ವಿಜಯನಗರ:ವಿಮೆ ಹಣಕ್ಕಾಗಿ ಸುಳ್ಳು ದೂರು ನೀಡಿದ ಮೂವರು ಆರೋಪಿಗಳ ಪೈಕಿ ಒಬ್ಬ ಸಿಕ್ಕಿಹಾಕಿಕೊಂಡಿದ್ದು, ಹಣ ಎಣಿಸಬೇಕಾಗಿದ್ದವ ಇದೀಗ ಕಂಬಿ ಎಣಿಸುತ್ತಿದ್ದಾನೆ. ಈ ಪ್ರಕರಣದಲ್ಲಿ ಗಂಗಾವತಿಯ ನಿವಾಸಿ ಮುಸ್ತಾಫ್ ಅಹಮ್ಮದ್ ಹಾಗೂ ಸೈಯದ್ ಜಾಫರ್ ಮತ್ತು ಇನ್ನೊಬ್ಬ ಆರೋಪಿಗಳು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಹೆದ್ದಾರಿಯಲ್ಲಿ ಹೋಗುವಾಗ ಅಪರಿಚಿತರು ಕಣ್ಣಿಗೆ ಝಂಡು ಬಾಂಬು ಹಚ್ಚಿ, ಹಲ್ಲೆ ಮಾಡಿ ಇನ್ನೋವಾ ಕಾರ್ ತೆಗೆದುಕೊಂಡು ಹೋಗಿದ್ದಾರೆಂದು ಈ ಆರೋಪಿಗಳು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:ಮಸೀದಿ-ಮಂದಿರಗಳ ಧ್ವನಿವರ್ಧಕದ ಶಬ್ದ ತಗ್ಗಿಸದಿದ್ದರೆ ಕಾನೂನುಕ್ರಮ: ಪೊಲೀಸ್ ಕಮಿಷನರ್
ಪ್ರಕರಣ ವಿಚಾರಣೆ ಕೈಗೊಂಡ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ ದೂರು ನೀಡಿದ್ದವರೇ ಹಿರೇಖೇಡ್ ಗ್ರಾಮದಲ್ಲಿ ವಾಹನ ಬಚ್ಚಿಟ್ಟು ವಿಮಾ ಕಂಪನಿಯಿಂದ ಹಣ ಲಪಟಾಯಿಸಲು ಹೊಂಚು ಹಾಕಿರುವ ಮಾಹಿತಿ ಲಭಿಸುತ್ತದೆ. ಆ ಮೇರೆಗೆ ಸಯ್ಯದ್​ ಜಾಫರ್ ಎಂಬಾತನನ್ನು ಬಂಧಿಸಿದ್ದು, ಇನ್ನಿಬ್ಬರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್​​ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
