ಕಲಬುರಗಿ:ನಾಳೆ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದ ಮನೆಯೊಂದರಲ್ಲಿ ಇದೀಗ ಶೋಕ ಆವರಿಸಿಕೊಂಡಿದೆ. ಇನ್ನೇನು ಮಗನ ನಾಮಕರಣಕ್ಕೆ ಕೆಲವೇ ಗಂಟೆಗಳು ಇವೆ ಎಂಬಷ್ಟರಲ್ಲೇ ತಂದೆ ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಶಿಕ್ಷಕರ‌ ಕಾಲನಿ ಬಳಿ ಕೆಎಸ್​ಆರ್​​ಟಿಸಿ ಬಸ್ ಮತ್ತು ಬೈಕ್​ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಜೇವರ್ಗಿ ತಾಲೂಕಿನ ಹರನೂರ ಬಸಲಿಂಗಪ್ಪ (28) ಮತ್ತು ಮಹಾಂತಯ್ಯ (60) ಅಪಘಾತಕ್ಕೆ ಬಲಿಯಾದವರು. ನಾಳೆ ಹರನೂರ ಗ್ರಾಮದಲ್ಲಿ ಬಸಲಿಂಗಪ್ಪ ಮಗನ ನಾಮಕರಣ ಸಮಾರಂಭ ನಡೆಯುವುದಿತ್ತು.
ಜೇವರ್ಗಿಯಿಂದ ಹರನೂರಿನ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ವಿಜಯಪುರದಿಂದ ಕಲಬುರಗಿ ಕಡೆಗೆ ಹೋಗುತ್ತಿದ್ದ ಕೆಎಸ್​ಆರ್​​ಟಿಸಿ ಬಸ್ ಮಧ್ಯ ಅಪಘಾತ ಸಂಭವಿಸಿದೆ. ಇದರ ತೀವ್ರತೆಗೆ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಪಘಾತದ ಬಳಿಕ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾಂತಾರ’ ನೋಡಿ ಕೂಗಿ ಕೂಗಿ ಸುಸ್ತಾದ ಈ ನಟಿ ಎರಡನೇ ಸಲ ನೋಡುವಾಗ ಮಾಡಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
