ಬೆಂಗಳೂರು:ರಾಜಾಜಿನಗರ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಬಂದ ರೈತ ವದ್ಧನನ್ನು ತಡೆದ ಸಿಬ್ಬಂದಿಗಳು ಹಾಕಿರುವ ಬಟ್ಟೆ ಕ್ಲೀನ್ ಆಗಿಲ್ಲ ಎಂದು ಒಳಗೆ ಪ್ರವೇಶಿಸಿಲ್ಲ. ಇದನ್ನು ಖಂಡಿಸಿದ ಸಹ ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬಿಜಿನೆಸ್ ಕಾನಕ್ಲೇವ್ ಗೆ ಅದ್ದೂರಿ ತರೆ, ಉದ್ಯಮ ದಿಗ್ಗಜರು, ಗಣ್ಯರಿಂದ ಪ್ರದರ್ಶನ ವೀಕ್ಷಣೆ
ಮಾನವೀಯತೆಯನ್ನೇ ಮರೆತು ಬಿಟ್ಟರಾ ನಮ್ಮ‌ ಮೆಟ್ರೋ ಸಿಬ್ಬಂದಿ? ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನ ಮಾಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಟಿಫ್ ಟಾಪ್ ಆಗಿ ಡ್ರೆಸ್ ಹಾಕೊಂಡ್ರೆ ಮಾತ್ರ ಮೆಟ್ರೋದೊಳಗೆ ಎಂಟ್ರಿನಾ? ಬಟ್ಟೆ ಕ್ಲೀನ್ ಇಲ್ಲ ಅಂತ ರೈತನನ್ನು ಮೆಟ್ರೋ ಒಳಗೆ ಬಿಡದ ಸಿಬ್ಬಂದಿ. ರಾಜಾಜಿನಗರ ನಮ್ಮ ಮೆಟ್ರೋ ಸಿಬ್ಬಂದಿಯಿಂದ ಅತಿರೇಕದ ವರ್ತನೆ. ಬಡ ರೈತನ ಮೇಲೆ‌ ಸಿಬ್ಬಂದಿಯ ದುರಾಹಂಕಾರದ‌ ವರ್ತನೆ ದೃಶ್ಯ ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಜ್ಞಾನವಾಪಿ: ಹೈಕೋರ್ಟ್‌ನಿಂದ ಮಸೀದಿ ಸಮಿತಿಗೆ ಶಾಕ್, ನೆಲಮಾಳಿಗೆಯಲ್ಲಿ ಮುಂದುವರಿಯಲಿದೆ ವ್ಯಾಸ್ ಜಿ ಪೂಜೆ
ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರ ಕಿಡಿಕಾರಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಅಂತ ಒಳಗೆ ಬಿಡ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ವ್ಯಕ್ತಿಯೊಬ್ಬರು ಸಿಬ್ಬಂದಿಗೆ ಕ್ಯಾರೇ ಎನ್ನದೇ ವೃದ್ಧನನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.

ಸಿಬ್ಬಂದಿಗಳ ಅತಿರೇಕದ ವರ್ತನೆಯ ವಿಡಿಯೋ ಸದ್ಯ ಎಕ್ಸ್​ನಲ್ಲಿ ( ಈ ಹಿಂದಿನ ಟ್ವಿಟರ್) ಭಾರೀ ವೈರಲ್ ಆಗಿದೆ. ಬಿಎಂಆರ್​ಸಿಎಲ್​ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಎಂದು ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ರೈತ ಬೆಳೆ ಬೆಳೆದಿಲ್ಲ ಅಂದ್ರೆ ನೀವೇನು ತಿಂತೀರಾ ಅಂತ ಜನರು ಪ್ರಶ್ನಿಸಿದ್ದಾರೆ. ಈ ಕೂಡಲೇ ಮೆಟ್ರೋ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದಾರೆ.
IPL 2024: ಈ ಸ್ಟಾರ್​ ಆಟಗಾರ ಇಲ್ಲದಿದ್ದರೆ ಐಪಿಎಲ್ ನೋಡಲು ಬಲುಕಷ್ಟ ಅಂತಿದ್ದಾರೆ ಫ್ಯಾನ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
