ಬಾಗಲಕೋಟೆ:ಕೆಲವು ಕಳ್ಳರು ರೆಡ್​ ಹ್ಯಾಂಡೆಡ್​ ಸಿಕ್ಕಿಹಾಕಿಕೊಳ್ಳುತ್ತಾರೆ, ಮಾತ್ರವಲ್ಲ ಸಿಕ್ಕಿಬಿದ್ದು ಜನರಿಂದ ಪೆಟ್ಟು ಕೂಡ ತಿನ್ನುತ್ತಾರೆ. ಅಂಥ ಪ್ರಕರಣಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆ ಆಗಿದ್ದರೂ ಆಗಿರಬಹುದು. ಏಕೆಂದರೆ ಇಲ್ಲೊಬ್ಬ ಅಪರಿಚಿತ ವ್ಯಕ್ತಿಯನ್ನು ಕಳ್ಳನೆಂದು ಆರೋಪಿಸಿರುವ ಸ್ಥಳೀಯರು, ಆತನನ್ನು ಎಲೆಕ್ಟ್ರಿಕ್​ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಗದಗ ಜಿಲ್ಲೆಯವನು ಎನ್ನಲಾಗಿದೆ. ಅಮೀನಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಗದಗ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ. ಆರೋಪಿಯೊಂದಿಗೆ ಇನ್ನೂ ನಾಲ್ವರಿದ್ದರು ಎನ್ನಲಾಗಿದೆ. ಆರೋಪಿ ಸಿಕ್ಕಿ ಬೀಳುತ್ತಿದ್ದಂತೆ ಉಳಿದ ನಾಲ್ವರು ವಾಹನವೇರಿ ಪರಾರಿಯಾಗಿದ್ದಾರೆ. ಆರೋಪಿಯನ್ನು ಕಳ್ಳನೆಂದು ಭಾವಿಸಿರುವ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?
ಸಿಕ್ಕಿಹಾಕಿಕೊಂಡಿರುವ ಆರೋಪಿ ತಾನು ಕಳ್ಳತನಕ್ಕೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ಕಾಡುಹಂದಿ ಹಿಡಿಯಲು ಎಂದು ಬಂದಿದ್ದೆ, ಕಳವಿಗೆ ಬಂದಿಲ್ಲ ಎಂಬುದಾಗಿ ಹೇಳಿದ್ದಾನೆ. ಆದರೆ ಗುಡೂರ ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಬಂದಿದ್ದು, ಆತ ಕಳ್ಳನೇ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಪದ ಸತ್ಯಾಸತ್ಯತೆ ತಿಳಿಯಲು ಗದಗ ಪೊಲೀಸರನ್ನು ಸ್ಥಳೀಯ ಪೊಲೀಸರು ಸಂಪರ್ಕಿಸಿದ್ದು, ಆರೋಪಿ ಮೇಲೆ ಕಳ್ಳತನದ ಆರೋಪಗಳು ಇವೆಯೇ ಎಂಬುದರ ಮಾಹಿತಿ ಕೋರಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ದೇವಸ್ಥಾನಕ್ಕೆಂದು ಬೆಳ್ಳಂಬೆಳಗ್ಗೆಯೇ ಮನೆಬಿಟ್ಟ ಮಹಿಳೆ ಕೇವಲ 2 ಗಂಟೆಯಲ್ಲಿ ಕುಟುಂಬಕ್ಕೆ ಕೊಟ್ಟಳು ಶಾಕ್​!

ಸೆಕ್ಸ್​ಡಾಲ್​ ಜತೆ ವರ್ಷ ಇದ್ದೆ- ಯುವತಿಗಿಂತ ಇದೇ ಬೆಸ್ಟ್ ಅನ್ನಿಸಿ ಮದ್ವೆಯಾಗ್ತಿದ್ದೇನೆ ಎಂದ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
