ಉತ್ತರಕನ್ನಡ:ವ್ಯಕ್ತಿಯೊಬ್ಬರು ತಮ್ಮ ಗೃಹಪ್ರವೇಶ ನಡೆಸಿದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡುಮಕ್ಕಳಿಲ್ಲದ ಅವರಿಗೆ ಮಗಳೇ ಅಂತ್ಯಸಂಸ್ಕಾರ ನಡೆಸಿದ್ದಾಳೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಭಟ್ಕಳ‌ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮಂಜುನಾಥ ನಾಗಪ್ಪ ನಾಯ್ಕ್ (51) ಸಾವಿಗೀಡಾದ ವ್ಯಕ್ತಿ. ಇವರ ಪುತ್ರಿ ಶ್ವೇತಾ ಅಂತ್ಯಕ್ರಿಯೆ ನಡೆಸಿದವರು. ನಿನ್ನೆಯಷ್ಟೇ ತಮ್ಮ ಗೃಹಪ್ರವೇಶವನ್ನು ನೆರವೇರಿಸಿದ್ದ ಮಂಜುನಾಥ್, ಇಂದು ಮನೆ ಬಳಿಯ ಮರಕ್ಕೆ ಲುಂಗಿ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾವಿಗೀಡಾದ ವ್ಯಕ್ತಿಗೆ ಗಂಡು ಮಕ್ಕಳು ಇಲ್ಲದ ಕಾರಣ ಮೂವರು ಹೆಣ್ಣುಮಕ್ಕಳ ಪೈಕಿ ಹಿರಿಯವಳಾದ ಶ್ವೇತಾ ಅಂತಿಮಸಂಸ್ಕಾರ ನಡೆಸಿದ್ದಾರೆ. ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನಗಳನ್ನು ಮಗಳೇ ಪೂರೈಸಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತ ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ; ವಸತಿ ನಿಲಯದಲ್ಲೇ ಸಾವು..

ಶಬರಿಮಲೆ ಯಾತ್ರಾರ್ಥಿಗಳ ಗಮನಕ್ಕೆ: 2 ವಾರಕ್ಕೆ ಮೊದಲು ಹೀಗೆ ಮಾಡಿ; ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
