್ಲ ಗುಣಮುಖರಾದ ಬಳಿಕ ಹೆಚ್ಚಿನ ವಿಶ್ರಾಂತಿಕ ಅಗತ್ಯತೆ ಇದೆ ಎನ್ನುತ್ತಾರೆ ವೈದ್ಯರು.
ಇಂಜೆಕ್ಷನ್-ಮಾತ್ರೆಗೂ ಜಗ್ಗದ ಜ್ವರ: ಜೂನ್​ನಿಂದ ಡಿಸೆಂಬರ್​ವರೆಗೂ ಋತುಮಾನದ ಆಧಾರದ ಮೇಲೆ ಶೀತ, ನೆಗಡಿ, ವೈರಾಣು ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ವರ್ಷ ಹವಾಮಾನದ ವೈಪರಿತ್ಯದಿಂದಾಗಿ ವೈರಾಣು ಜ್ವರ ಪ್ರಕರಣಗಳು ತೀವ್ರವಾಗಿದ್ದು, ಒಂದು ಇಂಜೆಕ್ಷನ್​ಗೆ ಓಡಿ ಹೋಗುತ್ತಿದ್ದ ಜ್ವರ ಈಗ ಡಿಪ್ಸ್ ಹಾಕಿಸಿದರೂ 3-4 ದಿನಗಳವರೆಗೆ ಕಡಿಮೆ ಆಗುವುದೇ ಇಲ್ಲ. ಬಹುತೇಕರಿಗೆ ರಕ್ತ ಪರೀಕ್ಷೆ ಮಾಡಿಸುವುದು ವೈದ್ಯರಿಗೂ ಅನಿವಾರ್ಯವಾಗಿದೆ. ಅದರಲ್ಲೂ ಡೆಂಘ ಬಂದವರು ಗುಣ ಹೊಂದುವಷ್ಟರಲ್ಲಿ ಪ್ಲೇಟ್​ಲೆಟ್ ಪ್ರಮಾಣ ಅರಿಯಲು ನಿತ್ಯ ರಕ್ತ ಪರೀಕ್ಷೆ ಮಾಡಿಸಬೇಕಾದ ಸ್ಥಿತಿ ಇದೆ.
ಒಂದೇ ದಿನದಲ್ಲಿ ಬಿಸಿಲು, ಮಳೆ, ಚಳಿ ಎಲ್ಲಾ ಋತುಗಳನ್ನು ಕಾಣುವಂತಾಗಿದೆ. ಇಂತಹ ಸಂದರ್ಭದಲ್ಲಿ ವೈರಾಣು ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ಜನದಟ್ಟಣೆ ಇರುವ ಕಡೆಗಳಲ್ಲಿ ಮಾಸ್ಕ್ ಧರಿಸಬೇಕು. ಜ್ವರ ಬಂದಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆಯಬೇಕು.
| ಡಾ. ಲಕ್ಷ್ಮೀಪತಿ ಮಕ್ಕಳ ತಜ್ಞ, ಕೆ.ಜಿ.ಜನರಲ್ ಆಸ್ಪತ್ರೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 2 =
Remember me
