ಬೆಂಗಳೂರು:ಕರೊನಾ ಸಂಕಷ್ಟ ಕಾಲದಲ್ಲಿ ಜನರ ಅನುಕೂಲಕ್ಕೆಂದು ಪಿಎಂ ಕೇರ್ಸ್ ನಿಂದ ನೀಡಿದ್ದರೂ ಬಳಕೆಗೆ ಸಿಬ್ಬಂದಿಯಿಲ್ಲದೆ ನಿಷ್ಕ್ರಿಯವಾಗಿರುವ ಸಾವಿರಾರು ವೆಂಟಿಲೇಟರ್ ಬಳಕೆಗೆ ಈಗ ಕಾಲ ಕೂಡಿಬಂದಿದೆ. ‘ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ’ ಶೀರ್ಷಿಕೆಯಡಿ ಮೇ 9ರಂದು ‘ವಿಜಯವಾಣಿ’ ಮುಖಪುಟದಲ್ಲಿ ಪ್ರಕಟವಾದ ವರದಿ ಗಮನಿಸಿದ ಯುವಕರ ತಂಡ ವಿವಿಧ ಜಿಲ್ಲೆಗಳಲ್ಲಿ ವೆಂಟಿಲೇಟರ್ ಬಳಕೆಗೆ ತರಬೇತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮುಖ್ಯವಾಗಿ ಸಿಬ್ಬಂದಿ ಕೊರತೆಯಿಂದ ನಿಷ್ಕ್ರಿಯವಾಗಿರುವ ಉಪಕರಣಗಳನ್ನು ಬಳಸಿಕೊಳ್ಳಲು ಇದು ಮಹತ್ವದ ಹೆಜ್ಜೆಯಾಗಿದೆ.
ಕುಟುಂಬದವರಿಗೆ ತೊಂದರೆ:ಅಭ್ಯುದಯ ಸಾಮಾಜಿಕ ಸಂಸ್ಥೆ ಕಾರ್ಯಕರ್ತರಾಗಿರುವ ಫಣೀಂದ್ರ ಕುಟುಂಬಕ್ಕೆ 15 ದಿನದ ಹಿಂದೆ ವೆಂಟಿಲೇಟರ್ ಅವಶ್ಯಕತೆಯಿತ್ತು. ಎಷ್ಟೇ ಪ್ರಯತ್ನಿಸಿದರೂ ವೆಂಟಿಲೇಟರ್ ಸಿಗದೆ ಸಾವು ಸಂಭವಿಸಿತ್ತು. ಈ ಕುರಿತು ಅದೇ ಸಂಸ್ಥೆಯ ನರೇಂದ್ರಮೂರ್ತಿ ಜತೆ ಮಾತನಾಡುವಾಗ, ವಿಜಯವಾಣಿಯಲ್ಲಿ ಪ್ರಕಟವಾದ ವರದಿ ಪ್ರಸ್ತಾಪವಾಗಿದೆ. ಈ ರೀತಿ ಪರಿಸ್ಥಿತಿಯಿದ್ದರೆ, ನಾವೇಕೆ ಸಿಬ್ಬಂದಿ ತರಬೇತಿಗೆ ಮುಂದಾಗಬಾರದು ಎಂದು ನಿರ್ಧರಿಸಿದ್ದಾರೆ. ಪರಿಚಿತರು ಹಾಗೂ ಅವ್ಯಯ ಸಂಸ್ಥೆಯ ಪ್ರಶಾಂತ್ ಸುಬ್ಬರಾವ್ ಸಂರ್ಪಸಿದಾಗ ಅವರು ಫಿಲಿಪ್ಸ್ ಕಂಪನಿಯ ಪರಿಚಿತರೊಂದಿಗೆ ಮಾತನಾಡಿದ್ದಾರೆ. ಫಿಲಿಪ್ಸ್ ಸಂಸ್ಥೆ ವೈದ್ಯಕೀಯ ಉಪಕರಣ ವಿಭಾಗದ ಸಿಬ್ಬಂದಿ ತನ್ನ ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಉಚಿತವಾಗಿ ಕ್ರ್ಯಾಶ್ ಕೋರ್ಸ್ ನಡೆಸಿಕೊಡಲು ಮುಂದೆ ಬಂದಿದ್ದಾರೆ.
ಮೈಸೂರಿನಲ್ಲಿ 50 ಜನರಿಗೆ ತರಬೇತಿ:ಫಿಲಿಪ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯನ್ನು ಸಂರ್ಪಸಿದ್ದಾರೆ. ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಸಿ.ಪಿ.ನಾಗರಾಜ್, ಅನಸ್ತೀಶಿಯಾಲಜಿ ವಿಭಾಗದ ಡೀನ್ ಡಾ.ಎಚ್.ಜಿ. ಮಂಜುನಾಥ್ ಸಹಕಾರದಲ್ಲಿ ಸೋಮವಾರ ಫಿಲಿಪ್ಸ್​ನ ಗಣೇಶ್ ನಟರಾಜನ್ ಸುಮಾರು 50 ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಕೋಲಾರ ಜಿಲ್ಲಾ ಸರ್ಜನ್ ಅವರೂ ಈ ಕುರಿತು ಆಸಕ್ತಿ ತೋರಿದ್ದಾರೆ. ಇತರ ಜಿಲ್ಲೆಗಳಲ್ಲೂ ಸಹಕಾರ ನೀಡಿದರೆ ತರಬೇತಿ ನೀಡಲು ಸಿದ್ಧ ಎಂದು ನರೇಂದ್ರಮೂರ್ತಿ ಹೇಳಿದ್ದಾರೆ.
ತರಬೇತಿಯಲ್ಲೇನು?:ಪಿಎಂ ಕೇರ್ಸ್​ನಿಂದ ನೀಡಿರುವ ಹೆಚ್ಚಿನ ವೆಂಟಿಲೇಟರ್​ಗಳು ಬಿಇಎಲ್​ನಿಂದ ನಿರ್ವಿುತವಾಗಿವೆ. ಅವುಗಳ ತಾಂತ್ರಿಕತೆ, ನಿರ್ವಣ, ನಿರ್ವಹಣೆ ಕಲಿಸಲಾಗುವುದು. ಯಾವ ಸಂಕೇತಗಳು ಬಂದರೆ ಏನೆಂದು ಅರ್ಥೈಸಿಕೊಳ್ಳಬೇಕು ಎಂಬುದನ್ನೂ ತಿಳಿಸಲಾಗುತ್ತದೆ.
500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ

ಹುಷಾರ್… ಗಾಳಿಯಲ್ಲಿ ಹತ್ತು ಮೀಟರ್ ಚಿಮ್ಮಬಲ್ಲದು ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
