|ಸತೀಶ್ ಕಂದಗಲ್​ಪುರಬೆಂಗಳೂರು
ನಗರದಲ್ಲಿ ಕಳೆದೊಂದು ವರ್ಷದಲ್ಲಿ ಮೆಟ್ರೋ ಹಾಗೂ ವಿವಿಧ ಕಾಮಗಾರಿಗಳ ನಿರ್ವಣಕ್ಕಾಗಿ ಒಟ್ಟು 1,293 ಮರಗಳನ್ನು ಕಡಿಯಲು ಪಾಲಿಕೆ ಅನುಮತಿ ನೀಡಿದೆ. 1,110ಕ್ಕೂ ಅಧಿಕ ಉದ್ಯಾನಗಳಿರುವುದರಿಂದ ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೂ ನಗರ ಪಾತ್ರವಾಗಿದೆ. ಆದರೆ, ಪ್ರತಿವರ್ಷ ವಿವಿಧ ಕಾಮಗಾರಿಗಳ ನಿರ್ಮಾಣ ಮಾಡುವ ದೃಷ್ಟಿಯಿಂದ ಸಾವಿರಕ್ಕೂ ಅಧಿಕ ಮರಗಳನ್ನು ಹನನ ಮಾಡಲಾಗುತ್ತಿದೆ. ಕೆಲವು ದೇಶಗಳಲ್ಲಿ ಪರಿಸರ ಉಳಿಸುವ ಕಾಳಜಿಗೆ ಹೆಚ್ಚು ಮಹತ್ವ ನೀಡಲಾಗಿದ್ದು, ಬಹುತೇಕ ಮರಗಳನ್ನು ಕಡಿಯದೆ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತದೆ. ಆದರೆ, ಐಟಿ-ಬಿಟಿ ಕ್ಷೇತ್ರದಲ್ಲಿ ವಿಶ್ವವ್ಯಾಪಿ ಪ್ರಸಿದ್ಧಿ ಪಡೆದ ನಗರದಲ್ಲಿ ಮರಗಳ ಸ್ಥಳಾಂತರ ಮಾಡಲು ಸೂಕ್ತ ತಂತ್ರಜ್ಞಾನ ಮಾತ್ರ ಲಭ್ಯವಾಗಿಲ್ಲ.
ಶೇ.69 ಮರಗಳ ಹನನ:ನಗರದಲ್ಲಿ ಸುಧಾರಿತ ಮೂಲ ಸೌಕರ್ಯ ಒದಗಿಸಲು ಹಲವು ಹೊಸ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮೇ 2020 ರಿಂದ ಮೇ 2021ರ ಅವಧಿಯಲ್ಲಿ 10 ಮೆಟ್ರೋ ಕಾಮಗಾರಿ, ಒಂದು ಅಂಡರ್​ಪಾಸ್, ರಸ್ತೆ ವಿಸ್ತರಣೆ ಮತ್ತು ಸಬ್​ವೇ ನಿರ್ಮಾಣ ಸೇರಿ 13 ಕಾಮಗಾರಿಗಳಿಗೆ ಒಟ್ಟು 1,884 ಮರಗಳನ್ನು ಕಡಿಯಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಪೈಕಿ 196 ಮರಗಳನ್ನು ಕಡಿಯಲು ಅನುಮತಿ ನಿರಾಕರಿಸಿದೆ. 395 ಮರಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಉಳಿದ 1,293 (ಶೇ.69) ಮರಗಳನ್ನು ಕಡಿಯುವಂತೆ ಅನುಮತಿ ನೀಡಲಾಗಿದೆ.

ಅನುಮತಿ ಹೇಗೆ?:ಮರಗಳ ತೆರವಿಗೆ ಇಂಜಿನಿಯರ್​ಗಳು ಪಾಲಿಕೆ ಅರಣ್ಯ ವಿಭಾಗಕ್ಕೆ ವರದಿ ಸಲ್ಲಿಸುತ್ತಾರೆ. ಅರಣ್ಯ ವಿಭಾಗ ಮತ್ತು ನಗರ ಅರಣ್ಯ ವಿಭಾಗದ ಸಿಬ್ಬಂದಿ ಹಾಗೂ ಪರಿಸರವಾದಿಗಳನ್ನು ಒಳಗೊಂಡ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಎಷ್ಟು ಮರಗಳನ್ನು ಕಡಿಯಬಹುದು ಎಂದು ಗುರುತಿಸಿ ಅನುಮತಿ ನೀಡುತ್ತದೆ.
ಗಿಡಗಳ ನಿರ್ವಹಣೆ ಕೊರತೆ:ಪ್ರತಿ ವರ್ಷ ಮರಗಳನ್ನು ಕಡಿಯುವ ಮುಂಚೆ ಅದರ ಹತ್ತುಪಟ್ಟು ಗಿಡಗಳನ್ನು ನೆಡಬೇಕು ಎಂಬ ನಿಯಮವಿದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಜತೆಗೆ, ಲಕ್ಷ ವೃಕ್ಷ ಅಭಿಯಾನದಡಿ ಈ ವರ್ಷ ಪಾಲಿಕೆಯ 4 ನರ್ಸರಿಗಳಿಂದ 25 ಸಾವಿರ ಸಾವಿರ ಗಿಡಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದೆ. ಆದರೆ, ನಿರ್ವಹಣೆ ಹೊಣೆ ಮಾತ್ರ ಯಾರದ್ದು ಎಂಬುದು ಈವರೆಗಿನ ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ, ದೊಡ್ಡ ಮರಗಳನ್ನು ಸ್ಥಳಾಂತರ ಮಾಡಲು ಬಿಬಿಎಂಪಿ ಬಳಿ ತಂತ್ರಜ್ಞಾನ ಮತ್ತು ಉಪಕರಣಗಳ ಕೊರತೆಯಿದೆ.
‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!

ಫ್ರಾನ್ಸ್​ ಅಧ್ಯಕ್ಷರಿಗೇ ಕಪಾಳಮೋಕ್ಷ; ಕೈಮುಗಿಯುತ್ತ ಹತ್ತಿರ ಬಂದರೂ ಕೆನ್ನೆಗೆ ಬಾರಿಸಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 6 =
Remember me
