ಮಂಡ್ಯ:ಖಾಸಗಿ ಶಾಲೆಗಳ ಎದುರು ರಾತ್ರಿಯಿಂದಲೂ ಮಕ್ಕಳ ದಾಖಲಾತಿಗಾಗಿ ಜನರ ಕ್ಯೂ ಇದೆ ಎಂದರೆ ಆಶ್ಚರ್ಯ ಆಗಲಾರದು. ಆದರೆ ಇಲ್ಲೊಂದು ಅಪರೂಪದ ಘಟನೆ ಪತ್ತೆಯಾಗಿದ್ದು ಈ ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ದಾಖಲಿಸಬೇಕು ಎಂದು ಪೋಷಕರು ಬೆಳಗ್ಗೆ 5 ಗಂಟೆಯಿಂದ ನಿಂತಿದ್ದಾರೆ!
ಹೌದು, ಇದು ನಂಬಲು ಕಠಿಣವಾದರೂ ಸತ್ಯ! ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಕೆ.ಆರ್​ ಪೇಟೆ ಸರ್ಕಾರಿ ಶಾಲೆಯಲ್ಲಿ. ಕೆ.ಆರ್.ಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ಸರದಿ ಸಾಲಿನಲ್ಲಿ ಪೋಷಕರು ನಿಂತಿದ್ದು ಹೈ ಸ್ಕೂಲ್‌ಗೆ ಮಕ್ಕಳನ್ನು ಸೇರಿಸಲು ಬೆಳಗ್ಗೆಯಿಂದ‌ ಕಾದು ಕುಳಿತಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ‌ ಉತ್ತಮ ಫಲಿತಾಂಶವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡಿದ್ದು ಈ ಹಿನ್ನೆಲೆಯಲ್ಲಿ, ‘ನಮ್ಮ ಮಕ್ಕಳೂ ಇದೇ ಶಾಲೆಯಲ್ಲಿ ಓದಿ ಒಳ್ಳೆಯವರಾಗಲಿ’ ಎಂದು‌ ಪೋಷಕರು ಬೆಳಗ್ಗೆ 5 ಗಂಟೆಯಿಂದ ಟೋಕನ್‌ಗಾಗಿ ಕಾದು ಕುಳಿತಿದ್ದಾರೆ.
ಇತ್ತೀಚೆಗೆ ಬೇಡಿಕೆ ಹೆಚ್ಚಿರುವ ಕಾರಣ ಶಾಲೆ ಪ್ರವೇಶಕ್ಕೆ ಟೋಕನ್ ಪದ್ಧತಿ ಶುರುಮಾಡಲಾಗಿದೆ. ಮೊದಲು ಟೋಕನ್ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವ ಕಾರಣ ಬೆಳಗ್ಗೆಯಿಂದಲೇ ಶಾಲೆಯ ಮುಂದೆ ಕಾದು ಪೋಷಕರು ಕುಳಿತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − two =
Remember me
