ಬೆಂಗಳೂರು:ರಾಜ್ಯದಲ್ಲಿ ಅಳವಡಿಸಿರುವ, ಮುಂದೆ ಅಳವಡಿಸಲಿರುವ ವಿದ್ಯುತ್ ಪ್ರಸರಣ, ವಿತರಣಾ ಜಾಲದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಬುಧವಾರ ಆಯೋಜಿಸಿದ್ದ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ- 2024’ಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ವಿದ್ಯುತ್ ಮಾರ್ಗಗಳು, ಪರಿವರ್ತಕಗಳು, ವಿದ್ಯುತ್ ಸ್ಥಾವರಗಳು, ಬಹುಮಹಡಿ ಕಟ್ಟಡಗಳು ಸೇರಿ ಎಲ್ಲ ವಿದ್ಯುತ್ ಸ್ಥಾವರಗಳಲ್ಲೂ ಸುರಕ್ಷತೆ, ತಂತ್ರಜ್ಞಾನ ಬಳಕೆಗೂ ಒತ್ತು ನೀಡಲಾಗಿದೆ ಎಂದರು.
ಯಾವುದೇ ಒಂದು ದೇಶ ಸದೃಢವಾಗಿರಬೇಕಾದರೆ ಅಲ್ಲಿಯ ಜನ ಮತ್ತು ಅವರ ಆಸ್ತಿ ಸಂರಕ್ಷಣೆ ಅತಿ ಮುಖ್ಯ. ವಿದ್ಯುತ್ ಅವಘಡ ತಪ್ಪಿಸಲು ಸರ್ಕಾರದ ಜತೆಗೆ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಭಾವ್ಯ ವಿದ್ಯುತ್ ಅವಘಡ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಸೂಕ್ತ ಪರಿಹಾರವಾಗಿದೆ. ವಿದ್ಯುತ್ ಅನಾಹುತಗಳಿಂದ ಪ್ರಾಣ ಹಾನಿ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ದುರಂತ, ಆಸ್ತಿಪಾಸ್ತಿ ನಷ್ಟ ತಡೆಯುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಜನ ಜಾಗೃತಿಗೆ ಹಮ್ಮಿಕೊಂಡಿರುವ ಅಭಿಯಾನ ಜು.2ರವರೆಗೆ ನಡೆಯಲಿದೆ. ಕಾಲ್ನಡಿಗೆ ಜಾಥಾ ಮೂಲಕ ಶಾಲೆ-ಕಾಲೇಜು, ಉದ್ಯಮ-ವಹಿವಾಟು, ವಿದ್ಯುತ್ ಸರಬರಾಜು ಕಂಪನಿ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರು, ರೈತರು, ಗ್ರಾಹಕರು ಹಾಗೂ ಸಾಮಾನ್ಯ ಜನರನ್ನು ತಲುಪಲಿದ್ದೇವೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.
ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯ ವಿದ್ಯುತ್ ಪರಿವೀಕ್ಷಕ ರಾಡ್ಸನ್ ಅಪ್ಪಚ್ಚು, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಇನ್ನಿತರರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
