ಬೆಳಗಾವಿ:ಮಳೆಯಾಗಿಲ್ಲವೆಂದು ಗ್ರಾಮಸ್ಥರೆಲ್ಲ ಸೇರಿ ದೇವರಿಗೆ ಜಲ ದಿಗ್ಬಂಧನ ಹಾಕಿದ ಅಪರೂಪದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಮಳೆಗಾಲ ಆರಂಭವಾದರೂ ಬೆಳಗಾವಿಯ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದಲ್ಲಿ ಮಾತ್ರ ಮಳೆ ಶುರುವಾಗಿಲ್ಲ. ಜತೆಗೆ ಬರಗಾಲದ ಸೂಚನೆ ಸಿಕ್ಕ ಹಿನ್ನೆಲೆ ಗ್ರಾಮಸ್ಥರು ಊರಿನ ಸೂರ್ಯ ನಾರಾಯಣ ದೇವರಿಗೆ ಜಲದಿಗ್ಬಂಧನ ಹಾಕಿದ್ದಾರೆ.
ಸೂರ್ಯನಾರಾಯಣ ದೇವಸ್ಥಾನದ ಗರ್ಭಗುಡಿಗೆ, ಗ್ರಾಮಸ್ಥರು ಮಲಪ್ರಭಾ ನದಿಯಿಂದ ಹಾಗೂ ಬೊರ್​ವೇಲ್​ನಿಂದ ನೀರನ್ನು ಬಿಂದಿಗೆಯಲ್ಲಿ ಹೊತ್ತು ತಂದು ಹಾಕಿದ್ದಾರೆ. ಗರ್ಭಗುಡಿಯಲ್ಲಿನ ಸೂರ್ಯನಾರಾಯಣ ದೇವರ ಮೂರ್ತಿಯನ್ನು ಅರ್ಧ ನೀರಿನಿಂದ ಮುಳುಗಿಸಿ ಗರ್ಭಗುಡಿಯ ಬಾಗಿಲಿಗೆ ಬೀಗ ಜಡಿದು ಜಲದಿಗ್ಬಂಧನ ಹಾಕಿದ್ದಾರೆ.
ಇದನ್ನೂ ಓದಿ:ಕೊಳಕೆಗದ್ದೆ ಸಂಪರ್ಕಕ್ಕಿಲ್ಲ ರಸ್ತೆ, ಮಳೆಗಾಲದಲ್ಲಿ ದಿಗ್ಬಂಧನ.
ಬರಗಾಲದ ಸೂಚನೆ ಸಿಕ್ಕಾಗ ಗ್ರಾಮಸ್ಥರಿಂದ ಜಲ ದಿಗ್ಬಂಧನ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರತೀತಿ. ಗರ್ಭಗುಡಿಯಲ್ಲಿನ ದೇವರನ್ನು ನೀರಲ್ಲಿ ನಿಲ್ಲಿಸಿ ಜಲ ದಿಗ್ಬಂಧನ ಹಾಕಿ ಬೀಗ ಹಾಕಿದರೆ ಮಳೆಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಒಟ್ಟು 7 ದಿನಗಳ ಕಾಲ ಜಲ ದಿಗ್ಬಂಧನ ಹಾಕಿದಾಗ ಮಳೆಯಾಗುವ ವಾಡಿಕೆಯೂ ಇದೆ. 7 ದಿನಗಳ ನಂತರ ದೇವಸ್ಥಾನದ ಬಾಗಿಲನ್ನು ಗ್ರಾಮಸ್ಥರು ತೆರೆಯಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 1 =
Remember me
