ಬೆಂಗಳೂರು:ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ತರಗತಿ ಬೋಧನೆ ಮಾಡಲು ಮಾರ್ಗಸೂಚಿ ರಚಿಸುವಂತೆ ರೂಪಿಸಿರುವ ತಜ್ಞರ ಸಮಿತಿ ವರದಿ ನೀಡುವ ಮೊದಲೇ ರಾಜ್ಯ ಸರ್ಕಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಂಎಚ್​ಆರ್​ಡಿ) ನೀಡುವ ಮಾರ್ಗಸೂಚಿಯನ್ನೇ ಪಾಲಿಸುವಂತೆ ಸೂಚನೆ ನೀಡಿದೆ.
ಆ ಪ್ರಕಾರವಾಗಿ ಪೂರ್ವಪ್ರಾಥಮಿಕ ಶಾಲೆ 30 ನಿಮಿಷ ಮೀರದಂತೆ ಪಾಲಕರೊಂದಿಗೆ ಮಾತ್ರ ವಾರಕ್ಕೆ ಒಂದು ದಿನ ಆನ್​ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು. ಆನ್​ಲೈನ್ ಶಿಕ್ಷಣದ ಹೆಸರಿನಲ್ಲಿ ರಾಜ್ಯದ ಸುಮಾರು ಶಾಲೆಗಳು ಅವೈಜ್ಞಾನಿಕವಾಗಿ ಬೋಧಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯುಲ್ಲಿ ಮಾರ್ಗಸೂಚಿ ರಚಿಸಲು ಶಿಕ್ಷಣ ಇಲಾಖೆ ಸಮಿತಿ ರಚನೆ ಮಾಡಿದೆ. ಈ ಮಧ್ಯೆ ಹೈಕೋರ್ಟ್, ಸಮಿತಿ ವರದಿ ನೀಡುವವರೆಗೆ ಸೀಮಿತ ಅವಧಿಯ ಆನ್​ಲೈನ್ ಶಿಕ್ಷಣ ಒದಗಿಸಲು ಅವಕಾಶ ಮಾಡಿಕೊಡಬೇಕೆಂದು ಹೇಳಿದೆ. ಅಲ್ಲದೆ, ಎಂಎಚ್​ಆರ್​ಡಿ ರಾಜ್ಯಗಳ ವಿವೇಚನೆಗೆ ಒಳಪಟ್ಟು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಬಹುದಾದ ಆನ್​ಲೈನ್ ಶಿಕ್ಷಣದ ಕುರಿತು ಮಾರ್ಗಸೂಚಿ ಹೊರಡಿಸಿದೆ. ಅದನ್ನೇ ರಾಜ್ಯ ಸರ್ಕಾರ ಪಾಲಿಸಲು ಸೂಚಿಸಿದೆ. ಈ ಹೊಸ ಮಾರ್ಗಸೂಚಿ ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ವರದಿ ನೀಡಿ ಅದರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವವರೆಗೂ ಮಾತ್ರವೇ ಅನ್ವಯಿಸಲಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೆ, ನಿಯಮಿತ ಶಿಕ್ಷಣಕ್ಕೆ ಪೂರಕವಾಗಿ ಆನ್​ಲೈನ್ ಶಿಕ್ಷಣ ಒದಗಿಸಬೇಕಾಗಿ ಬಂದಿರುವುದರಿಂದ ಆನ್​ಲೈನ್ ಶಿಕ್ಷಣಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದಾಗಿ ತಿಳಿಸಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು ನಿಯಮಿತ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ.
* 1ರಿಂದ 5ನೇ ತರಗತಿ: 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ವಾರದಲ್ಲಿ ಗರಿಷ್ಠ 3 ದಿನ ಆನ್​ಲೈನ್ ಶಿಕ್ಷಣ ನೀಡಬಹುದು.
* 6-8ನೇ ತರಗತಿ: 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನ ಆನ್​ಲೈನ್ ಶಿಕ್ಷಣ ನೀಡಬಹುದು.
* 9-10ನೇ ತರಗತಿ: 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನ ಆನ್​ಲೈನ್ ಶಿಕ್ಷಣ ನೀಡಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
