ಬೆಂಗಳೂರು:ಹಂಪಿನಗರ ಸಮೀಪದ ರೈಲು ಹಳಿ ಮೇಲೆ ಪತ್ತೆಯಾಗಿದ್ದ ಅಪರಿಚಿತ ಶವದ ಕೊಲೆ ರಹಸ್ಯ ಬಯಲಾಗಿದೆ.
ಯಶವಂತಪುರದ ಆರ್​ಎಂಸಿ ಯಾರ್ಡ್ ನಿವಾಸಿ ಅಫ್ರೋಜ್ (34) ಕೊಲೆಯಾದವ. ಸಲಿಂಗಕಾಮ ತೊರೆದು ಯುವತಿಯ ಹಿಂದೆ ಹೋದನೆಂಬ ಕಾರಣಕ್ಕೆ ಅಫ್ರೋಜ್​ನನ್ನು ಈತನ ಸ್ನೇಹಿತ ಸಿದ್ದಿಕಿಯೇ ಹತ್ಯೆ ಮಾಡಿದ್ದಾನೆ. ಸಿದ್ದಿಕಿಗೆ ಹಣದಾಸೆ ತೋರಿಸಿ ಅವನೊಂದಿಗೆ ಅಪ್ರೋಜ್ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.ಇದನ್ನೂ ಓದಿರಿಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ಬಿಹಾರ ಮೂಲದ ಅಫ್ರೋಜ್, ಹಲವು ವರ್ಷಗಳಿಂದ ಯಶವಂತಪುರದ ಆರ್​ಎಂಸಿ ಯಾರ್ಡ್​ನಲ್ಲಿ ಹೋಟೆಲ್ ನಡೆಸುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರಾಗಿ ಹೋಟೆಲ್​ನಲ್ಲೇ ನೆಲೆಸಿದ್ದ. ಕೆಲ ವರ್ಷಗಳ ಹಿಂದೆ ಮಸೀದಿಯಲ್ಲಿ ಶಾಲೆಯ ಸ್ನೇಹಿತ ಸಿದ್ದಿಕಿ ಸಿಕ್ಕಿದ್ದ. ಇಬ್ಬರ ನಡುವೆ ಆತ್ಮೀಯತೆ ಮೂಡಿ ಸಲಿಂಗಕಾಮಕ್ಕೂ ತಿರುಗಿತ್ತು.
ಸಿದ್ದಿಕಿಗೆ ಹಣದಾಸೆ ತೋರಿಸಿ ಆತನ ಜತೆ ಅಫ್ರೋಜ್ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇತ್ತೀಚೆಗೆ ಅಫ್ರೋಜ್​ಗೆ ಯುವತಿಯೊಬ್ಬಳ ಸ್ನೇಹ ಬೆಳೆದು ಆಕೆಯ ಜತೆ ಸಲುಗೆಯಿಂದ ಇರಲು ಯತ್ನಿಸುತ್ತಿದ್ದ. ಇದಕ್ಕೆ ಸಿದ್ದಿಕಿ ವಿರೋಧ ವ್ಯಕ್ತಪಡಿಸಿದ್ದರೂ ಅಪ್ರೋಜ್​ ಬಿಟ್ಟಿರಲಿಲ್ಲ. ಇದರಿಂದ ಕೆರಳಿದ ಸಿದ್ದಿಕಿ, ತನ್ನ ಸ್ನೇಹಿತರ ಜತೆ ಸೇರಿ ಅಫ್ರೋಜ್ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಜ.2ರ ರಾತ್ರಿ ಹಂಪಿನಗರದ ಶ್ರೀ ಕೃಷ್ಣದೇವರಾಯ ರೈಲು ನಿಲ್ದಾಣ ಬಳಿಗೆ ಬರುವಂತೆ ಅಫ್ರೋಜ್​ಗೆ ಸಿದ್ದಿಕಿ ಸೂಚಿಸಿದ್ದ. ಪೂರ್ವನಿಯೋಜನೆಯಂತೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ರೈಲು ಹಳಿಗಳ ಮೇಲೆ ಶವ ಎಸೆದು ಪರಾರಿಯಾಗಿದ್ದರು. ರೈಲು ಹರಿದು ಮೃತದೇಹ ತುಂಡಾಗಿತ್ತು.ಇದನ್ನೂ ಓದಿರಿಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ
ಹತ್ಯೆ ಬಳಿಕ ಆರೋಪಿಗಳು, ಅಫ್ರೋಜ್ ಬಟ್ಟೆ ಮತ್ತು ಶೂಗಳನ್ನು ಸುಟ್ಟು ಹಾಕಿದ್ದರು. ಪಿಎಸ್​ಐ ಭಾರತಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ರುಂಡ-ಮುಂಡ ಬೇರ್ಪಟ್ಟಿದ್ದ ಅಪರಿಚಿತ ಶವದ ಗುರುತು ಪತ್ತೆಹಚ್ಚಿದ್ದರು. ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಪೊಲೀಸರಿಗೆ ಮೊಬೈಲ್ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿ ಸಾವಿಗೆ ಬಲವಂತ ಆಯುಧದಿಂದ ಹಲ್ಲೆಯಾಗಿದೆ ಎಂದು ವೈದ್ಯರು ವರದಿ ಸಲ್ಲಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು, ಮೊಬೈಲ್​ಗೆ ಬಂದಿದ್ದ ಕೊನೇ ಕರೆಯ ಬೆನ್ನತ್ತಿದ್ದಾಗ ಪಾದರಾಯನಪುರದ ಸಿದ್ದಿಕಿ ಸಿಕ್ಕಿಬಿದ್ದಿದ್ದಾನೆ. ಆತ ಕೊಟ್ಟ ಮಾಹಿತಿ ಮೇರೆಗೆ ಖಲೀಲ್ ಹಾಗೂ ಮುಬಾರಕ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
