ಪ್ರಶಾಂತ ರಿಪ್ಪನ್​ಪೇಟೆ, ಬೆಂಗಳೂರು:ರಾಜ್ಯಾದ್ಯಂತ ಉಷ್ಣಹವೆ(ಹೀಟ್ ವೇವ್)ಮುಂದುವರೆದಿದ್ದು ಬೆಂಗಳೂರಿನಲ್ಲೂ ಉಷ್ಣಾಂಶ ಏರುಗತಿಯಲ್ಲಿ ಸಾಗಿದೆ.ಬಿಸಿಲಿನಿಂದ ತತ್ತರಿಸಿರುವ ಜನ ಹಣ್ಣು,ಜ್ಯೂಸ್,ತಂಪು ಪಾನೀಯಗಳಿಗೆ ಮೊರೆಹೋಗುತ್ತಿದ್ದಾರಾದರೂ ಅವು ತಾತ್ಕಾಲಿಕ ಧಣಿವು ನಿವಾರಿಸಿಕೊಳ್ಳುವ ಮಾರ್ಗಗಳಾಗಿದ್ದು,ದೀರ್ಘಕಾಲ ತಂಪು ಅನುಭವ ಪಡೆಯುವುದಕ್ಕಾಗಿ ವಾಟರ್ ಗೇಮ್ ಪಾರ್ಕ್‌ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
ಮಧ್ಯಾಹ್ನ12ರಿಂದ3ಗಂಟೆಯವರೆಗೆ ಮನೆ ಅಥವಾ ಕಚೇರಿಯಿಂದ ಹೊರಬರುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಬಿಸಿಲ ಜಳ ಕಾಡುತ್ತಿದೆ.ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರದ್ದು ತೀರಾ ಸಂಕಷ್ಟದ ದಿನಗಳಾಗಿವೆ.ಜೊತೆಗೆ ಬಹುತೇಕ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಬಂದಿದ್ದು,ಮನೆಯಲ್ಲಿರುವ ಮಕ್ಕಳನ್ನು ಸುಧಾರಿಸುವುದು ಪೋಷಕರಿಗೆ ದೊಡ್ಡ ತಲೆನೋವಾಗಿದೆ.ಈ ಎಲ್ಲ ಕಾರಣಗಳಿಂದ ವಯಸ್ಸಿನ ಭೇದವಿಲ್ಲದೆ ಫ್ಯಾಮಿಲಿ ಸಮೇತ ರೆಸಾರ್ಟ್‌ಗಳತ್ತ ಮುಖ ಮಾಡುತ್ತಿದ್ದಾರೆ.ಇದರಿಂದ ಬೆಂಗಳೂರಿನ ಸುತ್ತಮುತ್ತ ಇರುವ ರೆಸಾರ್ಟ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ರೆಸಾರ್ಟ್‌ಗಳಲ್ಲಿ ವಸತಿ ಸಹಿತ ಅಥವಾ ಡೇ ಔಟಿಂಗ್ ವಿತ್ ಫುಡ್ ಕಾನ್ಸೆಪ್ಟ್‌ಗಳಿದ್ದು,ಡೇ ಔಟಿಂಗ್ ಬಗ್ಗೆ ಹೆಚ್ಚು ಜನರು ಒಲವು ವ್ಯಕ್ತಪಡಿಸುತ್ತಿದ್ದಾರೆ.ಸಾಮಾನ್ಯವಾಗಿ ಬೆಳಗ್ಗೆ9ರಿಂದ ಸಂಜೆ6ರವರೆಗೆ ರೆಸಾರ್ಟ್‌ಗಳಲ್ಲಿದ್ದು ಊಟ,ತಿಂಡಿ ಜೊತೆಗೆ ವಿವಿಧ ಗೇಮ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಅದರಲ್ಲೂ ವಾಟರ್ ಗೇಮ್‌ಗಳು ಅತಿಹೆಚ್ಚು ಜನರನ್ನು ಆಕರ್ಷಿಸುತ್ತಿವೆ.
ಸಾಮಾನ್ಯವಾಗಿ ಹಿರಿಯರಿಗೆ ಬೇರೆ,ಮಕ್ಕಳಿಗೆ ಬೇರೆ ದರ ನಿಗದಿ ಮಾಡುವ ರೆಸಾರ್ಟ್‌ಗಳು ವಿಶೇಷ ದಿನಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಆಫರ್‌ಗಳನ್ನು ನೀಡುತ್ತವೆ.ಅದರಂತೆ ಬೇಸಿಗೆಯ ತೀವ್ರತೆ ಹೆಚ್ಚಾಗಿರುವುದು ಹಾಗೂ ರಜೆಯಲ್ಲಿರುವ ಮಕ್ಕಳನ್ನು ಆಕರ್ಷಿಸಲು ಕೆಲ ರೆಸಾರ್ಟ್‌ಗಳು ಡಿಸ್ಕೌಂಟ್ ಮೂಲಕ ವಿವಿಧ ಆಫರ್‌ಗಳನ್ನು ಘೋಷಿಸಿವೆ.
ರೆಸಾರ್ಟ್‌ಗಳಲ್ಲಿ ಔಟ್‌ಡೋರ್ ಮತ್ತು ಇನ್‌ಡೋರ್ ಗೇಮ್‌ಗಳು ಪ್ರತ್ಯೇಕವಾಗಿದ್ದು,ಕೆಲವು ಕಾಂಪ್ಲಿಮೆಂಟರಿ ಇದ್ದರೆ;ಇನ್ನು ಕೆಲವು ಪ್ರತ್ಯೇಕ ಹಣ ಪಾವತಿಸಬೇಕಾಗಿರುತ್ತದೆ.ಆದರೆ ಜಲಕ್ರೀಡೆಗಳು ಮಾತ್ರ ಎಲ್ಲವೂ ಉಚಿತವಾಗಿರುತ್ತವೆ.ಬೇಸಿಗೆಯ ಬೇಗೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿಯೇ ರೆಸಾರ್ಟಿಗೆ ಹೋಗುವ ಬಹುತೇಕರು ಹೆಚ್ಚಿನ ಸಮಯವನ್ನು ವಾಟರ್ ಗೇಮ್‌ನಲ್ಲೇ ಕಳೆಯುತ್ತಾರೆ
ಜಲಕ್ರೀಡೆಗಳಲ್ಲಿ ವಿಶೇಷವಾಗಿ ಸ್ಲೈಡಿಂಗ್,ವೇವ್ ಪೂಲ್,ಸ್ವಿಮ್ಮಿಂಗ್ ಪೂಲ್,ಲೇಸಿ ರಿವರ್,ಆ್ಯಕ್ಟಿವಿಟಿ ಪೂಲ್,ಕಿಡ್ಸ್ ಪೂಲ್,ಕಿಡ್ಸ್ ಸ್ಲೈಡ್,ರೈನ್ ಡ್ಯಾನ್ಸ್ ಹೀಗೆ ಬಹುತೇಕ ನೀರಿನಲ್ಲೇ ಕಾಲ ಕಳೆಯುವ ವಾಟರ್ ಗೇಮ್‌ಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ.
ಬೆಂಗಳೂರಿನಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ರೆಸಾರ್ಟ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.ಜನರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಸೇವೆ ಮತ್ತು ಭದ್ರತೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂದು ಖಾಸಗಿ ರೆಸಾರ್ಟ್ ಒಂದರ ಸಿಬ್ಬಂದಿ ಹೇಳಿದ್ದಾರೆ.
ಕಾರು ಮತ್ತಿತರ ವಾಹನ ತೊಳೆಯುವುದಕ್ಕೆ,ಸ್ವಿಮ್ಮಿಂಗ್ ಪೂಲ್‌ಗಳಿಗೆ ಕಾವೇರಿ ನೀರು ಬಳಸದಂತೆ ಜಲಮಂಡಳಿ ಸೂಚನೆ ನೀಡಿದೆ.ಬಹುತೇಕ ರೆಸಾರ್ಟ್‌ಗಳು ಬೆಂಗಳೂರಿನ ಹೊರ ವಲಯದಲ್ಲಿರುವುದರಿಂದ ಜಲಕ್ರೀಡೆಗಳಿಗೆ ಬೇಕಾದ ನೀರನ್ನು ತಮ್ಮದೇ ಬೋರ್‌ವೆಲ್‌ಗಳಿಂದ ಬಳಸುತ್ತಿದ್ದು,ಜಲಮಂಡಳಿಯ ನಿಯಮವನ್ನು ಪಾಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಜಲಕ್ರೀಡೆಯ ಮೊರೆ ಹೋಗುವವರು ಚರ್ಮದ ರಕ್ಷಣೆ ಬಗ್ಗೆ ಎಚ್ಚರ ವಹಿಸಬೇಕು.ನೀರನ್ನು ಸ್ವಚ್ಛಗೊಳಿಸಲು ಕ್ಲೋರಿನ್ ಬಳಸುವುದರಿಂದ ಆ ನೀರಿನಲ್ಲಿ ದೀರ್ಘ ಕಾಲ ಇರುವುದು ಚರ್ಮದ ಅಲರ್ಜಿ,ತುರಿಕೆಗೆ ಕಾರಣವಾಗಬಹುದು.ಮಕ್ಕಳ ಚರ್ಮ ಬಹಳ ಸೂಕ್ಷ್ಮವಾಗಿರುವುದರಿಂದ ಕೆಂಪು ಅಥವಾ ಕಪ್ಪು ಬಣ್ಣದ ಚಿಕ್ಕ ಗುಳ್ಳೆಗಳಾಗಬಹುದು.ಬೇಸಿಗೆಯಲ್ಲಿ ಂಗಸ್ ಸಮಸ್ಯೆ ಸಾಮಾನ್ಯವಾಗಿದ್ದು,ಒಂದೇ ವೇಳೆ ಬಹುಜನರು ಸ್ವಿಮ್ಮಿಂಗ್ ಪೂಲ್ ಬಳಸುವುದು ಸುರಕ್ಷಿತವಲ್ಲ.ಅಶುದ್ಧ ನೀರಿನಲ್ಲಿ ಹೆಚ್ಚು ಸಮಯ ಇರುವುದರಿಂದ ಸ್ವಿಮ್ಮರ್ ಇಚ್ ಅಥವಾ ಸೆರ್ಕೇರಿಯಲ್ ಡರ್ಮಟೈಟಿಸ್ ಎಂಬ ಸಮಸ್ಯೆ ಎದುರಾಗಬಹುದು ಎಂದು ಇಎಸ್​ಐ ಆಸ್ಪತ್ರೆ ಹಿರಿಯ ಚರ್ಮರೋಗ ತಜ್ಞರಾದ ಡಾ.ಎಂ.ಎಸ್.ಗಿರೀಶ್ ಎಚ್ಚರಿಸಿದ್ದಾರೆ.
“ಬೆಂಗಳೂರಿನಲ್ಲಿ ಬಿಸಿಲಿನ ತಾಪ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.ಅತಿಯಾದ ಬಿಸಿಲು ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿದೆ.ಮನೆಯಲ್ಲಿ ್ಯಾನ್ ಗಾಳಿ ಅರ್ಧ ಗಂಟೆಯ ನಂತರ ಬಿಸಿಯಾಗುತ್ತಿದೆ.ಕೊನೇ ಪಕ್ಷ ರೆಸಾರ್ಟ್‌ಗಳಿಗೆ ಹೋದಾಗ ದಿನಪೂರ್ತಿ ನೀರಿನಲ್ಲಿ ಆಟವಾಡುವುದು ಸ್ವಲ್ಪ ಮಟ್ಟಿಗೆ ತಂಪು ಅನುಭವ ನೀಡುತ್ತದೆ.ಜೊತೆಗೆ ಕುಟುಂಬ ಸದಸ್ಯರು,ಸ್ನೇಹಿತರೊಂದಿಗೆ ಹೊರಗಡೆ ಹೋಗುವುದು ಚೇಂಜ್ ಅನಿಸುತ್ತದೆ.ಆದರೆ ರೆಸಾರ್ಟ್‌ಗಳು ನೀರಿನ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕ.”
–ಭಾರತಿ ಪ್ರಕಾಶ್,ರೆಸಾರ್ಟಿಗೆ ಭೇಟಿ ನೀಡಿದವರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
