ಸೊರಬ: ಕೊಲೆ ಮಾಡಿದ ನಂತರವೂ ಇಷ್ಟು ಆರಾಮವಾಗಿ ಇರಲು ಸಾಧ್ಯವೇ ಎಂದು ಈ ಘಟನೆ ನೋಡಿದ ನಂತರ ಆಶ್ಚರ್ಯವಾಗುತ್ತದೆ.ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ನಿಸರಾಣಿ ಗ್ರಾಮದ ರಾಮಪ್ಪ ಹತ್ತು ವರ್ಷಗಳ ಹಿಂದೆ ಚಂದ್ರಕಲಾಳನ್ನು ವಿವಾಹವಾಗಿದ್ದ. ಪ್ರತಿನಿತ್ಯ ಕುಡಿದುಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.
ಇದನ್ನೂ ಓದಿ:ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!
ಒಂದೂವರೆ ತಿಂಗಳಿಂದ ಲಾಕ್‌ಡೌನ್ ಇದ್ದ ಕಾರಣ ಕುಡಿಯಲು ಸಿಕ್ಕಿರಲಿಲ್ಲ. ಎಗಳವೂ ತಹಬಂದಿಗೆ ಬಂದಿತ್ತು. ಆದರೆ ಇತ್ತೀಚೆಗೆ ಮತ್ತೆ ಮದ್ಯ ಸಿಗಲು ಆರಂಭವಾದ ಬಳಿಕ ರಾಮಪ್ಪನಿಗೆ ಹಳೇ ಚಟ ಮತ್ತೆ ಆವರಿಸಿಕೊಂಡಿತು.ಮೇ 8ರಂದು ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ದಂಪತಿ ನಡುವೆ ಮಾತಿಗೆ ಮಾತು ಬೆಳೆದಿದೆ. ರಾಮಪ್ಪ ಕುಡಿದ ಅಮಲಿನಲ್ಲಿ ಪತ್ನಿ ಚಂದ್ರಕಲಾಳನ್ನು ಹತ್ಯೆ ಮಾಡಿಬಿಟ್ಟಿದ್ದಾನೆ.
ಇದನ್ನೂ ಓದಿ:ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​
ಆಶ್ಚರ್ಯಕರ ವಿಷಯವೇನೆಂದರೆ, ಕೊಲೆ ನಡೆದ ಬಳಿಕವೂ ಆತ ಏನೂ ನಡೆದಿಲ್ಲ ಎಂಬಂತೆ ಓಡಾಡಿಕೊಂಡಿದ್ದ. ಮನೆಯಲ್ಲೇ ಶವವಿಟ್ಟು ಕುಡಿದು ಬರುತ್ತಿದ್ದ ಎನ್ನಲಾಗಿದೆ. ಕೊನೆಗೆ ಅಕ್ಕಪಕ್ಕದ ಮನೆಯವರು ಗಮನಿಸಿದ ನಂತರ ಶನಿವಾರ ಈ ಕೊಲೆ ಬೆಳಕಿಗೆ ಬಂದಿದೆ! ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಾಮಪ್ಪನನ್ನು ಬಂಧಿಸಿದ್ದಾರೆ.
ಮೇ 17ರ ಬಳಿಕ ಪದವಿ ಪರೀಕ್ಷೆ ಕುರಿತು ನಿರ್ಧಾರ: ಸುಳಿವು ನೀಡಿದ್ರು ಡಿಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
