ಬೆಂಗಳೂರು:ಕ್ಯಾನ್ಸರ್​,ಕಿಡ್ನಿ,ಹೃದಯ ಸೇರಿ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸ ಬಿಪಿಎಲ್​ ನೀಡಲು ಆಹಾರ ಇಲಾಖೆ ಮುಂದಾಗಿದೆ. ಜತೆಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ 3 ವರ್ಷದ ಹಿಂದೆ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ “ವೈದ್ಯಕಿಯ ಕೇಸ್​’ ಎಂದು ಪರಿಗಣಿಸಿ ವಿಲೇ ಮಾಡುವುದಕ್ಕೆ ಇಲಾಖೆಗೆ, ಸರ್ಕಾರ ಅನುಮೋದನೆ ಕೊಟ್ಟಿದೆ.
ಇಲಾಖೆಯಲ್ಲಿ ಬಾಕಿ ಉಳಿದಿರುವ 2.95 ಲಕ್ಷ ಅರ್ಜಿಗಳಲ್ಲಿ ಹೃದಯ ಸಮಸ್ಯೆ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್​ ಪ್ರಮುಖವಾಗಿದೆ. ಇವರಿಗಾದರೂ ಕಾರ್ಡ್​ ನೀಡಲು ಅನುಮತಿ ನೀಡುವಂತೆ ಇಲಾಖೆ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಅಂತಿಮವಾಗಿ ಇಲಾಖೆ ಸಲ್ಲಿಸಿದ್ದ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ.ಆದರೆ, ಇತರರು ಸಲ್ಲಿಸಿರುವ ಅರ್ಜಿಗಳ ವಿಲೇಗೆ ಅನುಮತಿ ಸಿಕ್ಕಿಲ್ಲ. ನಿಗದಿಗಿಂತ ಹೆಚ್ಚು ಬಿಪಿಎಲ್​ ಮಂಜೂರು ಮಾಡಬಾರದು,ಒಂದೇ ಬಾರಿ ಅರ್ಜಿ ವಿಲೇ ಮಾಡಬಾರದು, ಅನರ್ಹರು ಪಡೆದಿರುವ ಚೀಟಿ ರದ್ದು ಮಾಡಿದ ಆಧಾರದಲ್ಲಿ ಹಂತ ಹಂತವಾಗಿ ಅರ್ಜಿ ವಿಲೇ ಸೇರಿ ಇತರೆ ಮಾನದಂಡವನ್ನು ಈಗಾಗಲೇ ಸರ್ಕಾರ ರೂಪಿಸಿದೆ.
ಏನು ಮಾಡಬೇಕು?* ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಆಧಾರ್​ ಕಾರ್ಡ್​, ಆದಾಯ ದೃಢೀಕರಣ ಪತ್ರ, ಮನೆ ಬಾಡಿಗೆ ದಾಖಲೆ ಜತೆಗೆ ಕಡ್ಡಾಯವಾಗಿ ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಪ್ರಮಾಣಪತ್ರ ತರಬೇಕು.* ಹೊಸ ಕಾರ್ಡ್​ ಅಗತ್ಯ ಇರುವ ಬಗ್ಗೆ ಸ್ಥಳಿಯ ಫುಡ್​ ಇನ್​ಸ್ಪೆಕ್ಟರ್​ ಭೇಟಿ ಮಾಡಿ ಗಮನಕ್ಕೆ ತರಬೇಕು.* ಫುಡ್​ ಇನ್​ಸ್ಪೆಕ್ಟರ್​ ಎಲ್ಲ ದಾಖಲೆ ಪರಿಶೀಲಿಸಿ ಆಹಾರ ಇಲಾಖೆಯ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ನಂತರ, ಆರೋಗ್ಯ ಉದ್ದೇಶಕ್ಕೋ ಅಥವಾ ಇನ್ಯಾವುದಕ್ಕೂ ಎಂಬುದರ ಬಗ್ಗೆ ಪರಿಶೀಲಿಸಲು ರೋಗಿ ಮನೆಗೆ ಭೇಟಿ ನೀಡುತ್ತಾರೆ.* ಆರೋಗ್ಯ ಸಮಸ್ಯೆಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಮಾಡಿಕೊಂಡ ಬಳಿಕ ಫುಡ್​ ಇನ್​ಸ್ಪೆಕ್ಟರ್​, ಅರ್ಜಿ ಅನುಮೋದನೆಗೆ ಉಪನಿರ್ದೇಶಕರಿಗೆ ಕಳುಹಿಸುತ್ತಾರೆ. ಅಂತಿಮವಾಗಿ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ಪಡೆಯುತ್ತಾರೆ. 24 ಗಂಟೆಯೊಳಗೆ ಹೊಸ ಕಾರ್ಡ್​ ಸಿಗುತ್ತದೆ.* ಜ್ವರ,ತಲೆ ನೋವು ಸೇರಿ ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅರ್ಜಿ ಸಲ್ಲಿಸುವಂತಿಲ್ಲ.* ತುರ್ತು ಚಿಕಿತ್ಸೆಗೆ ಒಳಗಾಗುವವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.* ಸೈಬರ್​ ಸೆಂಟರ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಬೆಂಗಳೂರು ಒನ್​, ಕರ್ನಾಟಕ ಒನ್​, ಗ್ರಾಮ ಒನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಫುಡ್​ ಇನ್​ಸ್ಪೆಕ್ಟರ್​ ಪರಿಶೀಲಿಸುತ್ತಾರೆ.
ಉಡುಪಿ,ಉತ್ತರ ಕನ್ನಡಕ್ಕೆ 2 ದಿನ ರೆಡ್​ ಅಲರ್ಟ್:ಕರಾವಳಿ, ಉ.ಕ. ಭಾಗದಲ್ಲಿ ಭಾರಿ ಮಳೆ
ಆರೋಗ್ಯ ಸಮಸ್ಯೆ ತೋರಿಸಿ ಕಾರ್ಡ್​ ಮಾಡಿಸಿರುವ ಕೆಲವರು:ಹೊಸ ರೇಷನ್​ ಕಾರ್ಡ್​ ಕೋರಿ ಸೈಬರ್​ ಸೆಂಟರ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ವೇಳೆ ಸಾವಿರಾರು ಜನರು ಸೈಬರ್​ ಸೆಂಟರ್​ನಲ್ಲಿ ಆರೋಗ್ಯ ಸಮಸ್ಯೆ ತೋರಿಸಿ ನಿಯಮಬಾಹಿರವಾಗಿ ಅರ್ಜಿ ಸಲ್ಲಿಸಿ ಬಿಪಿಎಲ್​ ಕಾರ್ಡ್​ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೈಬರ್​ ಸೆಂಟರ್​ನಲ್ಲಿ ಅರ್ಜಿ ಸಲ್ಲಿಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದೆ. ಆರೋಗ್ಯ ಸಮಸ್ಯೆ ಎಂದೇಳಿ ಪಡೆದಿರುವ ಸಾವಿರಾರು ಕಾರ್ಡ್​ಗಳ ಪತ್ತೆ ಹಚ್ಚಿ ರದ್ದುಪಡಿಸಲು ಮುಂದಾಗಿದೆ.
ಇತರರಿಗೆ ನಿರಾಸೆ:2017ರಿಂದ 2021ರವರೆಗೆ ರಾಜ್ಯಾದ್ಯಂತ ಹೊಸ ಬಿಪಿಎಲ್​, ಕುಟುಂಬ ಸದಸ್ಯರ ಸೇರ್ಪಡೆ, ತಿದ್ದುಪಡಿ ಕೋರಿ ಇಲಾಖೆಗೆ ಸಲ್ಲಿಕೆಯಾದ ಒಟ್ಟು 39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆಗೊಂಡರೆ, 9,60,641 ಅರ್ಜಿಗಳು ತಿರಸ್ಕಾರಗೊಂಡಿವೆ. 36,08,812 ಅರ್ಜಿಗಳು ವಿಲೇವಾರಿಯಾದರೆ 2,95,986 ಬಾಕಿ ಉಳಿದಿವೆ. 2023ರ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದರಿಂದಾಗಿ ಪಡಿತರ ಚೀಟಿ ನೀಡಲು, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಈವರೆಗೆ ಬಾಕಿ ಅರ್ಜಿಗಳ ವಿಲೇವಾರಿಗೆ ಕಾಂಗ್ರೆಸ್​ ಸರ್ಕಾರ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಹೊಸ ರೇಷನ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಚಾತಕಪಯಂತೆ ಕಾಯುತ್ತಿರುವವರಿಗೆ ಹಾಗೂ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವವರಿಗೆ ಭಾರಿ ನಿರಾಸೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 5 =
Remember me
