ಬೆಂಗಳೂರು:ಕರೊನಾ! ಇಡೀ ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ. ಮುಟ್ಟುವುದಿರಲಿ ಹತ್ತಿರ ಸುಳಿದರೂ ಅಂಟಿಕೊಳ್ಳುವ ರೋಗ ಇದು. ಹಾಗಿದ್ದರೆ ಸೋಂಕಿಗೆ ಒಳಗಾದವರು ಮೃತಪಟ್ಟರೆ ಶವ ಸಂಸ್ಕಾರ ಹೇಗೆ ನಡೆಯುತ್ತದೆ ಎಂಬ ಕುತೂಹಲ ಕೆಲವರಿಗಿರಬಹುದು. ಆ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.
ಜಿಲ್ಲಾಡಳಿತದಿಂದಲೇ ಅಂತ್ಯಸಂಸ್ಕಾರ: ಕರೊನಾ ಸೋಂಕಿತರು ಮೃತರಾದರೆ ಸಂಪೂರ್ಣವಾಗಿ ಜಿಲ್ಲಾಡಳಿತವೇ ಅಂತಿಮ ವಿಧಿವಿಧಾನ ನೆರವೇರಿಸುತ್ತದೆ. ಕುಟುಂಬದವರು ದೇಹ ಪಡೆದುಕೊಂಡರೂ ಎಲ್ಲ ಧಾರ್ವಿುಕ ವಿಧಿ-ವಿಧಾನ ನಡೆಸಲು ಅವಕಾಶ ಇರುವುದಿಲ್ಲ. ಈವರೆಗೆ ದೇಶದಲ್ಲಿ ಮೃತರಾಗಿರುವ ಎಲ್ಲ ಸೋಂಕಿತರ ದೇಹಗಳನ್ನು ಆಯಾ ಜಿಲ್ಲಾಡಳಿತಗಳೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅಂತ್ಯಸಂಸ್ಕಾರ ನಡೆಸಿವೆ. ರಾಜ್ಯದಲ್ಲೂ ಕೆಲವು ಸೂಚನೆಗಳೊಂದಿಗೆ ಜಿಲ್ಲಾ ಡಳಿತದ ನೇತೃತ್ವದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.
ಮುಖ ನೋಡಲು ಮಾತ್ರ ಅವಕಾಶ: ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಸಂಪೂರ್ಣವಾಗಿ ಲೀಕ್ ಪ್ರೂಫ್ ಪ್ಲಾಸ್ಟಿಕ್ ಬ್ಯಾಗ್​ನಲ್ಲಿಟ್ಟು, ಅದಕ್ಕೆ ಶೇ.1 ಸೋಡಿಯಂ ಹೈಪೋಕ್ಲೋರೈಡ್ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತದೆ. ನಂತರ ಶವ ಸಾಗಿಸಲು ಪ್ರತ್ಯೇಕ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ವ್ಯವಸ್ಥೆ ಇರುತ್ತದೆ. ಬ್ಯಾಗ್​ನಲ್ಲಿ ಸುತ್ತಿದ ದೇಹವನ್ನು ಕುಟುಂಬಸ್ಥರಿರುವ ಸ್ಥಳಕ್ಕೆ ರವಾನಿಸಲಾಗುತ್ತದೆ. ಕುಟುಂಬದವರು ಮಾಸ್ಕ್, ಗ್ಲೌಸ್ ಧರಿಸಿ, ಅಂತರದಲ್ಲಿಯೇ ಮೃತ ವ್ಯಕ್ತಿಯ ಮುಖ ನೋಡಬೇಕು.
ಕೆಲವು ಧಾರ್ವಿುಕ ಕಾರ್ಯಕ್ಕೆ ಅನುಮತಿ: ಧಾರ್ವಿುಕ ಲಿಪಿಗಳಿಂದ ಓದುವುದು, ಪವಿತ್ರ ನೀರನ್ನು ಸಿಂಪಡಿಸುವುದು ಮತ್ತು ದೇಹವನ್ನು ರ್ಸ³ಸುವ ಅಗತ್ಯವಿಲ್ಲದ ಧಾರ್ವಿುಕ ವಿಧಿಗಳನ್ನು ನಡೆಸಲು ಅನುಮತಿ ನೀಡಲಾಗುತ್ತದೆ. ಆದರೆ ಸೋಂಕಿತನ ಶವಕ್ಕೆ ಸ್ನಾನ ಮಾಡಿಸುವುದು, ಚುಂಬಿಸುವುದು, ತಬ್ಬಿಕೊಳ್ಳುವುದಕ್ಕೆ ಅವಕಾಶವಿಲ್ಲ. ಮೃತನ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಪ್ರಾಥಮಿಕ ಸಂರ್ಪತರಾಗಿದ್ದಲ್ಲಿ ಮೃತದೇಹ ನೋಡಲೂ ಅವಕಾಶ ಸಿಗುವುದಿಲ್ಲ. ಶವಸಂಸ್ಕಾರದ ವೇಳೆ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಹೆಚ್ಚು ಸೇರುವಂತಿಲ್ಲ. 10ರಿಂದ 20 ಜನರಷ್ಟೇ ಸೇರಲು ಅವಕಾಶವಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಸಮಾಧಿ ಸ್ಥಳದಲ್ಲಿ ಅಗತ್ಯ ಸ್ವಚ್ಛತೆ, ಸೋಂಕು ನಿವಾರಕ ಸಿಂಪಡಿಸಬೇಕು. ಮೃತದೇಹವನ್ನು ಸುಟ್ಟರೆ ಅಸ್ಥಿಯನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ. ಅಸ್ಥಿ(ಬೂದಿ)ಯಿಂದ ಯಾವುದೇ ಹಾನಿಯಿಲ್ಲ ಎಂಬುದನ್ನು ಸರ್ಕಾರ ದೃಢಪಡಿಸಿದೆ.
ಅಂತರ ರಾಜ್ಯ ನಿಯಮಗಳಿಲ್ಲ:ರಾಜ್ಯದಲ್ಲಿ ಎಲ್ಲ ರೋಗಗಳಿಗೆ ಸಂಬಂಧಿಸಿದಂತೆ ಮೃತ ದೇಹಗಳನ್ನು ಹಸ್ತಾಂತರಿಸಲು ಕೆಲವು ನಿಯಮಗಳನ್ನು ಸರ್ಕಾರ ತಿಳಿಸಿದೆ. ಆದರೆ ಈಗ ಕರೊನಾ ಸೋಂಕಿನಿಂದ ಹೊರರಾಜ್ಯದ ವ್ಯಕ್ತಿ ಮೃತರಾದಲ್ಲಿ ದೇಹ ರವಾನೆಗೆ ಯಾವುದೇ ನಿಯಮಗಳನ್ನು ಜಾರಿಗೊಳಿಸಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಸಾವಿಗೀಡಾದ ಹೊರ ರಾಜ್ಯದ ವ್ಯಕ್ತಿಯ ಶವವನ್ನು ಬೆಂಗಳೂರಿನ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ.ವಿಜೇಂದ್ರ ವಿಜಯವಾಣಿಗೆ ತಿಳಿಸಿದ್ದಾರೆ.
| ಸತೀಶ್ ಕೆ. ಬಳ್ಳಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
