ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಿಂದ ಲಖನೌಗೆ ಪ್ರಯಾಣಿಸಲು ಆಗಮಿಸಿದ್ದ ಕಸ್ಟಮ್್ಸ ಅಧಿಕಾರಿ ಕೈಯಲ್ಲಿದ್ದ ಸೂಟ್​ಕೇಸ್​ನಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾದರೆ ಇನ್ನೊಂದೆಡೆ ಶೌಚಗೃಹದಲ್ಲಿ ಆತನ ಪತ್ನಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ ಹಣದ ರಾಶಿ ಕಂಡು ಭದ್ರತಾ ಅಧಿಕಾರಿಗಳೇ ಹೌಹಾರಿದ್ದಾರೆ. ಕಸ್ಟಮ್್ಸ ದಂಪತಿಯಿಂದ ಒಟ್ಟಾರೆ 74.81 ಲಕ್ಷ ರೂ. ಜಪ್ತಿ ಮಾಡಲಾಗಿದೆ.
ಲಖನೌ ಮೂಲದ ಕಸ್ಟಮ್್ಸ ಅಧಿಕಾರಿ ಮಹಮ್ಮದ್ ಇರ್ಫಾನ್ ಅಹಮದ್ ಹಾಗೂ ಆತನ ಪತ್ನಿ ಹಣದ ಸಮೇತ ಸಿಕ್ಕಿಬಿದ್ದಿರುವ ದಂಪತಿ. ಹಣವನ್ನು ಜಪ್ತಿ ಮಾಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಸಿಬ್ಬಂದಿ, ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ದಂಪತಿಗೆ ಐಟಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಇರ್ಫಾನ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್್ಸ ಅಧಿಕಾರಿಯಾಗಿದ್ದಾರೆ. ಇರ್ಫಾನ್ ಪತ್ನಿ ಜತೆ 74.81 ಲಕ್ಷ ರೂ.ನೊಂದಿಗೆ ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಲಖನೌಗೆ ತೆರಳಲು ಮುಂಗಡವಾಗಿ ವಿಮಾನದ ಎರಡು ಟಿಕೆಟ್ ಕಾಯ್ದಿರಿಸಿದ್ದರು. ಬೆಳಗ್ಗೆ 9.20ಕ್ಕೆ ಬೋರ್ಡಿಂಗ್ ಆರಂಭವಾದ ವೇಳೆ ಸಿಐಎಸ್​ಎಫ್ ಅಧಿಕಾರಿಗಳು, ಇರ್ಫಾನ್ ಅವರನ್ನು ಪರಿಶೀಲನೆಗೆ ಒಳಪಡಿಸಿದ್ದರು.
ಈ ವೇಳೆ ಆತಂಕಗೊಂಡ ಅಧಿಕಾರಿಯ ಪತ್ನಿ ಹಣವಿದ್ದ ಸೂಟ್​ಕೇಸ್ ತೆಗೆದುಕೊಂಡು ಬಾತ್ ರೂಂಗೆ ತೆರಳಿದ್ದಳು. ಅಲ್ಲಿ 10 ಲಕ್ಷ ರೂ.ಗಳನ್ನು ಎಸೆದು ಪರಾರಿಯಾಗಲು ಯತ್ನಿಸಿದಳು ಎನ್ನಲಾಗಿದೆ. ಈ ವೇಳೆ ಸಿಐಎಸ್​ಎಫ್ ಅಧಿಕಾರಿಗಳ ಗಮನಕ್ಕೆ ಬಂದು ಸೂಟ್​ಕೇಸ್ ಪರಿಶೀಲನೆ ನಡೆಸಿದಾಗ ಅದರಲ್ಲಿದ್ದ 74,81,500 ರೂ. ಮೌಲ್ಯದ ನೋಟುಗಳು ಪತ್ತೆಯಾಗಿವೆ. ಐದು ಚಿನ್ನದ ಓಲೆ, 1 ನೆಕ್ಲೆಸ್, ಬಳೆ ಸೇರಿ 200 ಗ್ರಾಂ ಚಿನ್ನಾಭರಣ ಸಹ ಬ್ಯಾಗ್​ನಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೋಟು ಕಂಡು ಬೆಚ್ಚಿಬಿದ್ದ ಜನ
ಇರ್ಫಾನ್ ಪತ್ನಿ ತಮ್ಮ ಬ್ಯಾಗ್​ನಲ್ಲಿದ್ದ 10 ಲಕ್ಷ ರೂ. ಕಂತೆ- ಕಂತೆ ನೋಟನ್ನು ವಿಮಾನ ನಿಲ್ದಾಣದ ಬಾತ್​ರೂಂನಲ್ಲಿ ಎಸೆಯುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಅಚ್ಚರಿಗೊಂಡಿದ್ದರು ಎನ್ನಲಾಗುತ್ತದೆ. ಇಷ್ಟೊಂದು ಹಣವನ್ನು ನಗದು ರೂಪದಲ್ಲಿ ಏಕೆ ತೆಗೆದುಕೊಂಡು ಹೋಗುತ್ತಿದ್ದರು? ಬ್ಯಾಂಕ್ ಮೂಲಕ ವರ್ಗಾವಣೆ ಮಾಡಬಹುದಿತ್ತಲ್ಲವೇ ಎಂಬ ಸಿಐಎಸ್​ಎಫ್ ಸಿಬ್ಬಂದಿ ಪ್ರಶ್ನೆಗೆ ದಂಪತಿ ಗೊಂದಲದ ಹೇಳಿಕೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇರ್ಫಾನ್ ಕಸ್ಟಮ್್ಸ ಅಧಿಕಾರಿಯಾಗಿದ್ದು, ದಾಖಲೆಯಿಲ್ಲದ ಹಣವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಜಮೀನು ಖರೀದಿಸಲು ತಂದಿದ್ದ ಹಣ
ಹಣ ಜಪ್ತಿ ಮಾಡಿದ ಸಿಐಎಸ್​ಎಫ್ ಸಿಬ್ಬಂದಿ ಇದಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಇರ್ಫಾನ್ ಬಳಿ ಕೇಳಿದ್ದರು. ದಾಖಲೆ ನೀಡುವಲ್ಲಿ ವಿಫಲವಾದ ಇರ್ಫಾನ್, ಲಖನೌನಲ್ಲಿ ಜಮೀನನ್ನು ಖರೀದಿಸುವ ಉದ್ದೇಶದಿಂದ ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೆ. ದಯವಿಟ್ಟು ನನ್ನ ಹಣವನ್ನು ವಾಪಾಸ್ ಕೊಡಿ ಎಂದು ಸಿಬ್ಬಂದಿ ಬಳಿ ಮನವಿ ಮಾಡಿದ್ದರು. ಹಣದ ಬಗ್ಗೆ ಗೊಂದಲದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಯಿತು ಎಂದು ಗೊತ್ತಾಗಿದೆ.
ವಶಪಡಿಸಿಕೊಂಡ ಹಣ ಐಟಿ ಇಲಾಖೆಗೆ ಹಸ್ತಾಂತರ
ಸಿಐಎಸ್​ಎಫ್ ಸಿಬ್ಬಂದಿ ಈ ವಿಚಾರವನ್ನು ವಿಮಾನ ನಿಲ್ದಾಣದ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳು ಜಪ್ತಿ ಮಾಡಿದ ಅಷ್ಟೂ ಹಣ, ಚಿನ್ನಾಭರಣವನ್ನು ಆದಾಯ ತೆರಿಗೆ ಇಲಾಖೆಗೆ (ಐಟಿ) ಹಸ್ತಾಂತರಿಸಿದ್ದಾರೆ. ಐಟಿ ಅಧಿಕಾರಿಗಳು ಜಪ್ತಿ ಮಾಡಿದ ಹಣಕ್ಕೆ ಸೂಕ್ತ ದಾಖಲೆ ನೀಡುವಂತೆ ಇರ್ಫಾನ್​ಗೆ ಸೂಚಿಸಿ ಕಾಲಾವಕಾಶ ನೀಡಿದ್ದಾರೆ. ಅವರು ಐಟಿ ಇಲಾಖೆಗೆ ಸೂಕ್ತ ದಾಖಲೆ ನೀಡಿದರೆ, ಜಪ್ತಿ ಮಾಡಿದ ಹಣ, ಚಿನ್ನಾಭರಣವನ್ನು ಮರಳಿ ಪಡೆಯಬಹುದಾಗಿದೆ.
ಇಬ್ಬರು ಮೊಮ್ಮಕ್ಕಳ ಅಜ್ಜಿ ಈಗ್ಲೂ ಸ್ವಿಮ್​ಸೂಟ್​ನಲ್ಲಿ ಮಿಂಚಿಂಗ್!; ಯಂಗ್ ಆಗಿರೋದ್ ಹೆಂಗೆ ಅಂತ ಟಿಪ್ಸ್ ಕೂಡ ಕೊಟ್ಟಿದ್ದಾರೆ..

‘ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!’ ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ

ಮದ್ವೆಯಾಗಿ, ಮಗು ಇರುವವನ ಮೇಲೇ ದಾಖಲಾಯ್ತು ಮೊದಲ ಲವ್​ ಜಿಹಾದ್​ ಕೇಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
