ಬಳ್ಳಾರಿ/ ಹಾಸನ:ಕರೊನಾ ದಿಗ್ಬಂಧನ ಅಂತ್ಯವಾಗಿಲ್ಲ. ಆದರೆ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬುದನ್ನು ಜನ ಪಾಲಿಸುತ್ತಿಲ್ಲ. ಅದರಲ್ಲೂ ದಿನಸಿ, ಹಾಲು, ತರಕಾರಿಗಳಿಗಾಗಿ ಹೊರಬರುವುದು ಅನಿವಾರ್ಯವಾಗಿದೆ.
ಈ ನಡುವೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಬಡವರು, ವಲಸೆ ಕಾರ್ಮಿಕರು ಮತ್ತು ಸ್ಥಳೀಯರಿಗಾಗಿ ಆಹಾರ ಮತ್ತು ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದಕ್ಕಾಗಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.
ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ “ಆಹಾರಾನಂದ” ಹೆಸರಿನಲ್ಲಿ ಆಹಾರ ಕಿಟ್ ವಿತರಣೆಗಾಗಿ ಶನಿವಾರ ಹೊಸಪೇಟೆಯಲ್ಲಿ ಟೋಕನ್ ನೀಡಲು ಮುಂದಾಗಿದ್ದರು. ಇದನ್ನು ಪಡೆಯಲು ಕ್ಷೇತ್ರದ ಜನರು ಸಾವಿರಾರು ಜನರು ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಸಾಲುಗಟ್ಟಿದ್ದರು. ಹೀಗಾಗಿ ಉಚಿತ ಆಹಾರ ವಿತರಣೆಯೇ ಸಾಂಕ್ರಾಮಿಕ ಸೋಂಕು ಹರಡಲು ಕಾರಣವಾಗುತ್ತಾ ಎಂಬ ಆತಂಕವೂ ಎದುರಾಗಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಆಹಾರ ವಿತರಣೆ ಕಾರ್ಯಕ್ರಮವನ್ನು ಸಚಿವ ಆನಂದ್​ ಸಿಂಗ್​ ರದ್ದುಗೊಳಿಸಿದರು.
ಇನ್ನು, ಹಾಸನದಲ್ಲೂ ಜನರು ಆಹಾರ ಕಿಟ್​ಗಳಿಗಾಗಿ ಮುಗಿ ಬಿದ್ದಿದ್ದರು.ನಗರದ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಲು ಜೆಡಿಎಸ್​ ಮುಖಂಡ ಅಗಿಲೆ ಯೋಗೀಶ್ ನಿರ್ಧರಿಸಿದ್ದರು. ಆದರೆ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಆಯೋಜಕರು ಮುಜುಗುರ ಅನುಭವಿಸಬೇಕಾಯಿತು.
ಪರಸ್ಪರ ದೂರದಲ್ಲಿ ನಿಲ್ಲುವಂತೆ ಎಷ್ಟೇ ಹೇಳಿದರೂ ಜನರು ಕೇಳಲಿಲ್ಲ. ಹೀಗಾಗಿ ಕೆಲ ಕಾಲ ಆಹಾರ ಕಿಟ್ ವಿತರಣೆ ಸ್ಥಗಿತಗೊಳಿಸಲಾಯಿತು. ನಗರಸಭೆ ಜೆಡಿಎಸ್ ಸದಸ್ಯರೂ ಜನರ ನಿಯಂತ್ರಿಸಲು ಹರಸಾಹಸಪಟ್ಟರು. ಒಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಜನರು ಅರಿಯದಿರುವುದು ವಿಪರ್ಯಾಸವಾಗಿದೆ.

ಕಾಶ್ಮೀರಿ ವಿದ್ಯಾರ್ಥಿಗಳು ದೇಶದ್ರೋಹ ಎಸಗಿದ್ದಕ್ಕೆ ಸಾಕ್ಷ್ಯಾಧಾರಗಳಿಲ್ಲ ಹೈಕೋರ್ಟ್​ ನ್ಯಾಯಪೀಠ ಅಭಿಪ್ರಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
