ತುಮಕೂರು:ರಾಜಕೀಯ ನಾಯಕರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಗೆದ್ದು ಬರಲಿ, ಸಚಿವ ಆಗಲಿ, ಸಿಎಂ ಆಗಲಿ ಎಂದೆಲ್ಲ ನಾನಾ ರೀತಿಯ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಾಯಕ ಮುಖ್ಯಮಂತ್ರಿ ಆಗಲಿ ಎಂದು 25 ವರ್ಷಗಳಿಂದ ಗಡ್ಡ ಬಿಟ್ಟಿದ್ದಾನೆ.
ತುಮಕೂರಿನ ಕೊರಟಗೆರೆಯ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಯಾದವ ಸಮುದಾಯದ ಬೃಹತ್ ಸಮಾವೇಶದಲ್ಲಿ ಇಂಥದ್ದೊಂದು ಸ್ವಾರಸ್ಯದ ಸಂಗತಿ ಬಹಿರಂಗಗೊಂಡಿದೆ. ಮಾಜಿ ಸಚಿವ, ಶಾಸಕ ಡಾ.ಜಿ. ಪರಮೇಶ್ವರ ಅವರೇ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಇದನ್ನು ಮತ್ತಷ್ಟು ಬೆಳಕಿಗೆ ತಂದಿದ್ದಾರೆ.
ಡಾ.ಜಿ.ಪರಮೇಶ್ವರ ಸಿಎಂ ಆಗಲೆಂದು ಮಧುಗಿರಿ ತಾಲೂಕು ಹುಣಸೇಮರದಟ್ಟಿಯ ಗೌಡಮುದ್ದಯ್ಯ 25 ವರ್ಷಗಳಿಂದ ಗಡ್ಡ ಬಿಟ್ಟಿದ್ದಾರೆ. ನಾನು ಆತನಿಗೆ ಏನೂ ಸಹಾಯ ಮಾಡಿಲ್ಲ. ಅವರ ಅಭಿಮಾನಕ್ಕೆ ನಾನು ಏನು ಕೊಡಲು ಸಾಧ್ಯವಿಲ್ಲ. ಯಾದವ ಸಮಾಜದ ಗೌಡಮುದ್ದಯ್ಯನ ಅಭಿಮಾನಕ್ಕೆ ನಾನೆಂದೂ ಚಿರಾಋಣಿ ಆಗಿದ್ದೇನೆ. ನಾನು ಸಿಎಂ ಆಗೇ ಆಗ್ತೀನಿ ಅನ್ನುವ ವಿಶ್ವಾಸ ನನಗಿಂತ ಹೆಚ್ಚು ಆತನಿಗಿದೆ. ಯಾದವ ಸಮುದಾಯ ನನ್ನನ್ನು ಸಾಕಿ ಬೆಳೆಸಿದೆ ಎಂಬುದಕ್ಕೆ ಈತನೇ ಪ್ರಮುಖ ಸಾಕ್ಷಿ ಎಂದು ಪರಮೇಶ್ವರ ವೇದಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
