ಕೊಪ್ಪಳ:ಕರೊನಾ ಆತಂಕ ಶುರುವಾದಾಗಿನಿಂದ ಕೆಲವು ವಿಚಿತ್ರಗಳೂ ನಡೆಯುತ್ತಿವೆ. ರಸ್ತೆ ಮೇಲೆ ನೋಟುಗಳು ಕಂಡುಬರುವ ಪ್ರಮಾಣವೂ ಹೆಚ್ಚಾಗಿದೆ. ಮೊದಲೆಲ್ಲ ರಸ್ತೆ ಮೇಲೆ ಬಿದ್ದಿರುವ 10 ರೂಪಾಯಿಯನ್ನೂ ಹಿಂದೆ ಮುಂದೆ ನೋಡದೆ ಸಿಕ್ಕವರು ಎತ್ತಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ…500 ರೂ.ಬಿದ್ದದ್ದರೂ ಅದನ್ನು ಮುಟ್ಟಲೂ ಹೋಗುತ್ತಿಲ್ಲ.
ನಗರದ ಕಲ್ಯಾಣನಗರ 1ನೇ ಕ್ರಾಸ್​​ನಲ್ಲಿ 500 ರೂ.ಬೆಲೆಯ ನೋಟು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆ ನೋಟಿನ ಮೇಲೆ ಕಲ್ಲನ್ನೂ ಇಡಲಾಗಿತ್ತು. ಹಾಗಾಗಿ ಯಾರೋ ಉದ್ದೇಶಪೂರ್ವಕವಾಗಿಯೇ ಅದನ್ನಲ್ಲಿಟ್ಟಿದ್ದಾರೆ ಎಂದು ಭಾವಿಸಿದ ಜನರು ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಇನ್ನು ಪೊಲೀಸರು ಕೂಡ ಹ್ಯಾಂಡ್​ ಗ್ಲೌಸ್​ ಹಾಕಿಕೊಂಡು, ಅದಕ್ಕೆ ಸ್ಯಾನಿಟೈಸರ್​ ಬಳಸಿ ನೋಟನ್ನು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)
ಕಡಿಮೆ ವೆಚ್ಚದಲ್ಲೇ ವೆಂಟಿಲೇಟರ್ ಸಿದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
